Literature (ಸಾಹಿತ್ಯ)

ಮೈನವಿರೇಳಿಸುವ  ಮಲ್ಲಕಂಬ  ಖೇಲೋ ಇಂಡಿಯಾ ದಲ್ಲಿ ಸೇರ್ಪಡೆ : heggaddesamachar

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ     

  ಭಾರತದ ಅತ್ಯಂತ ಪ್ರಾಚೀನ ಸಾಂಪ್ರದಾಯಿಕ ಕ್ರೀಡೆ ಗಳಲ್ಲಿ ಒಂದಾದ ಮೈನವಿರೇಳಿಸುವ ಮಲ್ಲಕಂಬದಲ್ಲಿ  ಜನಸಾಮಾನ್ಯರಿಗೆ ಆಸಕ್ತಿ ಹೆಚ್ಚುತ್ತಿದ್ದು ಸ್ಥಳೀಯವಾಗಿ ಪರಿಚಯಿಸಿ ತರಬೇತಿ ನೀಡಲಾಗುತ್ತಿದೆ.  ದೇಹಕ್ಕೆ ಉತ್ತಮ ವ್ಯಾಯಾಮ ನೀಡುವ ದೇಸಿಕ್ರೀಡೆ ನಶಿಸಿ ಇತಿಹಾಸದ ಪುಟ ಸೇರುವ ಹಂತ ತಲುಪದಿರಲಿ ಎಂದು ಇತರ ಕ್ರೀಡೆಗಳ ಅಬ್ಬರದಲ್ಲಿ ಮಲ್ಲಕಂಬ ನಶಿಸಿ ಹೋಗದಂತೆ ಕ್ರೀಡಾ ಪಟುಗಳು ಶ್ರಮಿಸುತ್ತಿರುವುದು ಆಶಾದಾಯಕ ಬೆಳವಣಿಗೆ. ಹಿಂದಿನ ಯಾವುದೇ ಪರಂಪರಾಗತ ಕ್ರೀಡೆಗಳು ಬದಲಾದ ಕಾಲಘಟ್ಟದ ತುಳಿತಕ್ಕೆಸಿಕ್ಕಿಯು ಉಳಿದು ಕೊಂಡಿರುವುದೇ ಹೆಚ್ಚೆನ್ನ ಬಹುದು.ಕೆಲವೊಮ್ಮೆ ತಮ್ಮ ಮೂಲ ಸ್ವರೂಪದಲ್ಲೂ ಸ್ವಲ್ಪ ಪ್ರಮಾಣದಲ್ಲಿ ವ್ಯತ್ಯಾಸಗೊಂಡು ಪ್ರದರ್ಶನ ಗೊಳ್ಳುವುದು ಇದೆ. ಆದರೂ ಮಲ್ಲಕಂಬ ಕ್ರೀಡೆ ಉಳಿಸಲು ಜನ ಪ್ರಯತ್ನಿಸುತ್ತಿರುವುದಕ್ಕೂ ಅಭಿಮಾನ ಪಡೋಣ.ಹೆಮ್ಮೆ ಯಿಂದ ಮಲ್ಲಕಂಬ ಸ್ಪರ್ಧೆ ನೋಡಿ ಚಪ್ಪಾಳೆ ಹಾಕುವ ಸುಂದರ ಅವಕಶವೊಂದು ಕೂಡಿಬಂದಿದೆ.

      ಕೇಂದ್ರ ಸರಕಾರ ಮಲ್ಲ ಕಂಬವನ್ನು ಖೆಲೋ ಇಂಡಿಯಾ ಆಟದಲ್ಲಿ ಸೇರಿಸಿ  ಆಟಗಾರರಲ್ಲಿ ಹೊಸ ಬರವಸೆ ಸಂತಸ ಹಾಗೂ ಸ್ಪೂರ್ತಿ ತುಂಬಿದೆ. ಮಲ್ಲಕಂಬ ಹಾಗೂ ಕಳರಿಪಯಟ್ಟು,ಪಂಜಾಬಿನ ಗತಕಾ, ಮಣಿಪುರದ ಥಾಂಗ್ ತ್ ಸಹಿತ ನಾಲ್ಕು ದೇಶಿ ಕ್ರೀಡೆ ಗಳಿಗೆ ಕ್ರೀಡಾ ಸಚಿವಾಲಯ 2021ರ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಒಪ್ಪಿಗೆ ನೀಡಿದೆ. ಮುಂದಿನ ವರ್ಷದಲ್ಲಿ ಹರ್ಯಾಣದಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಯುತ್ ಗೇಮ್ಸ್ ನಲ್ಲಿ ಈ ಸ್ಥಳೀಯ ಕ್ರೀಡಾ ಕೌಶಲ್ಯ ಪ್ರೇಕ್ಷಕರಿಗೆ ನೋಡಸಿಗಲಿದೆ.

