ಮಿಲನದ ಮತ್ತಿನಲ್ಲಿ ವಿವಶಗೊಳ್ಳುವ ಏಡಿಗಳು :

- ಲತಾ ಸಂತೋಷ ಶೆಟ್ಟಿ ಮುದ್ದುಮನೆ.
ಏಡಿ ಎಂದಾಕ್ಷಣ ಮಾಂಸಹಾರಿಗಳ ಬಾಯಲ್ಲಿ ನೀರೂರುತ್ತದೆ, ಬಾಯಿ ಚಪ್ಪರಿಸಿ ತಿನ್ನಬಯಸುವ ಕೊಬ್ಬು ತುಂಬಿ ದಷ್ಟ ಪುಷ್ಟವಾಗಿ ಶರೀರ ತುಂಬಿಸಿ ಕೊಂಡಿರುವ ಏಡಿಗಳು ಮಳೆಗಾಲದಲ್ಲೇ ಎಲ್ಲೆಡೆ ಹೆಚ್ಚಾಗಿ ಸಿಗುತ್ತದೆ . ಮಳೆಗಾಲದಲ್ಲಿ ಏಡಿಗಳ ಶಿಕಾರಿ ಮಾಡುವವರು ಹೆಚ್ಚಾಗಿ ಕಂಡುಬರುತ್ತಾರೆ ಯಾಕಂತ ಗಮನಿಸಿದ್ದಿರಾ. ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಕಾಲದಲ್ಲಿ ಹೊಳೆ,ತೋಡುಗಳ ಸಾಲುಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿ ಹಿಂಡು ಹಿಂಡು ಏಡಿಗಳು ಸಾಲು ಕಟ್ಟಿ ಬರುವ ಹಿನ್ನೆಲೆಯಲ್ಲಿ ಒಂದು ಕುತೂಹಲಕಾರಿ ವಿಚಾರವಿದೆ. ಅಂದರೆ ಮೊದಲ ಮಳೆಯಲ್ಲಿ ಸುಪ್ತಾವಸ್ಥೆಯಲ್ಲಿರುವ ಲೈಂಗಿಕ ಪ್ರಬುದ್ದತೆಗೆ ಬಂದ ಏಡಿಗಳು ಸುರಿವ ಜಡಿಮಳೆಗೆ ಹೊಸ ಚ್ಯೆತನ್ಯ ಮೂಡಿ ಮೈತಳೆದು ಸುಮಧುರ ಮಿಲನಕ್ಕಾಗಿ ಗಂಡು ಹಾಗೂ ಹೆಣ್ಣು ಏಡಿಗಳು ಸಂಧಿಸುವ ಕಾಲವಿದು. ಮೈದುಂಬಿ ಹರಿವ ತೋಡು, ಹಳ್ಳ- ಕೊಳ್ಳ , ನದಿ, ಕಲ್ಲು ಪೊಟರೆ, ಮರಗಳ ಬೇರುಗಳ ಸಂದಿನಲ್ಲಿ ಅಡಗಿರುವ ಏಡಿಗಳು ಮಧುರ ಮೈತ್ರಿಗಾಗಿ ಮಿಲನದ ನಶೆಯಲ್ಲಿ ವಿವಶಗೊಂಡು ತಮ್ಮ ಚುರುಕಿನ ಚಲನಾ ಸ್ವಭಾವ ಕಳೆದುಕೊಂಡ ಗಂಡು ಏಡಿಗಳು ಹೆಣ್ಣು ಏಡಿಗಾಗಿ ಕಾತರಿಸುತ್ತವೆ.ಇದೆ ಸಮಯದಲ್ಲಿ ಏಡಿ ಶಿಕಾರಿಗಳು ಏಡಿ ಹಿಡಿಯಲು ಹೊಂಚು ಹಾಕುತ್ತಾರೆ.
