News (ಸುದ್ದಿ)

ಮೈಸೂರು: 4 ಜುಲೈ ‌2020 ಕೇಂದ್ರ ಕಾರಾಗೃಹಕ್ಕೂ ಕಾಲಿಟ್ಟ ಕಿಲ್ಲರ್ ಕೊರೊನಾ : heggaddesamachar

Spread the love

ಮೈಸೂರಿನ ಕೇಂದ್ರ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಖೈದಿಗೆ ಕೊರೋನಾ ಸೋಂಕು.

ವಿಚಾರಣಾಧೀನ ಖೈದಿ ಮೈಸೂರಿನ ವಿಜಯನಗರ ಕೊಲೆ ಪ್ರಕರಣದ ಆರೋಪಿಯಾಗಿದ್ದು ಜೈಲು ಸೇರಿದ್ದಾನೆ. ಕೊಲೆ‌ ಮಾಡಿ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ. ವಿಜಯನಗರ ಪೊಲೀಸರಿಗೆ ಆರೋಪಿ ಶರಣಾಗಿದ್ದನು.
ಬಳಿಕ ಆತನನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಮೂರು ದಿನಗಳ ಹಿಂದೆ ಆರೋಪಿಗೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಆರೋಪಿಗೆ ಕೊರೊನಾ ಇರುವುದು ದೃಢವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಆತನ ಜೊತೆಗಿದ್ದ 20 ಖೈದಿಗಳ ಜೈಲಿನಲ್ಲೇ ಕ್ವಾರಂಟೈನ್ ಮಾಡಲಾಗಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *