ಮುತ್ತಿನ ನಗರಿಯಲ್ಲೊಂದು  ಬಳೆ ಬಜಾರ್ : heggaddesamachar

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ    

         ಮುತ್ತಿನ ನಗರಿ  ಹೈದರಾಬಾದ್ ಎಂದಾಕ್ಷಣ ನೆನಪಾಗುವುದು ಚಾರ್ ಮಿನಾರ್, ರಾಮೋಜಿ  ಫಿಲ್ಮ್ ಸಿಟಿ ,ಹೈದರಾಬಾದ್ ಬಿರಿಯಾನಿ ಅಲ್ಲದೇ  ಹೈದರಾಬಾದ್‌ನ ಅರಗಿನ ಬಳೆಗಳು ಅಷ್ಟೇ ಪ್ರಸಿದ್ಧವೆಂದು ಕೇಳಿದ್ದೆ. ಆದರೆ ನಿಜಾಮರ ನಗರಿಯಲ್ಲೊಂದು ಪ್ರಖ್ಯಾತ ಬಳೇಗಳದ್ದೇ  ಬೀಡಿದೆ  ಎಂದು ‌ಕೇಳಿ ಅಲ್ಲಿನ ವಿಶಾಲವಾದ ‌ರಸ್ತೆಯಲ್ಲಿ ಹೊರಟೆ  ಬಳೆಗಳದ್ದೆ  ಮಾರುಕಟ್ಟೆ, ದೊಡ್ಡ ಸಣ್ಣ ಅಂಗಡಿಗಳು  ಸಾಲು ಸಾಲಾಗಿದ್ದ   ಎಲ್ಲಾ ‌ಕಡೆ  ಮಹಿಳೆಯರೆ  ತುಂಬಿದ್ದರು  ಯಾವ ಅಂಗಡಿ  ಒಳಗೆ ಹೋಗಲಿ  ಎಲ್ಲಿ ಯಾವ‌ ಬಳೆ   ನೋಡಲಿ ಎಂಬ  ಗೊಂದಲ ಒಮ್ಮೆಗೆ  ಆವರಿಸಿತು . ಬಳೆ ಅಂಗಡಿ ‌ಒಳಗಡೆ ಲೆಕ್ಕ ವಿಲ್ಲದಷ್ಟು ಸಂಖ್ಯೆಯಲ್ಲಿ  ಕಿಲ‌ಕಿಲ‌, ನಳ  ನಳಿಸುವ ಮೋಹಕ ಬಳೆಗಳ‌ ಅಟ್ಟಿ  ರಾಶಿ ರಾಶಿಯಲ್ಲಿತ್ತು. ಬಳೆಯ ಘಲ್ ಘಲ್ ನಿನಾದ‌ ಆಧುನಿಕ   ಜಗದ  ಸದ್ದುಗದ್ದಲದಲ್ಲಿ ಅಲ್ಲಲ್ಲಿ  ಅಡಗಿದರು  ತನ್ನ  ಅಸ್ತಿತ್ವವನ್ನು  ಇನ್ನೂ ಉಳಿಸಿಕೊಂಡಿದೆ ಎನ್ನುವುದು  ಸಮಾಧನಕರ ವಿಚಾರ. ಕಾಲ ಬದಲಾದಂತೆ  ಹಳೆ ಮಾದರಿಯ ಬಳೆ ಹೊಸ ವಿನ್ಯಾಸದಲ್ಲಿ ಮಾರುಕಟ್ಟೆಗೆ ಬರುತ್ತಿರುತ್ತದೆ.ಬದಲಾಗುವ ಸ್ವಭಾವಕ್ಕೆ ತಕ್ಕಂತೆ ಮಹಿಳೆಯರ ಫ್ಯಾಷನ್ ಕೂಡ ಬದಲಾಗುತ್ತದೆ.


