ಯಡಿಯೂರಪ್ಪ ತುಘಲಕ್ ಸರ್ಕಾರ ನಡೆಸುತ್ತಿದ್ದಾರೆ – ಪುಷ್ಫ ಅಮರ್ ನಾಥ್ ಕಿಡಿ: heggaddesamachar.com

ಮಹಿಳಾ ಸಾಂತ್ವನ ಕೇಂದ್ರ, ಮಾತೃಶ್ರೀ ಯೋಜನೆಯನ್ನ ಮುಚ್ಚುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.ಬಿ ಎಸ್ ಯಡಿಯೂರಪ್ಪ ಒಂದು ತುಘಲಕ್ ಸರ್ಕಾರ ನಡೆಸುತ್ತಿದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್ ಬಿಜೆಪಿ ಸರ್ಕಾರದ ವಿರುದ್ದ ಕಿಡಿಕಾರಿದರು.
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ಮಕ್ಕಳು ಮತ್ತು ಮಹಿಳೆಯರಲ್ಲಿ ಅಪೌಷ್ಠಿಕತೆ ಕಾಡುತ್ತಿದೆ.ಇವರ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಕಾಳಜಿ ಇಲ್ಲ. ಶ್ರೀಮಂತ ವರ್ಗಕ್ಕೆ ಮಾತ್ರ ಬಿಜೆಪಿ ಸರ್ಕಾರ ಕಾಳಜಿ ವಹಿಸುತ್ತಿದೆ.ಮೋದಿರವರು
20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಅದರಲ್ಲಿ 60 ಸಾವಿರ ಕೋಟಿ ಮಾತ್ರ ಹಣ ನೀಡುತ್ತಿದ್ದಾರೆ.
ಖಾಸಗೀಕರಣ ಮುಖಾಂತರ
ದೇಶವನ್ನು ಮಾರಾಟ ಮಾಡಲು ಬಿಜೆಪಿ ಹೊರಟಿದೆ. ಮೋದಿರವರು ಎಲ್ಲರ ಅಕೌಂಟಿಗೆ ಹಣ ಹಾಕುತ್ತೇನೆ ಅಂತ ಹೇಳಿದ್ರು.ಇನ್ನೂ ಹಾಕಿಲ್ಲ. ಮೋದಿರವರೆ
ಕಪ್ಪು ಹಣ ಹೊರ ತರುತ್ತೇವೆ ಎಂದು ಹೇಳುತ್ತಾ ಬಂದಿದ್ದೀರಿ.ಈಗ ಕಪ್ಪು ಹಣ ತರುವ ಸಮಯ ಬಂದಿದೆ. ಕರ್ನಾಟಕದಲ್ಲಿ ಹೆಚ್ಚು ಜನ ಬಿಜೆಪಿ ಸಂಸದರು ಆಯ್ಕೆಯಾಗಿ ಹೋಗಿದ್ದಾರೆ.
ತಾಯಿ ನಾಡಿನ ಋಣ ತೀರಿಸಬೇಕು ಅಂತ ನಿಮ್ಮ ಮನಸ್ಸಿನಲ್ಲಿದ್ದರೇ ಕೇಂದ್ರದಿಂದ
ರಾಜ್ಯಕ್ಕೆ ಬರಬೇಕಾದನ್ನ ತಂದುಕೊಡಿ. ಲಾಕ್ ಡೌನ್ ನಿಂದ ಮಹಿಳೆಯರು ಮತ್ತು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಮಹಿಳೆಯರು ಸ್ತ್ರೀಶಕ್ತಿ ಸಂಘಗಳ ಹಾಗೂ ರೈತರ ಸಾಲ ಮನ್ನಾ ಆಗಬೇಕು.
ನರೇಗಾದಲ್ಲಿ 200 ದಿನಗಳ ಕೆಲಸ ಕೊಡಿ.
ಬಡವರಿಗೆ , ರೈತಾಪಿ , ಮದ್ಯಮ ವರ್ಗದ ಹೆಣ್ಣು ಮಕ್ಕಳಿಗೆ ತಿಂಗಳಿಗೆ ಕನಿಷ್ಠ 2 ಸಾವಿರ ಶೀಘ್ರದಲ್ಲಿ ನೀಡಬೇಕೆಂದು ಒತ್ತಾಯಿಸಿದರು.
ಪುಷ್ಪಲತಾ ಚಿಕ್ಕಣ್ಣ,ಪುಷ್ಪವಲ್ಲಿ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.