News (ಸುದ್ದಿ)

ಮೇ 3, ಪತ್ರಿಕಾ ಸ್ವಾತಂತ್ರ್ಯ ಕ್ಕೆ ಈ ದಿನ ವಿಶೇಷ : heggaddesamchar.com

Spread the love

ಪತ್ರಿಕೋದ್ಯಮ ಜನ ಮಿಡಿತಗಳ ಪ್ರತಿಧ್ವನಿಯಾಗಿದ್ದು, ಹಲವಾರು ವಿಷಯ ಪ್ರಸ್ತಾಪಗಳು ಪತ್ರಿಕೆಗಳ ಮೂಲಕ ರಾಜಕೀಯ, ಶಿಕ್ಷಣ, ಪ್ರಸ್ತುತ ಸ್ಥಿತಿಗತಿಗಳ ಅನಾವರಣ, ಇವುಗಳ ಕುರಿತಂತೆ ಬರಹದ ಮೂಲಕ ವ್ಯಕ್ತಪಡಿಸಿದರೆ ಅದು ಪರಿಣಾಮಕಾರಿಯಾಗಿದ್ದು ಹಲವಾರು ಭಾರಿ.
ಅಲ್ಲದೇ ಅದೆಷ್ಟೋ ಲೇಖನಗಳು ಬರಹಗಳು ಲೇಖಕರ ಹಾಗೂ ಬರಹಗಾರರಿಗೆ ಸವಾಲಾಗಿ ಅವರ ಜೀವಕ್ಕೆ ಬೆದರಿಕೆಯೂ ವೈಯುಕ್ತಿಕ ಜೀವನಕ್ಕೆ ಕುತ್ತಾಗಿ ಕಾಣುವುದು, ಪತ್ರಿಕೋದ್ಯಮದವರಿಗೆ ಒಂದು ದೊಡ್ಡ ಸವಾಲೇ ಸರಿ!


ಪ್ರತಿವರ್ಷ ಒಂದು ನಿಗದಿತ ಪ್ರದೇಶದಲ್ಲಿ ಮಾಧ್ಯಮದ ಗಣ್ಯರು, ಪತ್ರಿಕಾ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಸಂಸ್ಥೆಗಳು ಮತ್ತು ವಿಶ್ವಸಂಸ್ಥೆಯ ಇತರ ಉಪಸಂಸ್ಥೆಗಳ ಅಧಿಕಾರಿಗಳ ಸಮ್ಮೇಳನವನ್ನು ಈ ದಿನ (ಮೇ 03) ಮಾಡಲಾಗುತ್ತದೆ.
ಹಾಗಾಗಿ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಪ್ರತಿಧ್ವನಿಯಾಗಿ ಪತ್ರಿಕೋದ್ಯಮ ಮಹತ್ತರವಾದ ಪಾತ್ರವಹಿಸುತ್ತದೆ.
ವಿಶ್ವ ಪತ್ರಿಕಾ ಸ್ವಾತಂತ್ರ್ಯ ವಿಶ್ವದೆಲ್ಲೆಡೆ ಜನಮಾನಸದ ಪ್ರತಿಧ್ವನಿಯಾಗಲಿ, ಕುತಂತ್ರಗಳು ಹಾಗೂ ಪರಾತಂತ್ರಗಳಿಗೆ ಅವಕಾಶ ಕಲ್ಪಿಸದಿರೋಣ.

Leave a Reply

Your email address will not be published. Required fields are marked *