         ಸಾಕಷ್ಟು ಪ್ರಚಾರದಲ್ಲಿರುವ  ಚೂಡಿಬಜಾರ್ ಅಥವಾ ಬಳೆ‌ಮಾರುಕಟ್ಟೆ  ರಾಜ ಮಹಾರಾಜರ ಕಾಲದಿಂದಲೂ ಅಂದರೆ  ಕುತುಬ್ ಶಾಹಿ ಹಾಗೂ ನಿಜಾಮರ ಕಾಲದಿಂದಲೂ ಬಳೆ ವ್ಯಾಪಾರಕ್ಕೆ  ಪ್ರಖ್ಯಾತ ವಾಗಿದ್ದು. ಇಲ್ಲಿನ ವಿಶೇಷ ವೆಂದರೆ ಯಾವುದೇ ವಾಹನಗಳಿಗೆ ಈ ಮಾರುಕಟ್ಟೆ ಒಳಗೆ ಪ್ರವೇಶವಿಲ್ಲ . ಕಾಲ್ನಡಿಗೆಯಲ್ಲೆ ಸಾಗಬೇಕು.‌ಹೈದರಾಬಾದಿನ ಅರಸು ಮನೆತನದ ಹೆಂಗಸರು ಈ ಅರಗಿನ ಬಳೆಗಳಿಗೆ ವಜ್ರ ವೈಢೂರ್ಯಗಳನ್ನು ಕಾರಿಗಾರರಿಂದ ಕೂರಿಸಿದ‌  ಬೆಲೆ ಬಾಳುವ ಬಳೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದರು. ಕಾಲಕ್ರಮೇಣ ಸ್ಥಳೀಯವಾಗಿ  ತಯಾರಾದ ಹರಳುಗಳನ್ನು ಉಪಯೊಗಿಸಿ  ಜನಸಾಮಾನ್ಯರ ಕೈಗೆಟುಕುವ ‌ಬೆಲೆಯಲ್ಲಿ ಲಭ್ಯವಾಗುವ ಬಳೆಗಳು ತಯಾರಾಗಲು‌ ಪ್ರಾರಂಭವಾದಂತೆ‌ ಹೈದರಾಬಾದ್ ನ ಯಾವುದೇ ‌ಮನೆತನದಲ್ಲಿ‌ ಮದುವೆ‌ ಸಮಾರಂಭಗಳಿದ್ದರು  ಇಲ್ಲಿನ ‌ಬಜಾರಿನ ಬಳೆ‌ಖರೀದಿಸುವ ರೂಢಿಇದೆ.


            ಚೂಡಿಬಜಾರ್ ರಸ್ತೆಯಲ್ಲಿ ಕೆಲವು ಬಳೆ ಅಂಗಡಿಗಳ  ಹೊರಗೆ ತಗಡಿನ ಸ್ಟೂಲ್ ನಂತಹ ಉಪಕರಣ ಇಟ್ಟುಕೊಂಡು  ಮರದ ದಪ್ಪ ಕೋಲೊಂದನ್ನು ಹಿಡಿದು ಕುಳಿತಿರುವುದು  ಕಾಣುತ್ತದೆ. ಇವರಲ್ಲಿ ಬಳೆ‌ ಮಾಡಿ ತೋರಿಸಿ ಎಂದರೆ ಖುಷಿ ಖುಷಿ ಯಾಗಿ ಬಳೆ ಮಾಡಿತೋರಿಸುತ್ತಾರೆ. ಅವರಲ್ಲಿ ಇರುವ ಅರಗಿನ ಬಿಲ್ಲೆಗಳು ಕರಗಿ ಮುದ್ದೆಗಾತ್ರಕ್ಕೆ ಬಂದಾಗ .ಬಿಸಿ ಮುದ್ದೆಗೆ ಸ್ವಲ್ಪ ಬಣ್ಣ ದ ಪುಡಿಗಾಜಿನ‌ ಮಿಶ್ರಣ ವನ್ನು ಹಾಕಿ‌ ಬಳೆ‌ಮಾಡುವ  ಪ್ರಕ್ರಿಯೆಯಲ್ಲಿ ತೊಡಗಿ ಹದ‌ ಪಾಕಕ್ಕೆ ಬಂದ‌ ನಂತರ ಅರಗಿನ ‌ಮುದ್ದೆಯನ್ನು ಕೋಲಿಗೆ ಅಂಟಿಸಿ  ಕುಲುವೆಯ ಮೇಲೆ ಅಂದರೆ ಶಾಖಕ್ಕೆ ಹಿಡಿದು  ಮಧ್ಯ ದಲ್ಲಿ  ಅಂಟು‌ಹೆಚ್ವಿಸಲ್ಲು ಗೊಂದಿನ ಉಂಡೆ ಸೆರಿಸಿ ಪ್ರತಿಹಂತದಲ್ಲೂ ಅರಗು, ಗೊಂದು,  ಬಣ್ಣದಪುಡಿಗಳನ್ನು ಸೇರಿಸಿ ಹದವಾದ‌ ನಂತರ ತಯಾರಾಗುವ  ಬಳೆ  ವಿಭಿನ್ನ ‌ಕಸೂತಿ ಚಿತ್ತಾರದಲ್ಲಿ ಮಿಂಚುವ  ಸಂಪ್ರದಾಯಿಕ  ಶೈಲಿಯ  ಗಾಜಿನ ಬಳೆಗಳ  ಅಂದವನ್ನು ಇತರ ಬಳೆಗಳು‌ ನೀಡಲಾರವು ಅದರಲ್ಲೂ ಹೈದರಾಬಾದ್ ನ ಬಳೆಗಳ ಕಲ್ಮಾತಕ ಕುಸುರಿ  ಕೆಲಸ ಎಂತವರನ್ನು ಮರಳು ಗೊಳಿಸುತ್ತದೆ.ನೋಡಿ ಖರೀದಿಸಿದಾಗಲೇ  ತೃಪ್ತಿ.


