ಯಡಿಯೂರಪ್ಪನವರೇ ನಿಮ್ಮ ಆಯಸ್ಸು ಇನ್ನು 6 ತಿಂಗಳು ಮಾತ್ರಾ-ಕೆಪಿಸಿಸಿ ವಕ್ತಾರ ಲಕ್ಷಣ್ ಹೇಳಿಕೆ : heggaddesamachar

ಯಡಿಯೂರಪ್ಪ ಅವರೇ ಕೊರೊನಾ ಇಲ್ಲದಿದ್ದರೆ ಈಗಾಗಲೇ ನಿಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸುತ್ತಿದ್ದರು. ನಿಮ್ಮ ಆಯಸ್ಸು ಇನ್ನೂ ಆರು ತಿಂಗಳು ಮಾತ್ರ. ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹೇಳಿಕೆ.
ಪ್ರಧಾನಿ ಪರಿಹಾರ ನಿಧಿಗೆ 1 ಲಕ್ಷ ಕೋಟಿ ರೂ. ಹೆಚ್ಚು ಹಣ ಸಂಗ್ರಹ ಆಗಿರುವ ಬಗ್ಗೆ ಮಾಹಿತಿ ಇದೆ. 60 ಲಕ್ಷ ಮಂದಿ ತಮ್ಮ ಒಂದು ದಿನದ ಸಂಬಳ ನೀಡಿದ್ದಾರೆ.
ಯಾವ ಬ್ಯಾಂಕ್ ನಲ್ಲಿ ಹಣ ಇಟ್ಟಿದ್ದೀರಾ, ಎಷ್ಟು ಹಣ ಸಂಗ್ರಹ ಆಗಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು. ತಿಳಿಸುವವರೆಗೂ ನಾವು ಕೇಳುವುದನ್ನು ಬಿಡುವುದಿಲ್ಲ.
ಸೋನಿಯಾಗಾಂಧಿಯವರ ಅಧಿಕೃತ ಟ್ವಿಟರ್ ಖಾತೆ ಇದಲ್ಲಾ, ಅದು ರಾಷ್ಟ್ರೀಯ ಪಕ್ಷದ ಟ್ವಿಟ್ಟರ್ ಆಗಿದೆ. ಅಲ್ಲದೆ ಟ್ವಿಟರ್ ನಲ್ಲಿ ಮೂರು ಪ್ರಶ್ನೆಗಳನ್ನು ಕೇಳಿದ್ದು, ಪ್ರಧಾನಿ ಕೇರ್ ಫಂಡ್ ಹಣವನ್ನು ಇಲ್ಲಿನ ಕಾರ್ಮಿಕರಿಗಾಗಿ ಬಳಸುತ್ತಿದ್ದೀರಾ, ಅಂತಹ ಹೊರ ದೇಶದಲ್ಲಿರುವ ಭಾರತೀಯರನ್ನು ಕರೆತರಲು ಬಳಸುತ್ತಿದ್ದೀರಾ ಅಥವಾ ರಾಷ್ಟದ ಆರ್ಥಿಕತೆಯನ್ನು ಮೇಲೆತ್ತಲು ಪ್ರಯತ್ನಿಸುತ್ತೀರಾ ಎಂದು ಟ್ವಿಟ್ ಮಾಡಲಾಗಿದೆ.
ಇಷ್ಟಕ್ಕೆ ಪ್ರಕರಣ ದಾಖಲಿಸಿ ಎಫ್ ಐಆರ್ ಹಂತಕ್ಕೆ ಹೋಗುವುದರ ಹಿಂದೆ ಅಮಿತ್ ಷಾ ಹಾಗೂ ಸಂತೋಷ್ ಜಿ ಕೈವಾಡವಿದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕೆಂಬುದು ನನ್ನ ಆಗ್ರವಾಗಿದೆ. ಈ ಬಗ್ಗೆ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇವೆ ಎಂದು ತಿಳಿಸಿದರು. 1 ಲಕ್ಷ ಕೋಟಿಗೂ ಹೆಚ್ಚು ಪ್ರಧಾನ ಮಂತ್ರಿ ಕೇರ್ ಫಂಡ್ ನಲ್ಲಿರುವ ಹಣವನ್ನು ನಾವು ಕೇಳುತ್ತಲೇ ಇರುತ್ತೇವೆ.
ಸೋನಿಯಾಗಾಂಧಿಯವರ ವಿರುದ್ಧ ಎಫ್ ಐಆರ್ ದಾಖಲು ಮಾಡಿ ಹೆದರಿಸುವ ನಿಮ್ಮ ಬೆದರಿಕೆಗೆ ಹೆದರುವ ಪ್ರಶ್ನೆಯೇ ಇಲ್ಲ. ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಕಿಡಿಕಾರಿದರು.