Literature (ಸಾಹಿತ್ಯ)

ಮಳೆಗಾಲದ ವಿಶಿಷ್ಟ ಖಾದ್ಯ ಕಳಲೆ

Spread the love
  • ಲತಾ ಸಂತೋಷ ಶೆಟ್ಟಿ ಮುದ್ದುಮನೆ.

ವನಸಿರಿಯ ನಾಡು ವೈವಿಧ್ಯಮಯ ಸಸ್ಯ ಸಂಕುಲಗಳ ಬೀಡು ಎಂಬ ಹೆಗ್ಗಳಿಕೆಯ ಕರ್ನಾಟಕ ವಿಪುಲ ಸಸ್ಯ ಸಿರಿಯ ನಾಡಿನಲ್ಲಿ ಸಸ್ಯಾಹಾರದ ಪರಿಚಯ ಮಾನವನ ಚರಿತ್ರೆಯಷ್ಟೆ ಪುರಾತನವಾಗಿದ್ದು. ಪ್ರಕೃತಿ ತನ್ನಲ್ಲಿ ಅನೇಕ ಸಂಪತ್ತನ್ನು ತುಂಬಿಕೊಂಡ ಪ್ರಶ್ನಾತೀತದ ವಿಸ್ಮಯ. ಪ್ರಾಚೀನ ಕಾಲದಿಂದಲೂ ಮಾನವ ನಿಸರ್ಗದೊಡನೆ‌ ಹೊಂದಿಕೊಳ್ಳುತ್ತಾ ಋತುಮಾನಕ್ಕೆ ಅನುಗುಣವಾಗಿ‌ ರೂಢಿಸಿ‌ಕೊಂಡ ಅಡುಗೆ ಪದ್ಧತಿಗಳು ಲಭ್ಯತೆಯ ಆಧಾರದ ಮೇಲೆ ಆಹಾರದ ಆಯ್ಕೆ ಇತ್ತು. ಆದರೆ ಆಧುನಿಕಯು ತಂದೊಡ್ಡಿದ ಹತ್ತಾರು ಅವತಾರದ ಅಡುಗೆಗಳನ್ನು ಪರಿಚಯಿಸುವ ಕಾಲಘಟ್ಟದಲ್ಲಿ ಇವತ್ತಿಗೂ ಮಳೆಗಾಲದಲ್ಲಿ ಮಲೆನಾಡಿನ ಮತ್ತು ಕರಾವಳಿಯ ಮನೆಗಳಲ್ಲಿ ಕಳಲೆ ಪಲ್ಯ ಆಗಾಗ್ಗೆ ಘಮಿಸುತ್ತದೆ.

ಗ್ರಾಮಿಣ‌ ಭಾಗದ ಜನರು ಪ್ರಕೃತಿಯಲ್ಲಿ ಸಿಗುವ ವಿವಿಧ ರೀತಿಯ ‌ಆಹಾರ ಪದಾರ್ಥ ಗಳನ್ನು ‌ಬಳಸಿಕೊಳುತ್ತಾ‌ ಮಳೆಗಾಲದ ರೋಗ ಗಳಿಂದ ಮುಕ್ತಿಪಡೆಯಲು ಆಯುರ್ವೇದಿಯ ಸತ್ವಗಳು ಜೌಸ್ತಿ ಇರುವುದರಿಂದ ಆಷಾಢ ಹಾಗೂ ಶ್ರಾವಣ ತಿಂಗಳಲ್ಲಿ ಹಲವು ಔಷಧೀಯ ಗುಣಗಳುಳ್ಳ ಬಿದಿರಿನ ‌ಎಳೆ ಚಿಗುರು, ಮೊಗ್ಗು ಅಥವಾ ಹೊಸ ಮೊಳಕೆ ಎಂಬ ಕಳಲೆಯನ್ನು ಯಥೇಚ್ಛವಾಗಿ ಬಳಸುತ್ತಾರೆ. ಮಳೆಗಾಲದ ವಿಶೇಷ ಖಾದ್ಯದಲ್ಲಿ ಕಳಲೆಯು ಒಂದು. ಇದನ್ನು ಕೆಲವೆಡೆ ಕಣಲೆ ಎಂತಲೂ ಕರೆಯುತ್ತಾರೆ.