         ‌‌‌  ಇಲ್ಲಿ ಬೇಕಾದ ಗಾತ್ರಕ್ಕೆ‌ ,ಆಕಾರಕ್ಕೆಹೊಂದಿಸಿ ತರಲು ಕೆಂಡದ‌  ಬಿಸಿಗೆ ಹದವಾಗಿ ಹಿಡಿದು  ಮುತ್ತುಗಳನ್ನು ಪೊಣಿಸುತ್ತಾ ವಿವಿಧ ಆಕಾರದ ಬಳೆಗಳನ್ನು ತಯಾರಿಸುತ್ತಾರೆ.ಗಾಜು ಅಥವಾ ಮೆಟಲ್ ಬಳೆಗಳ ಸುತ್ತಾ ರೇಷ್ಮೆ ದಾರಗಳಿಂದ  ಸುತ್ತಿ ಆರ್ಕಷಿತವಾದ ಬಳೆಗಳನ್ನು ತಯಾರಿಸಲಾಗುತ್ತದೆ. ಅದಕ್ಕಾಗಿಯೇ ಹೇಳುತ್ತಾರೆ ಹೈದರಾಬಾದ್ ಬಳೆಗಳ ಬೆಲೆ ಕಟ್ಟಲಾಗದು ಎಂದು. 150 ರೂಪಾಯಿ ಜೋಡಿ ಬಳೆಯನ್ನು ತಯಾರಿಸುವ ಸ್ಥಳದಲ್ಲೆ  ಅದೇ ವ್ಯಕ್ತಿ ಅರಗಿನ ಬಳೆಗೆ‌  ನಿಜ ವ್ರಜ ಕಚಿತ 6 ರಿಂದ 7 ಲಕ್ಷ   ಬೆಲೆಯ ಒಂದು ಜೊತೆ ಬಳೆ ಮಾಡುವುದ  ಕಣ್ಣಾರೆ ಕಂಡೆ. ನನಗೆ ಈ ಬಜಾರಿನ  ವೈಶಿಷ್ಟ್ಯ ತೆಯ  ಸ್ವಲ್ಪ ಭಾಗದ ಅರಿವಾದರು ಇಲ್ಲಿನ ವ್ಯವಹಾರಿಕ ಚಾಣಕ್ಯ ತೆಯ ಉದ್ದ ಅಗಲವನ್ನು ಅರಿಯಲಾಗಲಿಲ್ಲ.  ತಮಗೆ‌ ಬೇಕಾದ ಬಣ್ಣ ಬಣ್ಣದ ಬಳೆಯನ್ನು ಮಹಿಳೆಯರು ಕುಳಿತು ಮಾಡಿಸಿಕೊಂಡು ಹೋಗುತ್ತಾರೆ. ಚಿನ್ನದ ಕವಚದಲ್ಲಿ ಮಧ್ಯ ಅರಗಿಟ್ಟು ಬಗ್ಗೆ ಬಗೆಯ ಹರಳು ಕುರಿಸಿ ಬಳೆ ತಯಾರಿಸಿ‌ಕೋಳ್ಳುವ ಮಹಿಳೆಯರು ದೂರದ ಊರಿಂದ, ಹೊರ ರಾಜ್ಯಗಳಿಂಲೂ  ಈ ಬಳೆ ಮಾರುಕಟ್ಟೆಗೆ  ಬರುತ್ತಾರೆ. ನವರತ್ನ,ಹಾಗೂ ವಿವಿಧ ಹರಳುಗಳ ಬಳೆಯು ಇಲ್ಲಿ ತಯಾರಾಗುತ್ತದ.