ಏಡಿಗಳ ಇನ್ನೊಂದು ಸ್ವಭಾವವನ್ನು ಕಾರವಾರದ ಸೋಮಣ್ಣ ಹೀಗೆ ವಿವರಿಸುತ್ತಾರೆ. ಗಂಡು ಏಡಿಗಳು ತಮ್ಮ ಮಧುಚಂದ್ರಕ್ಕಾಗಿ ಕಲ್ಲುಪೊಟರೆ, ಮರದ ಬೇರುಗಳ ಸಂದುಗಳಲ್ಲಿ ಸುರಂಗ ಅಥವಾ ಬಿಲ ಕೊರೆದು ತಾವು ಕೊರೆದ ಸುರಂಗದ ಆಸು ಪಾಸು ಬೇರೆ ಗಂಡು ಏಡಿಗಳು ಬಾರದಂತೆ ಎಚ್ಚರ ವಹಿಸಿ ಹೆಣ್ಣು ಏಡಿಗಾಗಿ ಹಂಬಲಿಸುತ್ತಾ ಹೆಣ್ಣು ಏಡಿಗಳ ಆಕರ್ಷಿಸಲು ಹೆಚ್ಚಿನ ಸಮಯ ವಿನಿಯೋಗಿಸಿ ವಿವಶಗೊಳ್ಳುತ್ತವೆ. ಮಧುಚಂದ್ರದ ಸಂಭ್ರಮದ ಆ ಸಮಯದ ಸದುಪಯೋಗ ಎಂಬಂತೆ ನಮ್ಮಂತ ಬೇಟೆಗಾರಿಗೆ ಇದು ಸುಗ್ಗಿಯ ಕಾಲ ಬಲೆ ಬಿಸಿ ಇನ್ನೂ ಕೆಲವರು ಕೈಯಲ್ಲಿ ತಡಕಾಡಿ ಹೆಚ್ಚಿನ ಸಂಖ್ಯೆಯಲ್ಲಿ ಏಡಿ ಹಿಡಿಯತ್ತೆವೆ . ಬಿಲ ಅಗೆದು ಕೂಡ ಏಡಿ ಹಿಡಿಯುತ್ತಾರೆ ಅದು ನಿಜವಾಗಿಯು ಕಷ್ಟದ ಕೆಲಸ. ಏಡಿ ಹಿಡಿವಾಗ ಕೊಂಬು ಗಳಿಂದ ಬೆರಳು ಕಚ್ಚುವ ಅಪಾಯವಿದೆ. ಆದರೂ ಮಳೆಗಾಲದ ಏಡಿಗಳ ಮಿಲನ ಸಮಯದಲ್ಲಿ ಏಡಿಗಳು ಕೈಗೆ ಸುಲಭವಾಗಿ ಸಿಗುತ್ತವೆ.
ಏಡಿ ಅಂದಾಕ್ಷಣ ನಮ್ಮ ಕಣ್ಣೆದುರು ನಿಲುವ ಚಿತ್ರಣ ಹಿಂಡು ಹಿಂಡಾಗಿ ಕೆಂಪು, ಕಿತ್ತಳೆ ,ಕಪ್ಪು ಬಣ್ಣದಲ್ಲಿ ಎರಡು ಗಡಸಾದ ಕೊಂಡಿ ಹೊಂದಿರುವ ನೀರಿನಲ್ಲೂ, ನೆಲದಲ್ಲೂ ವಾಸಿಸುವ ಉಭಯ ಜೀವಿ. ಸಾಮಾನ್ಯವಾಗಿ ಏಡಿಗಳು ಡುಂಡಗೆ, ಚಪ್ಪಟೆ ದೇಹವನ್ನು ಹೊಂದಿದ್ದು ಚೌಕಾಕಾರದ ಪೆಟ್ಟಿಗೆಯಂತಹ ದೇಹದ ಭಾಗವನ್ನು ಹೊಂದಿರುತ್ತದೆ. 10 ಕಾಲಿನ ಏಡಿ 2 ದೊಡ್ಡ ಕೊಂಬು ಬೆರಳಿನಿಂದಲೇ ಅದು ತನ್ನ ರಕ್ಷಣೆಯನ್ನು ಮಾಡಿಕೊಳ್ಳುತ್ತದೆ. ಸಮೂಹ ಜೀವನ ನಡೆಸುವ ಏಡಿಗಳು ಶಿಲೀಂಧ್ರ, ಕೀಟ, ಹುಳ, ಹಪ್ಟಟೆ, ಎಲೆ ,ಸತ್ತ ಜೀವಿಗಳು ,ಸಾವಯ ವಸ್ತು ,ಕೊಳೆತ ಪ್ರಾಣಿಯ ಮಾಂಸವನ್ನು ಸೇವಿಸಿ ಜೀವಿಸುತ್ತವೆ ಇವು ಮಿಶ್ರಹಾರಿಗಳು.
