ಮೃಗಾಲಯದ ಪ್ರಾಣಿಗಳನ್ನೇ ದತ್ತು ಪಡೆದು ಪ್ರಾಣಿ ಪ್ರೀತಿ ಮೆರೆದ ಮಕ್ಕಳು:heggaddesamachar.com

ನವಿಲಿನೊಡತಿಯಾದ ಪುಟ್ಟ ಪೋರಿ: ಪತ್ರಿಕೆಗಳಲ್ಲಿ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದ ಸ್ಟಾರ್ ನಟರು ಹೆಚ್ಚಾಗಿ ಸುದ್ದಿಯಾಗುವುದು ನೋಡಿದ್ದೇವೆ.
ಅದರೆ ಒಂದು ಪುಟಾಣಿ ಈಗ ನವಿಲಿನೊಡತಿ…ಅದು ಕೂಡ ತನ್ನಲ್ಲಿದ್ದ ಪಾಕೆಟ್ ಮನಿಯನ್ನು ಜೋಡಿಸಿ ಜೋಡಿಸಿ… ಇದು ಎಲ್ಲರೂ ಅಶ್ಚರ್ಯಪಡುವಂತೆ ಕಂಡರೂ ಹೌದು!…
ಅನುಪಮ ಹಾಗೂ ಪಂಚಾಕ್ಷರಿ ದಂಪತಿಗಳ ಸುಪುತ್ರಿ ಪುಟಾಣಿ ದಿತ್ಯ (12) ಅವರು ಮೈಸೂರು ಮೃಗಾಲಯದ “ಬ್ಲಾಕ್ ಬಕ್ ನವಿಲು” ಅನ್ನು ದತ್ತು ಪಡೆಯುವ ಮೂಲಕ ಮೈಸೂರು ಉಸ್ತುವಾರಿ ಸಚಿವ ಹಾಗೂ ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ಅವರಿಗೆ ಐದುಸಾವಿರದ ಚೆಕ್ ನೀಡುವುದರೊಂದಿಗೆ ಒಂದು ವರುಷಕ್ಕೆ ನವಿಲನ್ನು ತಮ್ಮದಾಗಿಸಿಕೊಂಡರು. ಈಕೆ ಪ್ರತಿ ವರುಷ ತನ್ನ ಜನುಮದಿನವನ್ನು ವಿಶೇಷವಾಗಿ ಆಚರಿಸಿಕೊಳ್ಳುತ್ತಿದ್ದಳಂತೆ ಆದರೆಈ ಬಾರಿ ಕೊರೋನಾ ವೈರಸ್ ಸೋಂಕಿನ ಪರಿಣಾಮ ನವಿಲನ್ನು ದತ್ತು ಪಡೆದಿರುವುದಾಗಿ ದಿತ್ಯ ಅವರು ತಿಳಿಸಿದ್ದಾರೆ.
ಇವಳ ಕೆಲಸ ಪ್ರೇರಣೆ ಎಂಬಂತೆ ಮತ್ತಿಬ್ಬರು ಪುಟ್ಟ ಮಕ್ಕಳು, ಐದನೇ ವಯಸ್ಸಿನ ದೈವಿಕ ಎಸ್ ಆರಾಧ್ಯ ಮತ್ತು ಒಂದುವರೆ ವಯಸ್ಸಿನ ವಿದ್ವಿ ತನ್ಮಯಿ ಇವರು ಕೂಡಾ ಆಮೆ ಮತ್ತು ನವಿಲನ್ನು ದತ್ತು ಪಡೆದಿದ್ದಾರೆ.
ಪತ್ರಿಕೆಯಲ್ಲಿ ಬಿತ್ತರಿಸಲಾಗಿದ್ದ ಸೋಮಶೇಖರ್ ಆನೆ ದತ್ತು ಸ್ವೀಕರಿಸಿದ್ದರಿಂದ ಇದು ಈಗ ಪ್ರೇರಣೆ ಆಯಿತು ಅಂತಾರೆ ದಿತ್ಯ ಅವರ ತಾಯಿ ಅನುಪಮ.
ಏನೇ ಆಗಲಿ ಪ್ರಾಣಿ ಪಕ್ಷಿಸಂಕುಲಗಳ ಉಳಿವಿಗಾಗಿ, ಇವರ ಈ ನಿರ್ಧಾರ ಎಲ್ಲರಿಗೂ ಪ್ರೇರಕವಾಗಲಿ ಎಂಬುದು ನಮ್ಮ ಆಶಯ…
ರಿ: ಹೆಗ್ಗದ್ದೆ ಸಮಾಚಾರ್.ಕಾಮ್
