ಮೈಮುಲ್ ನೇಮಕಾತಿಯಲ್ಲಿ ಅಕ್ರಮವಾಗಿದೆ, ಆರ್ಥಿಕ ಶಿಸ್ತನ್ನ ಅಳವಡಿಸಿಕೊಳ್ಳಿ – ಸಚಿವ ಹೆಚ್. ವಿಶ್ವನಾಥ್ ಆಗ್ರಹ : heggaddesamachar.com

ಮೈಸೂರು:13 ಮೇ 2020
ಪ್ರಧಾನಿ ಮೋದಿ 20 ಲಕ್ಷ ಕೋಟಿ ಘೋಷಿಸಿದ್ದಾರೆ. ಕೋರೋನಾ ಸಂಕಷ್ಟದಲ್ಲಿರುವರಿಗೆ ಮೋದಿ ಅನುಕೂಲ ಮಾಡಿಕೊಟ್ಟಿದ್ದಾರೆ. ಅದನ್ನ ನಾವು ಸ್ವಾಗತಿಸುತ್ತೆವೆ. ಆರ್ಥಿಕವಾಗಿ ಸಧೃಡರಾಗಲು ಆರ್ಥಿಕ ಶಿಸ್ತನ್ನ ತರಬೇಕಿದೆ. ಕೊರೊನಾದಿಂದಾಗಿ ನಾವು ಸಂಕಷ್ಟಕ್ಕೆ ಸಿಲುಕಿದ್ದೆವೆ. ಇದರಿಂದ ನಾವು ಮೇಲೆಳಬೇಕಾದರೆ ಆರ್ಥಿಕ ಶಿಸ್ತು ಮುಖ್ಯ.
ಸಿಎಂ ಯಡಿಯೂರಪ್ಪರಿಗೆ ಮಾಜಿ ಸಚಿವ ಹೆಚ್.ವಿಶ್ವನಾಥ್ ಮನವಿ. ಅನಾವಶ್ಯಕ ದುಂದುವೆಚ್ವಕ್ಕೆ ಕಡಿವಾಣ ಹಾಕಬೇಕಿದೆ.
೨ ಲಕ್ಷದ ೩೩ ಸಾವಿರ ಕೋಟಿ ಬಜೆಟ್ನಲ್ಲಿ ಸಂಬಳ ಸೇರಿದಂತೆ ೨೧% ನಷ್ಟು ಖರ್ಚು ಹೋಗುತ್ತಿದೆ. ಸರ್ಕಾರಿ ನೌಕರರಿಗೆ ಪಿಂಚಿಣಿ ಹೋಗುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಿದೆ. ಭಾರತೀಯ ಆರ್ಥಿಕ ವ್ಯವಸ್ಥೆ ಸರಿದೂಗಿಸಲು ತ್ಯಾಗದ ಅವಶ್ಯಕತೆ ಇದೆ. ಅಗತ್ಯಕ್ಕೆ ಎಷ್ಟು ಬೇಕಿದೆ ಅಷ್ಟು ಸಂಬಳ, ಪಿಂಚಣಿಯನ್ನ ಪಡೆದುಕೊಂಡು ಜನ ತ್ಯಾಗಕ್ಕೆ ಸಿದ್ದರಾಗಬೇಕಿದೆ. ಸ್ವತಃ ತಾವೇ ತ್ಯಾಗಕ್ಕೆ ಜನ ನಿಲ್ಲಬೇಕಿದೆ. ಮುಖ್ಯಮಂತ್ರಿಗಳಿಂದ ಹಿಡಿದು ಸರ್ಕಾರಿ ನೌಕರರೆಲ್ಲರೂ ತ್ಯಾಗಕ್ಕೆ ಮುಂದಾಗಬೇಕು.