       ಹೈದರಾಬಾದ್ ಗೆ ಹೋದರೆ  ನಿಜಾಮರ ನಗರಿಯ ಚೂಡಿಬಜಾರಿಗೆ ಹೋಗಿ ಬನ್ನಿ. ತಲಾಂತರಗಳಿಂದ ಇದೇ ಕುಲಕಸುಬನ್ನು ಮಾಡಿಕೊಂಡು ಬಂದ ಕುಟುಂಬಗಳು ಆಧುನಿಕತೆ  ಎದುರಾದರು ಇಲ್ಲಿನ ಬಳೆಗಳಿಗೆ ಬೇಡಿಕೆ ಕಡಿಮೆ ಆಗಿಲ್ಲ ಎನ್ನುತ್ತಾರೆ. ಅಷ್ಟು ಚಂದ, ವಿವಿಧ ಬಣ್ಣದ,ಅಪರೂಪದ,  ಒಂದಕ್ಕಿಂತ ಮತೊಂದು ಸುಂದರ‌ ಆಕರ್ಷಕ  ವಿನ್ಯಾಸದ ಬಳೆಗಳು ಲಭ್ಯ.ಬಳೆ ಎಂದಾಕ್ಷಣ ಹೆಣ್ಣು ‌ಮಕ್ಕಳು ಪುಳಕಗೊಳ್ಳುತಾರೆ ಕೈಬಳೆ ಕೇವಲ ಸೌಂದರ್ಯ ದ ದೃಷ್ಟಿಯಿಂದ  ಮಾತ್ರ ವಲ್ಲದೆ ಆರೋಗ್ಯ ದ ದೃಷ್ಟಿ ಯಿಂದಲ್ಲೂ  ಲಾಭದಾಯಕ. ಬಳೆ‌ಕೈಗಳಿಗೆ ಮಾಸಾಜ ಮಾಡುವ ರೀತಿಯಲ್ಲಿ ಚಲಿಸುವುದರಿಂದ‌ ನರಗಳಿಗೆ ರಕ್ತ ಸಂಚಾರ‌ ಸುಗಮ‌ಗೊಳ್ಳುತ್ತದೆ. ಹೆಣ್ಣಿಗೂ ಬಳೆಗೂ ಅವಿನಾಭಾವನಂಟು.ಆದರೆ ‌ಪ್ಯಾಷನ್ ಜಗತ್ತಿಗೆ ಇಂದು ಬಳೆಯ ಶಬ್ದ ‌ಕಿರಿ‌ ಕಿರಿ ಎನಿಸುತ್ತದೆ.