 ಮಲ್ಲಕಂಬ ಮರಾಠಪೇಶ್ವಯರ ಆಸ್ಥಾನದಲ್ಲಿ ರಾಜ ಪುರೋಹಿತ ರಾಗಿದ್ದ  ಶ್ರೀ ಗುರುದಾದಾ ದೇವಧರ್ ಬಾಳಂಭಟ್ಟರು ಮಲ್ಲಕಂಬವನ್ನು ಮೊದಲ ಬಾರಿಗೆ ಪ್ರಾರಂಬಿಸಿದರು ಎನ್ನಲಾಗುತ್ತದೆ. ಮಲ್ಲ ಎಂದರೆ ಕುಸ್ತಿ ಪಟು ಕಂಬ ಎಂದರೆ ಕೋಲು ಒಟ್ಟಿಗೆ ಮಲ್ಲ ಕಂಬ ಎಂದರೆ ಕುಸ್ತಿಕಂಬ.ಮಲ್ಲಕಂಬದ ಆಸನದ ಹೆಸರುಗಳು ಮರಾಠಿ ಭಾಷೆಯಲ್ಲಿದ್ದು ಇದರಲ್ಲಿ ಸಲಾಮ, ಧಸರಂಗ,ನಿಕ್ಕಿಕಪ್, ಬಹಿರಂಗ ಹೀಗೆ ವಿವಿಧ ಆಸನಗಳಿವೆ. ಮಲ್ಲಕಂಬ ಮಧ್ಯ ಪ್ರದೇಶದ ರಾಜ್ಯ ಕ್ರೀಡೆ.
 ಮಲ್ಲಕಂಬ ಪಟುಗಳ ಕಸರತ್ತು ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತದೆ. ಮಲ್ಲಕಂಬ ಹಾಗೂ ಮಲ್ಲ ಹಗ್ಗ ಎಂಬ ಎರಡು ವಿವಿಧ ಕ್ರೀಡೆಗಳಿದ್ದು. ಮಲ್ಲಕಂಬ ದೈಹಿಕ ಕಸರತ್ತಿನ ಪ್ರದರ್ಶನವಾದರೆ ಮಲ್ಲ ಹಗ್ಗ ಮೇಲಿನಿಂದ ನೇತುಹಾಕಿದ ಹಗ್ಗವನ್ನು ಯಾವ ಆಧಾರವು ಇಲ್ಲದೆ ಏರಿ ವಿವಿಧ ಆಸನಗಳನ್ನು ಪ್ರದರ್ಶಿಸುವುದೇ ಮಲ್ಲಹಗ್ಗ. ಈ ಕ್ರೀಡೆಯಲ್ಲಿ ಪಟುಗಳು ಎಲ್ಲಿಯಾದರೂ ಒಂದು ಕ್ಷಣ ಅಜಾಗುರುಕತೆಗೆ ಒಳಗಾದರೂ ಅನಾಹುತ ಕಟ್ಟಿಟ್ಟ ಬುತ್ತಿ. ಸೂಕ್ಷ್ಮವಾಗಿದ್ದು ಜಾಣ್ಮೆಯನ್ನು ಕ್ರೀಡಾಪಟುಗಳು ಹೊಂದಿರಬೇಕಾಗುತ್ತದೆ.

