News (ಸುದ್ದಿ)

ಮೈಸೂರಿನಲ್ಲಿ ಇ-ಲೈಬ್ರರಿ ಬಳಕೆ ಕುರಿತು ಆನ್-ಲೈನ್ ಮುಖಾಂತರ ತರಬೇತಿ : heggaddesamachar

Spread the love

ಜಿಲ್ಲಾ ತರಬೇತಿ ಸಂಸ್ಥೆ, ಮೈಸೂರು ಮತ್ತು ಗ್ರಂಥಾಲಯ ಇಲಾಖೆ, ಮೈಸೂರು ಇವರ ಸಹಯೋಗದಲ್ಲಿ, ಇಂದು ಮಧ್ಯಾಹ್ನ 3.30 ರಿಂದ 5.00 ಗಂಟೆಯವರೆಗೆ “ಇ-ಆಡಳಿತ, ಡಿಜಿಟಲ್ ಲೈಬ್ರರಿ ಮತ್ತು ಇ-ಲೈಬ್ರರಿ” ಕುರಿತು “ಗೂಗಲ್ ಮೀಟ್” ಅಪ್ಲಿಕೇಷನ್ ಮುಖಾಂತರ ತರಬೇತಿ ಕಾರ್ಯಕ್ರಮ” ವನ್ನು ಆಯೋಜಿಸಲಾಗಿದೆ.

ಈ ತರಬೇತಿ ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಮತ್ತು ಆಸಕ್ತಿಯುಳ್ಳ ಸಾರ್ವಜನಿಕರೂ ಸಹ ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು “ಗೂಗಲ್ ಮೀಟ್” ಅಪ್ಲಿಕೇಷನ್ ಮೀಟಿಂಗ್ ಲಿಂಕ್ ಅನ್ನು ಡೌನ್ಲೋಡ್ ಮಾಡಿಕೊಂಡು, ಇದರ ಪ್ರವೇಶಕ್ಕಾಗಿ, ಲಿಂಕ್ ಪಡೆಯಬಹುದು.

ಈ ಕಾರ್ಯಕ್ರಮದ ಮೂಲಕ ನೀವು ಇರುವ ಸ್ಥಳದಿಂದಲೇ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಇ-ಲೈಬ್ರರಿ ಬಳಕೆ ಮಾಡಬಹುದು ನಿಮಗೆ ಬೇಕಾದ ಮಾಹಿತಿ ಹಾಗೂತಂತ್ರಜ್ಞಾನ ಲಾಭ ಪಡೆದು ಡೌನ್ಲೋಡ್ ಮಾಡಿಕೊಳ್ಳಬಹುದು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ವಿ.ಶಿವರಾಮಯ್ಯ, ಪ್ರಾಚಾರ್ಯರು, ಜಿಲ್ಲಾ ತರಬೇತಿ ಸಂಸ್ಥೆ ಅವರು ಕೋವಿಡ್19 ಇರುವುದರಿಂದ ರಾಜ್ಯದ ವತಿಯಿಂದ “ಇ-ಆಡಳಿತ, ಡಿಜಿಟಲ್ ಲೈಬ್ರರಿ ಮತ್ತು ಇ-ಲೈಬ್ರರಿ” ಕುರಿತು “ಗೂಗಲ್ ಮೀಟ್” ಅಪ್ಲಿಕೇಷನ್ ಮುಖಾಂತರ ತರಬೇತಿ ಕಾರ್ಯಕ್ರಮ ನೀಡಲಾಗುತ್ತಿದ್ದೆ ಸರ್ಕಾರಿ ನೌಕರರು ಕಚೇರಿಗೆ ಹೋಗದೆ ಡಿಜಿಟಲ್ ಲೈಬ್ರರಿ ಮೂಲಕ ಸರ್ಕಾರಿ ಕಾನೂನು ಸಲಹೆ ಮಾಹಿತಿಯನ್ನು ಪಡೆಯಬಹುದು ಈ ಕಾರ್ಯಕ್ರಮದಲ್ಲಿ 250 ಕೂ ಹೆಚ್ಚು ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಡಿದರೆ ಎಂದರು.

ಇಂದಿನ ದಿನಗಳಲ್ಲಿ ಆನ್ ಲೈನ್ ತರಬೇತಿ ಅತಿ ಮುಖ್ಯವಾಗಿದೆ ಕೋವಿಡ್19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರತಿ ಒಬ್ಬರು ಸುರಕ್ಷಿತವಾಗಿ ಇರಲು ಡಿಜಿಟಲ್ ಲೈಬ್ರರಿ ಉಪಯೋಗವಾಗಿದೆ ಡಿಜಿಟಲ್ ಲೈಬ್ರರಿಯಿಂದ ಸಾರ್ವಜನಿಕ ರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಮುಂದಿನ ದಿನಗಳಲ್ಲಿ ಈ ರೀತಿಯ ಕಾರ್ಯಕ್ರಮ ಗಳನ್ನು ಹೆಚ್ಚಾಗಿ ಮಾಡಲಾಗುತ್ತದೆ ಎಂದರು.

ಕೋವಿಡ್19 ಕಾರಣದಿಂದಾಗಿ ನೇರವಾಗಿ ಮಾಡಲು ಸಾಧ್ಯವಿಲ್ಲ ಅದರಿಂದಾಗಿ ಆನ್ ಲೈನ್ ಮೂಲಕ ಡಿಜಿಟಲ್ ಲೈಬ್ರರಿ ತರಬೇತಿ ನೀಡಲಾಗುತ್ತಿದ್ದೆ 2010 ರಲ್ಲಿ ಇ ಗ್ರಂಥಾಲಯ ಆರಂಭಿಸಲಾಗಿದೆ ಈ ತಂತ್ರಜ್ಞಾನ ಬಳಸಿ ಕೊಂಡು ಡಿಜಿಟಲ್ ಲೈಬ್ರರಿ ಮಾಡಿದ್ದೇವೆ ಇ ಲೈಬ್ರರಿ ಯಲ್ಲಿ ಯಾರೇ ಬೇಕಾದರೆ ಕೂಡ ಯಾವುದೇ ಸ್ಥಳದಲ್ಲಿ ಇದ್ದರೂ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಈ ಡಿಜಿಟಲ್ ಲೈಬ್ರರಿ ಬಳಸಬಹುದು ಎಂದರು.

Leave a Reply

Your email address will not be published. Required fields are marked *