           ವಿವಾಹ ಸಮಾರಂಭದಲ್ಲಿ ಹೈದರಾಬಾದ್ ಬಳೆ  ತನ್ನ ಸೊಬಗು ಹಾಗೂ ಇರುವನ್ನು ಇಂದಿಗೂ ಉಳಿಸಿಕೊಂಡಿದೆ .ಮದುಮಗಳ ಶೃಂಗಾರದಲ್ಲೂ  ಇಲ್ಲಿನ ‌ಬಳೆಗಳಿಗೆ  ವಿಶೇಷ ‌ಮಾನ್ಯತೆ . ಅರಗಿನ ಬಳೆಗಳಿಗೆ ಮಣಿ, ಬಣ್ಣ ಬಣ್ಣದ ಕಲ್ಲು, ಬಂಗಾರದ‌ ಹೊರ ಪಟ್ಟಿ, ಬೆಳ್ಳಿ, ಪಂಚೆಕಲ್ಲು, ತಾಮ್ರ,‌ಕಂಚು, ಗಾಜು, ದಂತ ಅಬ್ಬಬ್ಬಾ ಹೀಗೆ ಒಂದೇ ಎರಡೇ ವಿವಿಧ ವಸ್ತುಗಳಿಂದ ತಯಾರಿಸಿದ ಸುಂದರ ಬಳೆಗಳು ಒಂದಕ್ಕಿಂತ ಒಂದು ಅಂದ ಒಂದಕ್ಕಿಂತ ಇನ್ನೊಂದು  ಚಂದ. ಕಾಲ ಬದಲಾದಂತೆ ಪಾರಂಪರಿಕವಾಗಿ ಬಂದ ಬಳೆಗಳ ಶೈಲಿ ಯು ಆಧುನಿಕ ಜಗತ್ತಿನ ತೊಳ್ತಕ್ಕೆಯಲ್ಲಿ ಮಿಲಿನವಾದ ವಿನುತನ ರೂಪದಲ್ಲಿ  ಅಗಣಿತ ಬಣ್ಣದಲ್ಲಿ ಆಕರ್ಷಕ ವಾಗಿಕಾಣುವ ಬಳೆಗಳು. 

      ಇಲ್ಲಿನ  ಬಳೆ ತಯಾರಿಸುವ ಅಂಗಡಿ ಯೊಂದರಲ್ಲಿ  ಯಾವ ಬಣ್ಣದ ಬಳೆಗಳನ್ನು  ಧರಿಸಿದರೆ  ಯಾವ ತರದ ಯಾಶಸ್ಸು ಲಭ್ಯ ಎನ್ನುವ ‌ಫಲಕವನ್ನು ತೂಗಿಸಿದ್ದಾರೆ. ಕೆಂಪು ಬಳೆ ಪ್ರೇಮದ ಸಂಕೇತ, ನೀಲಿ ಬುದ್ದಿ ವಂತಿಕೆ, ನೇರಳೆ ಸ್ವಾತಂತ್ರ್ಯ ಪ್ರತಿನಿಧಿಸುತ್ತದೆ, ಹಸಿರು ಸಮೃದ್ಧಿ ಮತ್ತು ಅದೃಷ್ಟ, ಕತ್ತಳೆ ಬಣ್ಣ ಯಶಸ್ಸು, ಹಳದಿ ಬಣ್ಣದ ಬಳೆ ಸಂತೋಷವನ್ನು, ಬಿಳಿ ಶುದ್ಧತೆಯ ಪ್ರತಿಕಾ ಕಪ್ಪು ಶಕ್ತಿ ಮತ್ತು ಅಧಿಕಾರ , ಬೆಳ್ಳಿಯ ಬಳೆಗಳು ಶುದ್ದತೆ, ಬಂಗಾರ ಭಾಗ್ಯವನ್ನು ನೀಡುತ್ತದೆ ಎಂಬ ನಂಬಿಕೆ .  ಬಳೆಯಿಂದ‌ ಹೊರಡುವ ನಿನಾದ ಕೆಟ್ಟ ಶಕ್ತಿಯನ್ನು ಓಡಿಸುವುದು ಅಲ್ಲದೆ ಸ್ತ್ರೀ ಯರಲ್ಲಿ ಕ್ರಿಯಾ ಶಕ್ತಿ ಜಾಗ್ರತವಾಗುತ್ತದೆ. ಬಳೆ ಭಾರತಿಯಾ ಸಂಸ್ಕೃತಿಯ ಪ್ರತೀಕವೂ‌ ಹೌದು.

Leave a Reply

Your email address will not be published. Required fields are marked *