ಮುಂದಿನ ದಿನಗಳಲ್ಲಿ ಮುಸ್ಲಿಂ ಸಮುದಾಯದವರಿಗೆ ಹೆಚ್ಚಿನ ಮನೆ – ಶಾಸಕ ಡಾ. ಕೆ ಅನ್ನದಾನಿ : heggaddesamachar

ಬೆಳಕವಾಡಿ: ಮುಂದಿನ ದಿನಗಳಲ್ಲಿ ಮುಸ್ಲಿಂ ಸಮುದಾಯದವರಿಗೆ ಹೆಚ್ಚು ಹೆಚ್ಚು ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದು ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.
ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಗ್ರಾಮದ 5ನೇ ವಾರ್ಡಿನ ಮುಸ್ಲಿಂ ಕಾಲೋನಿಗೆ 14 ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ಧಿ ಹಾಗೂ ಸಿಸಿ ಡ್ರೈನೇಜ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು

ಕರ್ನಾಟಕ ಸರ್ಕಾರದ ಅಲ್ಪ ಸಂಖ್ಯಾತರ ಇಲಾಖೆ ವತಿಯಿಂದ ಸುಮಾರು ಎರಡು ಕೋಟಿ ರೂ ವೆಚ್ಚದಲ್ಲಿ ಹಲಗೂರು, ಧನಗೂರು, ಬೆಳಕವಾಡಿ, ವಡಕೆಪುರ, ಧನಗೂರು, ಕಿರಗಾವಲು, ಕಲ್ಕುಣಿ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸುವುದರ ಮೂಲಕ ಸಿ.ಸಿ. ಡ್ರೈನೇಜ್ ಮತ್ತು ಕಾಂಕ್ರೀಟ್ ರಸ್ತೆಯನ್ನು ನಿರ್ಮಾಣ ಮಾಡಲಿಕ್ಕೆ ಇಂದು ಚಾಲನೆ ನೀಡಿದ್ದೇನೆ,

ಅಲ್ಲದೆ ಮುಸ್ಲಿಂ ಸಮುದಾಯದವರು ವಾಸಿಸುವ ಬೀದಿಗಳಲ್ಲಿ ರಸ್ತೆ ಹಾಗೂ ಚರಂಡಿ ಅಚ್ಚುಕಟ್ಟಾಗಿ ಇಲ್ಲವೆಂದು ನನ್ನ ಗಮನಕ್ಕೆ ಬಂದಿದ್ದು, ಈ ಸಮುದಾಯದಲ್ಲಿ ಇಂದಿಗೂ ಬಡತನದಲ್ಲಿ ವಾಸಿಸುವ ಜನರಿದ್ದಾರೆ ಮುಂದಿನ ದಿನಗಳಲ್ಲಿ ಈ ಸಮುದಾಯದರಿಗೆ ಹೆಚ್ಚು ಹೆಚ್ಚು ಮನೆಗಳನ್ನು ನಿರ್ಮಿಸಿಕೊಡುವ ಮೂಲಕ ಈ ಸಮುದಾಯದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಪಿ.ಸೋಮು, ಸದಸ್ಯ ಅರ್ಷದ್ ಪಟೇಲ್, ಮುಖಂಡರಾದ ಮಲ್ಲೇಗೌಡ, ಒಕ್ಕರಹಳ್ಳಿ ಜಯರಾಜು,ಅಶ್ವಥ್ ಕುಮಾರ್, ಬಿ.ಎಂ.ಕಾಂತರಾಜು, ನಾಗಭೂಷಣ್, ಶ್ರೀನಿವಾಸ್, ಮಸೀದಿ ಗುರುಗಳಾದ ಅಫೀಜ್ ತನ್ವೀರ್ ಅಹಮದ್, ಅಬ್ದುಲ್ ಕಲೀಲ್, ಜಹೀರ್ ಅಬ್ಬಾಸ್ ಇತರರಿದ್ದರು.