ಮೀನೂಟ ಎಂದರೆ ಇಷ್ಟಾನಾ!! ಹಾಗಾದ್ರೆ ಮಂಗಳೂರು ಕಿಚನ್ ಹೋಟೆಲ್ ಗೆ ಹೋಗಿ ಬನ್ನಿ… : heggaddesamachar.com

ನಾನು ಊಟದ ವ್ಯಾಮೋಹಿಯಲ್ಲ. ಆದರೂ ಗೆಳೆಯರ ಒತ್ತಾಯಕ್ಕೋ, ಮನಸ್ಸಿನ ರುಚಿಯ ಸೆಳೆತಕ್ಕೋ, ಹಸಿವಿನ ಇಂಗಿತಕ್ಕೋ ಊಟ ಅರಸಿ ಹೋಗುವ ಸ್ವಭಾವವೂ ಉಂಟು. ಇವತ್ತೂ ಕೂಡ ಅದೇ ಆಯ್ತು… ಗೆಳೆಯರ ಒತ್ತಾಸೆಗೆ ಮಣಿದು ಮೀನು ಊಟ ಮಾಡೋಣವೆಂದು ಅರಸಿ ಹೊರಟಿದ್ದು ಕೋರಮಂಗಲದಲ್ಲಿರುವ ಕರಾವಳಿ ಸೊಗಡಿನ ‘ಮಂಗಳೂರು ಕಿಚನ್ ಹೋಟೆಲ್’ಗೆ…

ಆಹಾ!! ಸವಿಯೋ ಸವಿ… ನಾರ್ಮಲ್ಲಿ ಕರಾವಳಿಗನಾದ ನನಗೆ ಎಲ್ಲಾ ಬಗೆಯ ಮೀನು, ಅದರ ರುಚಿ ಪರಿಚಿತವಿದ್ದರೂ, ಬೆಂಗಳೂರಿನಲ್ಲಿ ಇಂದು ನಮ್ಮೂರಲ್ಲಿರುವ ಮೀನೂಟದ ಸವಿ ಸಿಗುವುದು ಕಡಿಮೆಯೆನ್ನುವ ಅನಿಸಿಕೆ ಇತ್ತು
ಆದರೆ ಮಂಗಳೂರು ಕಿಚನ್ ನನ್ನೊಳಗಿದ್ದ ಆ ಅನಿಸಿಕೆಯನ್ನ ಸುಳ್ಳಾಗಿಸಿತು.

ಬಹುತೇಕ ಎಲ್ಲಾ ಬಗೆಯ ಮೀನಿನ ಸಾರು, ಫ್ರೈ, ಚಿಕನ್ ವೆರೈಟಿ ಫುಡ್ ಗಳು ಬೇಕಾದ ಬಗೆಯಲ್ಲಿ ನಿಮಗೆ ಇಲ್ಲಿ ಸಿಗುತ್ತದೆ.

ಒಂದಂಶದಲ್ಲಿ “ಮಂಗಳೂರು ಕಿಚನ್” ನಾನ್ ವೆಜ್ ಪ್ರಿಯರಿಗೆ ಕಂಪ್ಲೀಟ್ ಪ್ಯಾಕೆಜ್ ಎನಿಸಿತು. ಯಾಕೆಂದರೆ, ಇಲ್ಲಿ ಕೇವಲ ಮೀನೂಟ ಮಾತ್ರವಲ್ಲ, ಚಿಕನ್, ಮಟನ್ ಹೀಗೆ ಎಲ್ಲಾ ನಾನ್ ವೆಜ್ ಐಟಮ್ ಗಳು ಲಭ್ಯವಿದೆ…


ಕುಳಿತು ಉಣ್ಣಬಹುದಾದ ವಿಸ್ತೀರ್ಣ, ಕರಾವಳಿ ಭಾಗದ ಕುಕ್, ಸ್ವಚ್ಚವಾದ ಸಂಕೀರ್ಣ, ಪಾರ್ಕಿಂಗ್, ಕೈಗೆಟುಕುವ ದರ, ಬಾಳೆ ಎಲೆಯ ತಟ್ಟೆ, Online Delivery , ಹೀಗೆ ಎಲ್ಲದರಲ್ಲೂ ಮಂಗಳೂರು ಕಿಚನ್ ನಾನ್ ವೆಜ್ ಊಟ ಪ್ರಿಯರಿಗೆ ‘ದಿ ಬೆಸ್ಟ್’ ಎನಿಸಿತು…

ನಾನಂತು ರುಚಿಯಾದ ಮೀನೂಟದ ಸವಿ ಸವಿದು ಹೊಟ್ಟೆ ಉಬ್ಬಿಸಿಕೊಂಡು ಮರಳಿದೆ… ನಿಮಗೂ ಮೀನೂಟದ ಆಸೆ ಇದ್ದರೆ ಒಮ್ಮೆ ಹೋಗಿ ಬನ್ನಿ…
ಏನಂತೀರಾ!??
- ಸಂದೀಪ್ ಶೆಟ್ಟಿ ಹೆಗ್ಗದ್ದೆ