ಮಲೆನಾಡು ಹಾಗೂ ಕರಾವಳಿ ಭಾಗದವರಿಗೆ ಕಳಲೆ ಚಿರಪರಿಚಿತ. ಎಳೆಬಿದಿರಿನ ಕಪ್ಪು ಕವಚವನ್ನು ಹೊರ ತೆಗೆದಾಗ ಸಿಗುವ ಬಿಳಿ ಬಾಗವೇ ಕಳಲೆ.ಇದರಿಂದ ತಯಾರಿಸುವ ಖಾದ್ಯ ಜನಪ್ರಿಯ ಬಿದಿರು ಆರೇಳು ವರ್ಷ ಗಳಾದ ನಂತರ ಅದರ ಬುಡದ ಬೇರುಗಳಿಂದ ಹೊಸಮೊಳಕೆಗಳು ಹೊಮ್ಮತ್ತವೆ. ಬಿದಿರಿನ ಹಿಂಡಿನೊಳಗೆ‌ ಬಿದಿರ ಬುಡದಲ್ಲಿ ಬೆಳವ ಮೊಳಕೆ ‌ಹೊಸದಾಗಿ ಎಳೆಯ ಬಿದಿರು‌ಹುಟ್ಟಿಕೊಳ್ಳುತ್ತವೆ. ಮಳೆಗಾಲದ ಕೆಲ ತಿಂಗಳಲ್ಲಿ ಬಳಕೆಗೆ‌ ಯೋಗ್ಯವಾಗುವ ಕಳಲೆಯಿಂದ ಸಾಂಬಾರ್ ಹಪ್ಪಳ, ಉಪ್ಪಿನ ಕಾಯಿ,ಪಲ್ಯ ತಯಾರಿಸಬಹುದು.

ಮಲೆನಾಡಿನ ಹೆಚ್ಚಿನ ಭಾಗದಲ್ಲಿ ಯಥೇಚ್ಛವಾಗಿ ಬಿದಿರುಗಳು ಕಾಡಿನಲ್ಲಿ ಕಾಣಸಿಗುತ್ತವೆ. ಇಲ್ಲಿನ ಜನರು ಕಲೆಯಿಂದ ತಯಾರಿಸಿದ ಅಡುಗೆ ಯನ್ನು ‌ಮೇಚ್ಚಿ ಮೆಲ್ಲುವರು. ಮಲೆನಾಡಿಗೂ ಕಳಲೆಗೂ ಇನ್ನಿಲ್ಲದ ‌ನಂಟು, ಕಳಲೆಯನ್ನು ಇತರ ಪದಾರ್ಥದ ವಸ್ತು ಗಳಂತೆ ನೇರವಾಗಿ ಉಪಯೋಗಿಸುವಂತಿಲ್ಲ. ಯಾಕೆಂದರೆ ಅದರಲ್ಲಿ ಒಂದು ರೀತಿಯ ಒಗರುದ್ರವ ಇರುವುದರಿಂದ ಕಳಲೆಯನ್ನು ಸಣ್ಣಗೆ ಕೊಚ್ಚಿ 2 ರಿಂದ 3 ದಿನ ತಣ್ಣೀರಿನ ಲ್ಲಿ ನೆನೆಸಿಡ ಬೇಕು ಪದೆ‌ಪದೆ‌ ನೀರು‌ ಬದಲಾಯಿಸಿದ ನಂತರ ಅದರ ಒಗರು ಕಡಿಮೆ ಆಗುತ್ತದೆ. ನೋಡಲು ಗಾಢವಾದ ಕಂದು ಬಣ್ಣ ವಿರುವ ಕಳಲೆ ಯನ್ನು ಅಡುಗೆಯಲ್ಲಿ ತರಕಾರಿಯಂತೆ‌ ಬಳಸಲಾಗುತ್ತದೆ. ಕಳಲೆಯನ್ನು ಸಣ್ಣ ತುಂಡಾಗಿ ಉಪ್ಪು ನೀರಿನಲ್ಲಿ ಹಾಕಿ ದೀರ್ಘ ಕಾಲದ‌ವರೆಗೆ ಶೆಖರಿಸಿಟ್ಟು ಬೇಕಾದಂತೆ ವರ್ಷವಿಡಿ ಬಳಸಬಹುದು. ಸ್ವಾದಿಷ್ಟ ಹಾಗೂ ಪುಷ್ಟಿಕರ ವಗಿದ್ದ ಕಾರಣ ಆರೋಗ್ಯ ದ ದೃಷ್ಟಿಯಿಂದ ಉತ್ತಮ ವಾಗಿರುತ್ತದೆ. ಆದರೆ ಕಳಲೆ ಎಂದೂ ಭೂಮಿ ಯಿಂದ ತೆಗೆದ ದಿನವೆ ಉಪಯೊಗಿಸಬಾರದು. ಆಹಾರವನ್ನು ಸೇವಿಸುವುದೆಷ್ಷು ಮುಖ್ಯವೋ ಅಷ್ಟೇ ಮುಖ್ಯ ಅದು ಅಪಾಯಕಾರಿಯಾಗದೆ ಸುರಕ್ಷಿತವಾಗಿ ಸೇವನೆಗೆ ಯೋಗ್ಯ ರೂಪಕಿಳಿಸುವುದನ್ನು ಹಳ್ಳಿಗರು ಬಲ್ಲರು.

