Cinema (ಸಿನಿಮಾ)

ಯಾಕೂಬ್ ಗುಲ್ವಾಡಿ ನಿರ್ದೇಶನದ ” ಟ್ರಿಪಲ್ ತಲಾಖ್” ಲಂಡನ್ ನಲ್ಲಿ ಮೊದಲು ತೆರೆಗೆ:heggaddesamachara.com

triple thalak film
Spread the love

ಮುಸ್ಲಿಂ ಸಮುದಾಯದಲ್ಲಿ ನೀಡುವ ತಲಾಖ್ ಕುರಿತಂತೆ “ಟ್ರಿಪಲ್ ತಲಾಖ್” ಎಂಬ ಸಿನಿಮಾ ತೆರೆ ಕಾಣಲು ತಯಾರಾಗಿದ್ದು, ಮೊದಲ ಪ್ರದರ್ಶನ ಲಂಡನ್ ನಲ್ಲಿ ನಡೆಯಲಿದ್ದು, ಡಿಸೆಂಬರ್ ೮ರಂದು ಚಿತ್ರದ ಪ್ರದರ್ಶನ ಏರ್ಪಡಿಸಲಾಗಿದೆ.

ಈ ಹಿಂದೆ ” ರಿಸರ್ವೇಶನ್ ” ಪ್ರದರ್ಶನಕ್ಕೆ ಬ್ರಿಸ್ಟಲ್‌ ಗೆ ಬಂದಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿಯವರು ಬ್ರಿಸ್ಟಲ್‌ ಗೆ ಮತ್ತೆ ಆಗಮಿಸಲಿದ್ದಾರೆ. ಸಿನೆಮಾ ಪ್ರದರ್ಶನದ ನಂತರ ಬ್ರಿಸ್ಟಲ್‌ ಹಾಗು ನೆರೆಯ ಊರುಗಳಿಂದ ಸಿನಿಮಾ ನೋಡಲು ಬಂದ ಪ್ರೇಕ್ಷಕರ ಜೊತೆ ಯಾಕೂಬ್ ಖಾದರ್ ಅವರು ಸಂವಾದದಲ್ಲಿ ಭಾಗವಹಿಸಲಿದ್ದಾರೆ.

ಕನ್ನಡದ ಪ್ರಾದೇಶಿಕ ಭಾಷೆಗಳಲ್ಲೊಂದಾದ ಬ್ಯಾರಿ ಹಾಗು ಕನ್ನಡ ಭಾಷೆಗಳಲ್ಲಿ ( ಇಂಗ್ಲಿಷ್ ಸಬ್ ಟೈಟಲ್ ಇದೆ) ಚಿತ್ರಿತವಾಗಿರುವ ಸಾಂಸಾರಿಕ ಸಿನೆಮಾ ಇದಾಗಿದ್ದು ಡಾ ಸಾ.ರಾ.ಅಬುಬಕ್ಕರ್ ಅವರ ಕತೆಯನ್ನು ಆಧರಿಸಿದೆ. ಭಾರತದಲ್ಲಿನ ಸಮುದಾಯವೊಂದರಲ್ಲಿ ಪ್ರಸ್ತುತವಾಗಿರುವ ತ್ರಿವಳಿ ತಲಾಖ್ ಸಮಸ್ಯೆ ಹಾಗು ಸುಪ್ರೀಂ ಕೋರ್ಟ್ ನ ಇತ್ತೀಚಿನ ತೀರ್ಪಿನ ಸುತ್ತ ಚಿತ್ರಕತೆ ಸಿನೆಮಾದ ಹೆಣೆಯಲ್ಪಟ್ಟಿದೆ.

ಬ್ರಿಸ್ಟಲ್‌ ನ ಕನ್ನಡ ಸ್ನೇಹಿತರು ಆಯೋಜಿಸುತ್ತಿರುವ ಪ್ರದರ್ಶನ ಇದಾಗಿದೆ. ಸದಭಿರುಚಿಯ ಕನ್ನಡ ಮೂಲದ ಸಿನೆಮಾಗಳನ್ನು ಇಷ್ಟಪಡುವ ಬ್ರಿಸ್ಟಲ್‌ ಹಾಗು ನೆರೆಯ ಊರಿನ ಕನ್ನಡಿಗರು ವಿಶೇಷ ಕಾತರದಿಂದ ಗುಲ್ವಾಡಿ ಟಾಕೀಸ್ ನ ಹೊಸಚಿತ್ರವನ್ನು ನಿರೀಕ್ಷಿಸುತ್ತಿದ್ದಾರೆ.
ಲಂಡನ್ ನಲ್ಲಿ ಮೊದಲ ಪ್ರದರ್ಶನ:

