News (ಸುದ್ದಿ)

ಮೈಸೂರಿನಲ್ಲಿ ಮೇ 31ರವರೆಗೆ ನಿಷೇಧಾಜ್ಞೆ : heggaddesamachar.com

Spread the love

ಕರೋನಾ ಹರಡುವಿಕೆ ನಿಯಂತ್ರಿಸುವ ಉದ್ದೇಶದಿಂದ ನಗರ ಪೊಲೀಸ್ ಆಯುಕ್ತರು ನಗರದಲ್ಲಿ ಮೇ 31ರವರೆಗೆ ಸೆಕ್ಸನ್ 144 ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ಮೇ 18ರ ಮಧ್ಯರಾತ್ರಿ 12 ಗಂಟೆಯ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಎಲ್ಲಾ ರೀತಿಯ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನಾ, ಸಾಂಸ್ಕøತಿ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೂ ಈ ನಿಷೇಧಾಜ್ಞೆ ಅನ್ವಯಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 7 ರಿಂದ ಸಂಜೆ 7 ವರೆಗೆ ಮಾತ್ರ ವ್ಯಾಪಾರಿ ಮಳಿಗೆ ತೆರೆಯಲು ಆವಕಾಶವಿದ್ದು, ಗ್ರಾಹಕರ ನಡುವೆ 6 ಅಡಿ ಅಂತರವಿರುವಂತೆ ನೋಡಿಕೊಳ್ಳಬೇಕು. ಸಂಜೆ 7 ರಿಂದ ಬೆಳಿಗ್ಗೆ 7 ರ ತನಕ ಯಾರೂ ಕೂಡ ರಸ್ತೆಯಲ್ಲಿ ಓಡಾಡುವಂತಿಲ್ಲ.

ಲಾಕ್‍ಡೌನ್ ಅವಧಿಯ ಪ್ರತಿ ಭಾನುವಾರ ಬೆಳಿಗ್ಗೆ 7 ರಿಂದ ಸಂಜೆ 7 ರ ವರೆಗೆ ಯಾರೂ ರಸ್ತೆಯಲ್ಲಿ ಓಡಾಡುವಂತಿಲ್ಲ. ಅಲ್ಲದೇ ವೆದ್ಯಕೀಯ ಸೇವೆಯನ್ನು ಹೊರೆತುಪಡಿಸಿ ಬೇರೆ ಎಲ್ಲಾ ಸಂಚಾರ, ವ್ಯಾಪಾರವನ್ನು ನಿಷೇಧಿಸಲಾಗಿದೆ. ಯಾವುದೇ ಸಾಮಾಗ್ರಿಗಳನ್ನು ಕೊಳ್ಳಲು ಬರುವ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಇಲ್ಲಾವಾದಲ್ಲಿ ಸಾಮಾಗ್ರಿಯನ್ನು ಅಂಗಡಿಯವರು ನೀಡಬಾರದು. ಕೆಲಸ ಮಾಡುವ ಸ್ಥಳದಲ್ಲಿ ಕಡ್ಡಾಯವಾಗಿ ಶುಚಿತ್ವ, ಸಾರ್ವಜನಿಕ ಅಂತರ ಕಾಯ್ದುಕೊಳ್ಳಬೇಕು. ಈ ಸೂಚನೆಯನ್ನು ಪಾಲಿಸದೆ ಇರುವುದು ಕಂಡುಬಂದಲ್ಲಿ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತರಾದ ಡಾ. ಚಂದ್ರಗುಪ್ತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

www.heggaddesamachar.com

Leave a Reply

Your email address will not be published. Required fields are marked *