ಏಡಿಗಳಿಗೆ ಮೂಗಿಲ್ಲ ಶ್ವಾಸಕೋಶವಿದೆ. ಆದ್ದರಿಂದ ಅವು ಕಾಲಿನ ಬುಡದ ಪಕ್ಕದಲ್ಲಿರುವ ಕಿವಿರುಗಳ ಮೂಲಕ ನೀರಿನಲ್ಲಿರುವ ಆಮ್ಲ ಜನಕವನ್ನು ತಗೆದುಕೊಳ್ಳುತ್ತದೆ. ಅದಕ್ಕಾಗಿ ಏಡಿಗಳಿಗೆ ಗಾಳಿಯಲ್ಲಿ ತೇವಾಂಶ ಇರಲೇಬೇಕಾಗುತ್ತದೆ. ಹಗಲು ಚುರುಕಾಗಿದ್ದು ರಾತ್ರಿ ನಿಶ್ಚಲ ವಾಗಿರುತ್ತದೆ. ಏಡಿಗಳ ಕಣ್ಣನ್ನು ಸ್ವಲ್ಪಮಟ್ಟಿಗೆ ಹೊರ ಬಾಚಿದಂತೆ ಇದ್ದು. ಅಗತ್ಯ ವಿದ್ದಾಗ ಮಾತ್ರ ತಮ್ಮ ಕಣ್ಣು ಗಳನ್ನು ಉದ್ದಕ್ಕೆ ದೇಹದ ಮೇಲ್ಭಾಗಕ್ಕೆ ಬಾಚಿಕೊಳ್ಳುತ್ತವೆ. ಆಹಾರ ಹಾಗೂ ಸಾಗುವ ಮಾರ್ಗ ಅರಿಯಲು ಮತ್ತು ಶತ್ರು ವನ್ನು ಗಮನಿಸಲು ಇದು ತನ್ನ ಅಪರೂಪದ. ಕಣ್ಣನ್ನು ಹಿಂದೆ ಮುಂದೆ ತಿರುಗಿಸಬಲ್ಲದು. ವೇಗವಾಗಿ ಓಡುವ ಸಾಮರ್ಥ್ಯವನ್ನು ಹೊಂದಿ ಶತ್ರು ವನ್ನು ಕಂಡಾಗ ಕ್ಷಣಾರ್ಧದಲ್ಲಿಯೇ ಪರಾರಿ ಆಗ ಬಲ್ಲದು. ಕೆಲ ಹಳ್ಳಿಗಾಡಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಏಡಿ ಹಿಡಿಯುತ್ತಾರೆ. ಆದರೆ ಸ್ಥಳೀಯರಿಗೆ ಅಷ್ಟು ಸುಲಭವಾಗಿ ಲಭ್ಯ ವಾಗದೆ. ಹೊರರಾಜ್ಯಗಳಿಗೆ ಸಾಗಿಸಲಾಗುತ್ತದೆ.
