News (ಸುದ್ದಿ)
ಮೈಸೂರಿನಲ್ಲಿ ಜನ ಸುರಕ್ಷ ಜೇನೇರಿಕ್ ಮೆಡಿಕಲ್ ಆರಂಭ- ಏನಿದರ ಸ್ಫೆಷಾಲಿಟಿ ಗೊತ್ತಾ!?: heggaddesamachar

ಜೂನ್ 19ರಂದು ವಿವೇಕಾನಂದ ನಗರದಲ್ಲಿ ಜನ ಸುರಕ್ಷ ಜೇನೇರಿಕ್ ಮೆಡಿಕೆಲ್ಸ್ ಆರಂಭವಾಗಲಿದೆ ಎಂದು ಕಾರ್ತಿಕ್ ಗೌಡ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಜನ ಸುರಕ್ಷ ಜೇನೇರಿಕ್ ಮೆಡಿಕೆಲ್ಸ್ ಆರಂಭವಾಗುತ್ತಿದೆ.

ಡಿಸಿಪಿ. ಪ್ರಕಾಶ್ ಗೌಡ ಹಾಗೂ ಲಲಿತಾ ಜಿ ಟಿ ದೇವೇಗೌಡರು ಉದ್ಘಾಟನೆಗೊಳ್ಳಿಲಿದ್ದಾರೆ.ಬಡ ಜನರಿಗೆ ಹೆಚ್ಚು ಉಪಯೋಗವಾಗಲೇ ಎನ್ನುವುದು ನಮ್ಮ ಉದ್ದೇಶವಾಗಿದೆ.ಜೇನೇರಿಕ್ ಮೆಡಿಕಲ್ನಲ್ಲಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಔಷಧಿ ದೊರೆಯಲಿದೆ.

100ರೂ ಇರುವಂತಹ ಔಷಧಿಗಳು ನಮ್ಮಲ್ಲಿ 20 ರೂಗಳಿಗೆ ದೊರೆಯುತ್ತದೆ.ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಿ ಎಂದರು.

ಸುದ್ಧಿಗೋಷ್ಠಿಯಲ್ಲಿ ಜೆ.ಎ.ಎಸ್. ಜೇನೇರಿಕ್ ಮೆಡಿಕಲ್ ನ ಎ.ಜಿ.ಎಂ. ವಿಜಯ್ ಸಿಂಗ್ ರಜಪೂತ್,ಸೌಮ್ಯ ಉಪಸ್ಥಿತರಿದ್ದರು.