ಯೋಗರಾಜ್ ಭಟ್ ಗೆ ಕೀರ್ತಿ ಕಳಶ ಪುರಸ್ಕಾರ: heggaddesamachar.com

ಕೋಟ:ಜನಸೇವಾ ಟ್ರಸ್ಟ್ ಮೂಡು ಗಿಳಿಯಾರು ಪ್ರಸ್ತುತಿಯಲ್ಲಿ ಅಭಿಮತ ಸಂಭ್ರಮ ೨೦೨೦ ಕಾರ್ಯಕ್ರಮ ಫೆ. ೮ರಂದು ಮೂಡುಗಿಳಿಯಾರಿನಲ್ಲಿ ನಡೆಯಲಿದ್ದು, ಈ ಬಾರಿಯ ಕೀರ್ತೀಕಳಶ ಪುರಸ್ಕಾರವನ್ನು ಚಲನಚಿತ್ರ ನಿರ್ದೇಶಕ, ಸಾಹಿತಿ ಯೋಗ್ ರಾಜ್ ಭಟ್ ಗೆ ನೀಡಲಾಗುವುದು ಎಂದು ಅಭಿಮತ ಸಂಭ್ರಮ ಅಧ್ಯಕ್ಷ ಉಳ್ತೂರು ಅರುಣ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಭಟ್ ಅವರ ಜೀವಮಾನದ ಸಾಧನೆ ಗುರುತಿಸಿ ಈ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ. ಅಲ್ಲದೇ ಯೋಗರಾಜ್ ಭಟ್ ಮೂಲತಃ ಉಡುಪಿ ಜಿಲ್ಲೆಯ ಮಂದಾರ್ತಿಯವರು, ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದವರು, ಅವರಿಗೆ ಈ ಪುರಸ್ಕಾರ ಮಾಡುತ್ತಿರುವುದು ನಿಜಕ್ಕೂ ನಮ್ಮೆಲ್ಲರ ಹೆಮ್ಮೆ ಎಂದರು.

ಟೀಮ್ ಅಭಿಮತ ಸಂಚಾಲಕರಾದ ಪ್ರವೀಣ್ ಯಕ್ಷಿಮಠ, ಸಾಂಸ್ಕೃತಿಕ ಚಿಂತಕ ಉದಯ್ ಶೆಟ್ಟಿ ಪಡುಕೆರೆ, ಜನಸೇವಾ ಟ್ರಸ್ಟ್ ಕಾರ್ಯದರ್ಶಿ ಅಶೋಕ್ ಬನ್ನಾಡಿ, ಕೋಶಾಧಿಕಾರಿ ಅರುಣ್ ಶೆಟ್ಟಿ ಪಡುಮನೆ, ಪ್ರಮುಖರಾದ ಕೊತ್ತಾಡಿ ಸಂತೋಷ್ ಕುಮಾರ್ ಶೆಟ್ಟಿ, ಹೈಕಾಡಿ ವಿಜಯ್ ಕುಮಾರ್ ಶೆಟ್ಟಿ, ಕಿರಣ್ ಆಚಾರ್ಯ ಗಿಳಿಯಾರು ಇನ್ನೂ ಮತ್ತಿತರು ಸುದ್ದಿಗೋಷ್ಠಿಯಲ್ಲಿದ್ದರು…