ಏಡಿ ಜೀರ್ಣ ಶಕ್ತಿ ಹೆಚ್ಚಿಸುವ ಪುಷ್ಟಿಕರ ಆಹಾರ. ಏಡಿ ಪಲ್ಯ ದೊಂದಿಗೆ ಬಿಸಿ ಮುದ್ದೆ ,ಅನ್ನ, ಇಡ್ಲಿ, ನೀರ್ ದೋಸೆ, ಪುಂಡಿ ಹೀಗೆ ಹೆಚ್ಚಿನ ತಿಂಡಿಗಳು ಸರಿ ಹೊಂದುತ್ತವೆ. ಏಡಿಪಲ್ಯದ ಘಮಲು ಬಹುದೂರ ತನಕ ಬರುತ್ತದೆ. ವಿಶಿಷ್ಟ ರುಚಿ ಹೊಂದಿರುವ ಏಡಿಗಳಲ್ಲಿ ಪ್ರೊಟೀನ್, ಒಮೇಗಾ -3, ಮೇದಾಮ್ಲ, ಸತು ,ವಿಪುಲವಾಗಿರುತ್ತದೆ. ಏಡಿಗಳಿಗೆ ಹೆಚ್ಚಿನ. ಬೇಡಿಕೆ ಇದ್ದ ಕಾರಣ ಇವುಗಳ ಮಿಲನ ಹಾಗೂ ಸಂತಾನೊತ್ಪತ್ತಿ ಸಮಯದಲ್ಲೂ ಏಡಿಗಳ ಬೇಟಿಯಾಡುವುದರಿಂದ ಕೆಲ ದಶಕಗಳಲ್ಲಿ ವಿನಾಶದಂಚಿಗೆ ಇವುಗಳ ಸಂತತಿ ಸರಿದರು ಆಶ್ಚರ್ಯ ವಿಲ್ಲ. ಹವ್ಯಾಸವಾಗಿಯು, ಜೀವನ ನಿರ್ವಹಣೆ ಗಾಗಿಯೂ ಏಡಿಗಳ ಹಿಡಿದು ಮಾರಾಟ ಮಾಡಿ ಬದುಕು ಕಟ್ಟಿ ಕೊಳ್ಳುವವರು ಇದ್ದಾರೆ.

ಏಡಿ ಮಾಂಸಹಾರಿ ಗಳಿಗೆ ಬಹುಪ್ರೀಯ ಖಾದ್ಯ . ಸಮುದ್ರ ಏಡಿಗಿಂತ ಕೆರೆ,ನದಿ,ತೊಡುಗಳ ಏಡಿ ಬಹುರುಚಿ. ಕೊಬ್ಬು ತುಂಬಿದ ಏಡಿಯ ರುಚಿಯನ್ನು ಬಲ್ಲವರೇ ಬಲ್ಲರು. ಅದರಲ್ಲೂ ಈಗ ಮಳೆಗಾಲ ಮಳೆ ಸುರಿವಾಗ ಮನೆ ಒಳಗೆ ಕುಳಿತು ಏಡಿ ಖಾದ್ಯ ಗಳನ್ನು ಮೆಲ್ಲುತ್ತಿದ್ದರೆ ಅದರ ಮಜವೇ ಬೇರೆ ಒಂದು ಕಾಲದಲ್ಲಿ ಎಲ್ಲೆಂದರಲ್ಲಿ ಅಗ್ಗವಾಗಿ ಸಿಗುತ್ತಿದ್ದ ಏಡಿ ಗಳು ಇಂದು ಬಹು ದುಬಾರಿ ಯಾಗಿ ಬೆಲೆ ಗಗನಕ್ಕೆರಿದೆ. ಏಡಿಗಳ ಲಭ್ಯತೆಯ ಪ್ರಮಾಣವೂ ಕುಸಿದಿದೆ. ಕೆಲ ತಳಿಗಳು ಅಪರೂಪವಾಗಿವೆ ಅವುಗಳ ಸಂಖ್ಯೆ ಕ್ಷಿಣಿಸುತ್ತಿದೆ. ಇತೀಚಿಗೆ ನದಿ, ಸಮುದ್ರ, ಹಳ್ಳ,ಕೊಳ್ಳ ಅತಿಯಾಗಿ ಮಾಲಿನ್ಯ ಗೊಂಡಿರುವುದರಿಂದ ಕೇಲ ಜೌತಿಯ ಏಡಿಗಳು ನಿರ್ವಂಶ ವಾಗಿದೆ. ಮಳೆ ಕೆಡಿಮೆ ಆದ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಏಡಿಗಳು ಸಿಗುದಿಲ್ಲವಂತೆ . ಅಳಿವಿನಂಚಿನಲ್ಲಿರುವ ಜೀವಿಗಳಸಾಲಿಗೆ ಇವು ಸೇರದ್ದಿದ್ದರೆ ಉತ್ತಮ .