.2017ರಲ್ಲಿ ರಾಷ್ಟ್ರಪ್ರಶಸ್ತಿ (ರಜತಕಮಲ) ಪಡೆದ ಕನ್ನಡ ಚಲನಚಿತ್ರ ‘ ರಿಸರ್ವೇಶನ್” ನಿರ್ಮಿಸಿದ ಗುಲ್ವಾಡಿ ಟಾಕೀಸ್ ಇದೀಗ ” ಟ್ರಿಪಲ್ ತಲಾಖ್- ಕುರಾನ್ ಹೇಳಿಲ್ಲ ” ಚಿತ್ರ ನಿರ್ಮಿಸಿದೆ.
ಇದೇ ಡಿಸಂಬರ್ 8 , ಭಾನುವಾರ ಬೆಳಿಗ್ಗೆ 10 ಗಂಟೆಗೆ ಇಂಗ್ಲೆಂಡಿನ ನೈರುತ್ಯ ಕರಾವಳಿಯ ಊರಾದ ಬ್ರಿಸ್ಟಲ್‌ ನ ಸ್ಕಾಟ್ ಸಿನೆಮಾ ಮಂದಿರದಲ್ಲಿ ಈ ಚಿತ್ರದ ಪ್ರದರ್ಶನ ಇದೆ (51, Northumbria Road, BS9 4HN).

ಕಥೆಯ ಸಾರಾಂಶ :
ಅದೊಂದು ಬ್ಯಾರಿ ಜನಾಂಗ ಇರುವ ಊರು.ಅಲ್ಲೊಂದು ಕುಟುಂಬ,ಹಂಝ, ಫಾತಿಮಾಳಿಗೆ ಎರಡನೇ ಗಂಡ.ಅವಳಿಗೆ ಶಬೀನ ಎಂಬ ಮೊದಲ ಗಂಡನ ಮಗಳಿದ್ದಾಳೆ.ಈಗ ಹಂಝಾನಿಗೂ ಒಂದು ಗಂಡು ಮಗು ಹುಟ್ಟಿದೆ.ಹಂಝ ಲಾರಿ ಡ್ರೈವರ್, ಫಾತಿಮಾ ಬೀಡಿ ಕಟ್ಟುವ ಕೆಲಸ ಮಾಡುತ್ತ ಕಷ್ಟದ ಜೀವನ ಸಾಗಿಸುತ್ತಿದ್ದಾಳೆ. ಅದೊಂದು ದಿನ ಗಂಡ ಕೆಲಸದ ಮೇಲೆ ಗೋವ ಕಡೆ ಹೋಗುತ್ತೇನೆಂದು ಹೋದವನು,ಒಂದು ಘಟನೆಯ ಮೂಲಕ ಮತ್ತೊಂದು ಮದುವೆ ಆಗುತ್ತಾನೆ. ಫಾತಿಮಾಳಿಗೆ ಅಂಚೆ ಮೂಲಕ ತಲಾಖ್ ಪತ್ರ ಕಳಿಸಿ ಕೊಡುತ್ತಾನೆ. ಅದರಿಂದ ಫಾತಿಮ ಆಘಾತಕ್ಕೆ ಒಳಗಾಗುತ್ತಾಳೆ. ಇರುವ ಊರಲ್ಲಿ ಅವಮಾನದ ಬದುಕು ಸಾಗಿಸುವುದು ಕಷ್ಟವೆನಿಸಿ ಊರು ತೊರೆಯುತ್ತಾಳೆ.


ಪರಿಚಯವಿಲ್ಲದ ಊರಿಗೆ ಬಂದ ಫಾತಿಮ ಅಲ್ಲಿ ಪರಿಚಯವಾದ ವಕೀಲರೊಬ್ಬರ ಹೆಂಡತಿ ಮಮ್ತಾಜ್ ಳ ನೆರವಿನ ಮೂಲಕ ಅವರ ಮನೆ ಕೆಲಸದವಳಾಗಿ ನೆಲೆಯೂರುತ್ತಾಳೆ. ಅವರ ಸಹಕಾರದಿಂದ ಹೊಸ ಬದುಕು ಕಟ್ಟಿಕೊಳ್ಳುವಲ್ಲಿ ಯಶ ಸಾಧಿಸುತ್ತಾಳೆ.ಮಗಳು ಲಾ ಪದವಿ ಮಾಡಿ ,ಸ್ನಾತಕೋತ್ತರ ಪದವಿ ಮಾಡುವ ಪ್ರಯತ್ನದಲ್ಲಿರುತ್ತಾಳೆ. ಆ ದಿನಗಳಲ್ಲಿ ಆಕಸ್ಮಿಕ ಘಟನೆಯ ಮೂಲಕ ಪರಿಚಯವಾದ ಹೈದರಾಬಾದ್ ಮೂಲದ ಮುಸ್ತಾಕ್ ಎನ್ನುವ ಹುಡುಗನ ಜೊತೆ ಶಬೀನಳ ಮದುವೆ ಆಗುತ್ತದೆ. ಆ ನಂತರ ಕೆಲ ದಿನಗಳಲ್ಲೇ ಅವನಿಂದಲೂ ಶಬೀನಾಗೆ ತಲಾಖ್ ಆಗುತ್ತದೆ . ಅಂಚೆ, ವಾಟ್ಸಪ್, ಪೋನ್, ಈ ಮೈಲ್ ಈ ತರದ ಒಂದೇ ಬಾರಿ ಮೂರು ಸಾರಿ ಹೇಳುವ “ಟ್ರಿಪಲ್ ತಲಾಖ್” ಗೆ “ಪವಿತ್ರ ಕುರಾನ್” ನಲ್ಲಿ ಅರ್ಥವಿಲ್ಲವೆಂದು ಕಾನೂನಿನ ಮೂಲಕ ಹೋರಾಟ ಮಾಡುವ ಸಂಘರ್ಷಮಯ ಕಥಾನಕವೆ ” ಟ್ರಿಪಲ್ ತಲಾಖ್ ” ಇದೊಂದು ಚಿಂತನ ಶೀಲ ಸಂವೇನಾತ್ಮಕ ಕಥಾವಸ್ತು. ಹ್ರದಯಸ್ಪರ್ಶಿ ದೃಶ್ಯಗಳ ಮೂಲಕ ಕಥಾಹಂದರ ಬಿಚ್ಚಿಕೊಳ್ಳುತ್ತದೆ..

