News (ಸುದ್ದಿ)

ಮಾನವೀಯತೆಯ ಮೌಲ್ಯ ಹೇಳಿತು ಅತ್ಮಹತ್ಯೆಯ ಆ ಘಟನೆ – ಅಷ್ಟಕ್ಕೂ ಎನಾಯ್ತು ಗೊತ್ತಾ? : heggaddesamachar

Spread the love

ಕೊರೋನಾ ಮಹಾಮಾರಿಗೆ ಬಲಿಯಾದವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ.
ಈ ನಡುವೆ ಕೊರೋನಾ ಭಯದಿಂದ ಸಾವು-ನೋವುಗಳು ಹಾಗೂ ಅದರಿಂದ ಬಳಲುವವರು ಕೂಡಾ ತುಂಬಾ ಜನ.
ಒಂದು ರೀತಿಯಲ್ಲಿ ನಮ್ಮವರನ್ನೇ ನಾವು ನಂಬದಂತಹ ಸ್ಥಿತಿಗೆ ತಲುಪಿದರೆ, ಇನ್ನೊಂದು ಕಡೆ ಕೊರೋನಾ ಸೋಂಕಿತರು ತಮ್ಮ ಕಣ್ಣೀರಿನ ಕಥೆಗೆ ಸಾಂತ್ವನ ಹೇಳಲು ಯಾರು ಇಲ್ಲ ಎಂದು ಕೊರಗುವ ಸ್ಥಿತಿ.
ಕೊರೊನಾ ಸೋಂಕಿತರಾದರೆ ತಮ್ಮ ಮನೆಮಂದಿ ಹಾಗೂ ಗೆಳತನದ ಬೇಲಿಯಿಂದ ಹೊರಗೆ ಉಳಿಯಬೇಕಾದ ಅನಿವಾರ್ಯತೆ. ಇನ್ನು ಕೆಲವರು ಕೊರೋನಾ ದಿಗ್ಬಂಧನಕ್ಕೆ (ಕ್ವಾರಂಟೈನ್ ಗೆ) ಹೆದರಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

ಆದರೆ ಈ ನಡುವೆ ಕೊರೋನಾಗೆ ಸೆಡ್ಡುಹೊಡೆದು ನಿಂತ ಘಟನೆ ಬಂಟ್ವಾಳ (ಮಂಗಳೂರು) ಸಮೀಪದ ಪಾಣೆಮಂಗಳೂರು ಯುವಕನ ಆತ್ಮಹತ್ಯೆ.
ನಿಶಾಂತ್ ಎಂಬ ಹೆಸರಿನ ಹಿಂದೂ ಧರ್ಮದ ಯುವಕ ಪಾಣೆಮಂಗಳೂರು ನೇತ್ರಾವತಿ ನದಿಗೆ ಹಾರಿ ಅತ್ಮಹತ್ಯೆಗೆ ಪ್ರಯತ್ನ ಪಡುತ್ತಾನೆ. ಆ ದಿನವೇ ಕರಾವಳಿ ಮುಸ್ಲಿಂ ಬಾಂಧವರ ಈದುಲ್ ಫಿತರ್ ಹಬ್ಬವೂ ಆಗಿರುತ್ತದೆ.
ಆ ಸಮಯ ಉಪವಾಸವಿದ್ದರೂ ಕೂಡಾ ಅದಕ್ಕೆ ತಲೆಕೆಡಿಸಿಕೊಳ್ಳದೆ ಪ್ರಾಣ ರಕ್ಷಣೆಗೆ ಸ್ವಲ್ಪ ಸಮಯದ ಅವಕಾಶವೂ ನೀಡದೆ ತಕ್ಷಣ‌ ಯುವಕನ ರಕ್ಷಣೆಗೆ ಧಾವಿಸುತ್ತಾರೆ.


ಒಂದೆಡೆ ಹಬ್ಬದ ಅಚರಣೆ,
ಇನ್ನೊಂದೆಡೆ ಕೊರೋನಾ ನರ್ತನ.
ಕೊರೋನಾ ನಿಯಂತ್ರಣಕ್ಕಾಗಿ ಸಾಮಾಜಿಕ ಅಂತರ ಹಾಗೂ ಇತರ ಕಟ್ಟುನಿಟ್ಟಿನ ಕ್ರಮಗಳು ಇದ್ದರೂ ಆ ಮುಸ್ಲಿಂ ಭಾಂಧವರು ಪ್ರಾಣದ ಹಂಗು ತೊರೆದು ನದಿಗೆ ಹಾರಿ ಅವರನ್ನು ದಡಕ್ಕೆ ತಂದು ನಿಶಾಂತ್ ಅವರ ದೇಹದೊಳಗೆ ಹೆಚ್ಚು ನೀರು ಹೋಗಿದ್ದರಿಂದ ಆರಿಫ್ ಎಂಬವರು ಉಸಿರು ಕೊಟ್ಟು ಬದುಕಿಸುವ ಪ್ರಯತ್ನ ಮಾಡುತ್ತಾರೆ.


ಹಾಗೂ ತಕ್ಷಣ ನಾಲ್ಕೈದು ಮಂದಿಗಳಿದ್ದ ತಂಡ ಅವರನ್ನು ಆಸ್ಪತ್ರೆಗೆ ದಾಖಲಾತಿ ಮಾಡುತ್ತಾರೆ‌. ಆದರೆ ದುರದೃಷ್ಟವಶಾತ್ ಪ್ರಯತ್ನ ಫಲ ನೀಡಲಿಲ್ಲ ನಿಶಾಂತ್ ಅವರು ಮರಣ ಹೊಂದುತ್ತಾರೆ.
ತನ್ನ ಪ್ರಾಣದ ಹಂಗು ತೊರೆದು ಜೀವ ರಕ್ಷಣೆಗೆ ಮುಂದಾದ ಯುವಕರಿಗೆ ಸಲಾಮ್ ಹೇಳಲೇಬೇಕು. ಏಕೆಂದರೆ, ಉಪವಾಸವಿರುವ ಸ್ಥಿತಿ ಹಾಗೂ ಕೊರೋನ ವಿಷಮ ಪರಿಸ್ಥಿತಿಯಲ್ಲಿ ಕೂಡಾ ಜೀವಕ್ಕೆ ಜೀವ ನೀಡುವಂತೆ ಜೀವ ಉಳಿಸಲು ಪ್ರಯತ್ನ ಮಾಡಿದ ಅವರ ಶ್ರದ್ಧೆಗೆ ತಲೆಬಾಗಲೇಬೇಕು.


ಕೋಮು ದ್ವೇಷದ ಹಿನ್ನೆಲೆಯಲ್ಲಿ ಪ್ರತಿ ಬಾರಿಯೂ ಹೆಚ್ಚು ಕೊಲೆ ದರೋಡೆ ಹತ್ಯೆಗಳಿಗೆ ಹೆಸರಾದ ಬಂಟ್ವಾಳದಲ್ಲಿ, ಈ ಮಾನವೀಯ ಮೌಲ್ಯ ಎತ್ತಿಹಿಡಿದ ಈ ಘಟನೆ ಮಾನವರಾಗಿ ಮಾನವೀಯತೆಯನ್ನು ಮರೆಯಬಾರದು ಎಂಬ ಸಂದೇಶವನ್ನು ನೀಡಿದೆ ಎಂದರೆ ತಪ್ಪಾಗಲಾರದು.

heggaddesamachar

Leave a Reply

Your email address will not be published. Required fields are marked *