     ಹರಳೆಣ್ಣೆ ಹಾಕಿದ ನಯವಾದ ಕಂಬ ಹತ್ತಿ ವಿವಿಧ ದಿಕ್ಕಿನಲ್ಲಿ ನಿರ್ದಿಷ್ಟ ಭಂಗಿಯಲ್ಲಿ ತಮ್ಮ ಕಸರತನ್ನು ಮಾಡುತ್ತಾರೆ. ಇದು ಸಮೂಹ ಹಾಗೂ ಏಕವ್ಯಕ್ತಿ ಸ್ಪರ್ಧೆ  ಆಗಿ ಪ್ರದರ್ಶಿಸುತ್ತಾರೆ. ನೋಡುಗರಿಗೆ ಕುತೂಹಲ, ರೋಮಾಂಚನ, ಎದೆ ದಸ್ಕಕ್ಕೆನ್ನುವ ಆಟ. ಜಿಮ್ನಾಸ್ನಾಕ್ ಯೋಗ ಭಂಗಿ ಹೆಚ್ಚಾಗಿದ್ದು ಕಂಬದ ಎತ್ತರ 250 ರಿಂದ 290 ಸೆಂಮೀ ಇರುವ ಮರದ ಕಂಬದೊಂದಿಗಿನ ಪ್ರದರ್ಶನ ನೋಡುಗರಲ್ಲಿ ಭಯಭಿತಿ ಹುಟ್ಟಿಸುವಂತೆ ಮಾಡುತ್ತದೆ.ಕಂಬವನ್ನು ಹಿಡಿದು ನೇತಾಡುತ್ತಾ ಮಾಡುವ ವ್ಯಾಯಾಮ ಮಲ್ಲಕಂಬದ ಒಂದು ಅಂಗವಾಗಿದೆ.
            ಒಬ್ಬೊಬ್ಬರಾಗಿ  ಮಲ್ಲಕಂಬ ಏರಿ ನಕ್ಷತ್ರಾಕಾರ, ವೃತ್ತಾಕಾರದಲ್ಲಿ ಬಾಗಿನಿಂತುಪಟಪಟನೆ  ಕೆಲವರು ಮೇಲೆ ಏರಿ ವಿವಿಧ ಆಸನದಲ್ಲಿ ಆಸಿನರಾಗಿ ನಾಜೂಕಾದ ಕಂಬದಲ್ಲಿ ಕುಳಿತ, ನಿಂತ, ಮಲಗಿದ  ಹಲವು ಆಸನಗಳನ್ನು ಪ್ರದರ್ಶಿಸಿ ಹಾಗೆ ಹಗ್ಗದಲ್ಲಿ ಸರಸರನೆ ಮೇಲೆರಿ ಇಳಿಯುತ್ತಾ ನೋಡುಗರಿಗೆ ಆಶ್ಚರ್ಯ ಹುಟ್ಟಿಸಿದರು ಇಲ್ಲಿ  ನೋಡಸಿಗುವ ದೃಶ್ಯಗಳು ಅವಿಸ್ಮರಣೀಯ. ಮೆಲುಕು ಹಾಕುವಂತಹದ್ದು. ಎಣ್ಣೆ ಹಚ್ಚಿದ ಕಂಬದಲ್ಲಿ ಹೆಚ್ಚಿನ ಆದಾರವಿಲ್ಲದೆ ಕೈಕಾಲು ಗಾಳಿಯಲ್ಲಿ ಚಾಚಿ ತಮ್ಮ ಸಾಹಸ ಭಂಗಿ ಪ್ರದರ್ಶಿಸುವ ಅವಕಾಶವಿದ್ದು ಇಲ್ಲಿ ಹಿರಿಯ ಕಿರಿಯರು ಸಾಹಸಮಯ ದೃಶ್ಯ ಮಾಡುವುದನ್ನು ನೋಡುವಾಗಲೇ ಎದೆದಸ್ಕ ಎನ್ನಲಾಗುತ್ತದೆ.

ಸಮತೋಲನವನ್ನು ಕಾಯ್ದು ಕೊಳ್ಳಬೇಕಾದ ಚಾಕಚಕತ್ಯೆಯ ಕ್ರೀಡೆ. ಮಲ್ಲಕಂಬ ಪ್ರದರ್ಶನ ನಡೆವಾಗ ಇದನ್ನೆಲ್ಲಾ ಕಣ್ತುಂಬಿ ಕೊಳ್ಳಲು ಕಣ್ಣು ರಪ್ಪೆ ಮುಚ್ಚಿ ತೆರೆಯುವುದರೊಳಗೆ ಒಂದು ಭಂಗಿಯಿಂದ ಇನ್ನೊಂದು ಭಂಗಿಗೆ ತಮ್ಮನ್ನು ಹೊಂದಿಸಿಕೊಳ್ಳುತ್ತಾರೆ. ಮಲ್ಲಕಂಬ ನೋಡುವಾಗ ಯೋಗಾಸನದ ಎಲ್ಲಾ ಭಂಗಗಳನ್ನು ತೋರ್ಪಡಿಸುವ ಹಲವು ಆಸನಗಳಿವೆ.  ಯೋಗಾಸನ, ಚಕ್ರಾಸನ, ಶವಾಸನ, ತ್ರಿಕೋನಾಸನ, ಶಿರ್ಷಾಸನ ನಿದ್ರಾಸನ, ಧ್ಯಾನ ಆಸನಗಳು ಹೆಚ್ಚಾಗಿ ಮಲ್ಲ ಕಂಬದಲ್ಲಿ ಕಾಣಸಿಗುತ್ತವೆ. ಚುರುಕಿನ ಸಾಹಸಮಯ ಕ್ರೀಡೆಯಿದು. ಈ ಪ್ರದರ್ಶನ ನೋಡುವಾಗ ಕಣ್ಣು, ಮನಸ್ಸು, ಕಿವಿಗಳು ಏಕಕಾಲದಲ್ಲಿ ತೆರೆದುಕೊಳ್ಳ ಬೇಕಾಗುತ್ತದೆ.