ಇಡೀ ಭಾರತೀಯರು ತ್ಯಾಗಕ್ಕೆ ಮುಂದಾಗಬೇಕು. ಸರಳತೆಗೆ ಹೊಂದಿಕೊಳ್ಳಬೇಕು. ಹುಣಸೂರನ್ನು ಪ್ರತ್ಯೇಕ ಜಿಲ್ಲೆ ವಿಚಾರ.ಹುಣಸೂರು ದಿ. ದೇವರಾಜ ಅರಸ್ ಹೆಸರು ಆಗಬೇಕು. ಇದಕ್ಕಾಗಿ ಉನ್ನತ ಹೋರಾಟ ಸಮಿತಿಯನ್ನೂ ರಚನೆ ಮಾಡ್ತೇವೆ ಯಾಕಾಗಿ ಜಿಲ್ಲೆ ಆಗಬೇಕೂಂತ ಜನರಲ್ಲಿ ಅಭಿಪ್ರಾಯ ಮೂಡಿಸುತ್ತೇವೆ ಗೆದ್ದವರು ಮಾತ್ರ ಜನರಿಗೆ ಉತ್ತರದಾಯಿತ್ವವೇ ಸೋತವರು ಜನಪರ ಹೋರಾಟ ಮಾಡುವಂತಿಲ್ಲವೇ ವಕೀಲ, ಶಾಸಕ, ಸಚಿವ, ಸಂಸದನಾಗಿ ಅನುಭವವಿದೆ ನಾನು ಯಾರು ಹುಣಸೂರು ಪ್ರತ್ಯೇಕ ಜಿಲ್ಲೆ ಮಾಡೋಕೆ ಅಂತಾ ಸಾ.ರಾ.ಮಹೇಶ್ ಪ್ರಶ್ನೆ ಮಾಡಿದ್ದಾರೆ. ಹಾಗಿದ್ರೆ ಕೆ.ಆರ್. ನಗರದ ಸಾಲಿಗ್ರಾಮ ಪ್ರತ್ಯೇಕ ತಾಲೂಕಿಗೆ ಯಾಕೆ ಶಿಫಾರಸು ಮಾಡಿದಿರಿ. ಮೈಸೂರು ಜಿಲ್ಲೆ ಭೌಗೋಳಿಕವಾಗಿ ವಿಶಾಲವಾಗಿದೆ. ಆಡಳಿತ ಚುರುಕಾಗಿಸಲು ಹುಣಸೂರು ಜಿಲ್ಲೆ ಮಾಡಬೇಕಾಗಿದೆ ಇಂತಹ ಪ್ರಯತ್ನಕ್ಕೆ ಮಾಜಿ ಸಚಿವರಾದ ನೀವು ಸಹಕಾರ ಕೊಡಬೇಕು ಸಾ.ರಾ. ಮಹೇಶ್ ಗೆ ಎಚ್. ವಿಶ್ವನಾಥ್ ಟಾಂಗ್ , ಒಂದು ವರ್ಷದ ಬುಡಕಟ್ಟು ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಣೆ.
ಮೈಮುಲ್ ನೇಮಕಾತಿಯಲ್ಲಿ ಅಕ್ರಮ ಆಗಿದೆ ಸಾ.ರಾ. ಮಹೇಶ್ ವಿಚಾರ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಜಿಲ್ಲಾ ಸಚಿವರು ಕೂಡ ಈ ವಿಚಾರದ ಬಗ್ಗೆ ಗಮನ ಹರಿಸಲಿ. ಸರ್ಕಾರ ಸೂಕ್ತ ತನಿಖೆ ಮೂಲಕ ಅಕ್ರಮ ನಡೆದಿದೆ ಎಂಬ ಆರೋಪದ ಗೊಂದಲ ನಿವಾರಿಸಬೇಕು. ಮೈಸೂರಿನಲ್ಲಿ ಮಾಜಿ ಸಚಿವ ಹೆಚ್.ವಿಶ್ವನಾಥ್ ಸುದ್ದಿಗೋಷ್ಟಿಯಲ್ಲಿ ಹೇಳಿಕೆ.