ಚಿತ್ರದ ಮತ್ತು ಚಿತ್ರತಂಡದ ಕಿರು ವಿವರ:
ಕನ್ನಡ ಸಿನಿ ಬಳಗಕ್ಕೆ ಇದೊಂದು ಹೊಸ ಬಗೆಯ ಚಿತ್ರ ಅದುವೆ ಟ್ರಿಪಲ್ ತಲಾಖ್ (ಬ್ಯಾರಿ ಭಾಷೆಯ ಚಲನಚಿತ್ರ)
ನಿರ್ಮಾಣ-ರಾಷ್ಟ್ರ ಪ್ರಶಸ್ತಿ ಪುರಸ್ಕೃತ (ಗುಲ್ವಾಡಿ ಟಾಕೀಸ್)
ಚಿತ್ರಕಥೆ-ಸಂಭಾಷಣೆ-ನಿರ್ದೇಶನ
ಯಾಕೂಬ್ ಖಾದರ್ ಗುಲ್ವಾಡಿ
ಕಥೆ-ನಾಡೋಜ.ಡಾ.ಸಾ. ರಾ ಅಬುಬಕ್ಕರ್
ನಿರ್ಮಾಪಕರು- ನಾರಾಯಣ ಪ್ರಭಾ ಸುವರ್ಣ ಮುಂಬೈ ಮತ್ತು ಯಾಕೂಬ್ ಖಾದರ್ ಗುಲ್ವಾಡಿ
ಛಾಯಾಗ್ರಹಣ-ಪಿ.ವಿ.ಆರ್ ಸ್ವಾಮಿ ಮತ್ತು ಸತೀಶ್ ಕುಮಾರ್
ಎಡಿಟರ್-ಕಲರೀಸ್ಟ್-ಮೋಹನ್ ಎಲ್ ರಂಗ ಕಹಳೆ
ಸೌಂಡ್ ಮಿಕ್ಸಿಂಗ್-ಮುನೀಬ್ ಅಹಮದ್
ಹಿನ್ನೆಲೆ ಸಂಗೀತ ಮತ್ತು ಸೌಂಡ್ ಎಫೆಕ್ಟ್-ಗಿರೀಶ್ ಬಿ.ಎಮ್
ವಸ್ತ್ರವಿನ್ಯಾಸ-ಇಸ್ಮಾಯಿಲ್ ಸರ್ಫುದ್ದೀನ್
ಕಲೆ- ಆಬೀದ್ ಖಾದರ್
ಸಹ ನಿರ್ದೇಶನ-ಪಣಕನಹಳ್ಳಿ ಪ್ರಸನ್ನ ಮತ್ತು ರಿಝ್ವಾನ್ ಗುಲ್ವಾಡಿ
ಕಲಾವಿದರು- ರೂಪ ವರ್ಕಾಡಿ, ನವ್ಯ ಪೂಜಾರಿ, ಬೇಬಿ ಫಹಿಮತುಲ್ ಯುಶ್ರ, ಅಝರ್ ಶಾ, ಮಹಮ್ಮದ್ ಬಡ್ಡೂರ್, ಎಮ್. ಕೆ.ಮಠ, ಅಮೀರ್ ಹಂಝ, ರವಿಕಿರಣ್ ಮುರ್ಡೇಶ್ವರ, ಎ.ಎಸ್. ಎನ್ ಹೆಬ್ಬಾರ್, ಉಮರ್ ಯು.ಹೆಚ್, ಮಾಸ್ಟರ್ ಫಹಾದ್, ನಾರಾಯಣ ಸುವರ್ಣ, ಪ್ರಭಾ ಸುವರ್ಣ….

Leave a Reply

Your email address will not be published. Required fields are marked *