       ಇತಿಹಾಸದ ಪುಟ ಸೇರುತ್ತದೋ ಎಂಬ ಬೀತಿಯಲ್ಲಿದ್ದ ಮಲ್ಲಕಂಬ ಕ್ರೀಡೆಯ ಹಿಂದಿನ ತಂತ್ರಗಳನ್ನು, ಕಲೆಗಳ ನಿಜ ಸಮಸ್ಯೆ ಕಲಾವಿದರ ಸ್ಥಿತಿ ಗತಿ ಗಳು ಅವರ ಆತಂಕಗಳೇನು ಎನ್ನುವುದನ್ನು ಸರಕಾರ ಗಮನಿಸ ಬೇಕಾಗಿದೆ. ಯುವ ಪೀಳಿಗೆಯನ್ನು ಈ ಕಲೆಯತ್ತಾ ಆಕರ್ಷತರನ್ನಾಗಿಸಲು ಖೆಲೋ ಇಂಡಿಯಾ ಆಟದಲ್ಲಿ ಸೇರಿಸಿದ ಮಲ್ಲಕಂಬ ಸೇರಿಸಿರುವುದು ಸ್ವಾಗತಕರ.ಸಮೃದ್ಧವಾದ ಸಂಸ್ಕೃತಿಯನ್ನು ಹೊಂದಿದ ಇಂತಹ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿ ಯುವಪಟುಗಳಿಗೆ  ಗ್ರಾಮಿಣ ಶೈಲಿಯ ಕ್ರೀಡೆಗಳು ಸೇರಿದಂತೆ ಸಂಸ್ಕೃತಿಯ ನ್ನು  ಉತ್ತೇಜೀಸಲು ಮಲ್ಲಕಂಬ ಮಕ್ಕಳಿಗೆ ಕಲಿಸುವ ಅಗತ್ಯವಿದೆ. ಕೆಲವರು ಹವ್ಯಾಸಕ್ಕಾಗಿ ಮತ್ತೆ ಕೆಲವರು ವೃತ್ತಿಯಾಗಿ ಸ್ವೀಕರಿಸಿದವರು ಇದ್ದಾರೆ. ಮಲ್ಲಕಂಬ ಕ್ರೀಡೆಯ ಬಗ್ಗೆ ಅನೇಕ ಗ್ರಂಥಗಳಲ್ಲಿ ಉಲ್ಲೇಖವಿದೆ.

      ವಿದೇಶೀ ಕ್ರೀಡೆಗಳ ಎದುರು ದೇಶಿ ಕೀಡೆಗಳ ಹಾದಿಯಲ್ಲಿ ಅದೆಷ್ಟು ಕಲ್ಲು ಮುಳ್ಳುಗಳು, ತಗ್ಗು, ದಿನ್ನೆಗಳಿದ್ದರು ಛಲಬಿಡದೆ ಮುಂದೆ ಹೆಜ್ಜೆ ಹಾಕುತ್ತಾ ಮುಂಬೈಯಲ್ಲಿ ಚೊಚ್ಚಲ ವಿಶ್ವಮಟ್ಟದ ಚಾಂಪಿಯನ್ ಶಿಪ್ ಅತ್ಯಂತ ಯಶಸ್ವಿಯಾಗಿ 2019 ರಲ್ಲಿ ನಡೆದಿದೆ.  14 ರಾಷ್ಟ್ರಗಳು ಈ ಸ್ಪರ್ಧೆ ಯಲ್ಲಿ ಭಾಗವಹಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮುಂದಿನ ವರ್ಷದಿಂದ ನಮ್ಮ ದೇಶದಲ್ಲಿ ಖೆಲೋ ಇಂಡಿಯಾದಲ್ಲಿ ಮಲ್ಲಕಂಬ ಸೇರ್ಪಡೆಗೊಂಡು ಇತಿಹಾಸ ರಚಿಸುವಂತಾಗಲಿದೆ.

Leave a Reply

Your email address will not be published. Required fields are marked *