ಬಿದಿರು ಸಂತತಿ ವಿನಾಶದ ಅಂಚಿಗೆ ಸರಿಯ ಬಾರದೆಂದು ಎಳೆ‌ಬಿದಿರು‌ ಅಂದರೆ‌ ಕಳಲೆಯನ್ನು ಆಹಾರ ಕ್ಕಾಗಿ ಕತ್ತರಿಸದೆ ಅವುಗಳ‌ ಬೆಳವಣಿಗೆಗೆ ಎಲ್ಲರೂ ಪಣತೊಡಬೇಕು. ಕ್ಷಣಿಕ ಬಾಯಿ ಚಪ್ಪರಿಕೆ‌ಗಾಗಿ 60 ರಿಂದ ‌90 ವರ್ಷ ಬೆಳೆಯುವ ಬಿದಿರನ್ನು ಎಳವೆಯಲ್ಲಿ ಚಿವುಟ ಬಾರದೆಂದು ಅರಣ್ಯ ‌ಇಲಾಖೆಯ‌ ಕಠಿಣವಾದ‌ ಕಾನೂನನ್ನು ಕಳಲೆ‌ ಕೀಳು ವವರ ವಿರುದ್ಧ ‌ಜೌರಿಗೆ‌ ತಂದಿದೆ. ಕಳಲೆ ‌ಕೀಳದೆ‌ ಬಿದಿರಾಗಿ ಬೆಳೆಯುವುದಕ್ಕೆ ಅನುವು ಮಾಡಿಕೊಳ್ಳುವ ಬದಲು ತಾವೆ ಕದ್ದು‌ಮುಚ್ಚಿ ಕತ್ತರಿಸಿ ಆಹಾರ ವಾಗಿ ಬಳಸುತ್ತಾರೆ ಎಂಬ ಅಪವಾದ ಮಲೆನಾಡಿನ ‌ಜನತೆಗೆ ‌ಇದೆ. ಬಿದಿರಿನ ಕಾಡು ‌ನಾಶವಾದ‌ ಹಿನ್ನೆಲೆಯಲ್ಲಿ ಅರಣ್ಯ ‌ಇಲಾಖೆ ಯು ಕಳಲೆ‌ ಕತ್ತರಿಸುವುದು ಮತ್ತು ಮಾರಾಟ ವನ್ನು ‌ನಿಬಂರ್ಧಿಸಿದೆ.ಆದರೆ ‌ಕಾಡಂಚಿನ‌ ಕಳಲೆ‌ ಕೀಳುತ್ತೇವೆ. ಲೆಕ್ಕಕ್ಕಿಂತ ಹತ್ತಿರ ಬೆಳೆದ ಬಿದಿರಿನ ಚಿಗುರು ಆರೋಗ್ಯ ದಾಯಕವಾಗಿ ಬೆಳೆಯುವುದಿಲ್ಲ ನಡು ನಡುವಿನ ಬಿದಿರಿನ ‌ಮೊಗ್ಗು ಕಿತ್ತು ತೆಗೆದರೆ‌ ಮಾತ್ರ ಉಳಿದ‌ಬಿದಿರು ಆರೋಗ್ಯ ವಾಗಿ‌ಬೇಳೆಯುತ್ತದೆ ಎನ್ನುತ್ತಾರೆ ಹಳ್ಳಿಗರು.

ಹೃದಯದ ಆರೋಗ್ಯಕ್ಕೂ ಕಳಲೆ ಉತ್ತಮ ಆಹಾರ. ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ‌ಮಾಡುವ ಗುಣ ಕಳಲೆಗೆ ಇದೆ. ನಾರಿನಾಂಶ ಹೆಚ್ಚಾಗಿ ರುವುದರಿಂದ‌ ವಿಸರ್ಜನಾ ಕ್ರಿಯೆಗೂ‌ ಸಹಕಾರಿ. ಕಳಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಷಿಯಂ ಅಂಶಹೊಂದಿದ್ದು ಅಧಿಕ ರಕ್ತ ದೊತ್ತಡವನ್ನು ಕಡಿಮೆ ಮಾಡ ಬಲ್ಲದು. ಮ್ಯಾಂಗನಿಸ, ತಾಮ್ರ, ಕ್ಯಾಲಿಯಂ , ಕಬ್ಬಿಣ, ರಂಜಕ ದಂತ ಖನಿಜಗಳು‌ ಹೇರಳವಾಗಿರುತ್ತದೆ . ಕಳಲೆ ಪಲ್ಯ ಮಾಡುವುದು ಶ್ರಮದಾಯಕವಾದರು ಆರೋಗ್ಯ ದ ದೃಷ್ಟಿಯಿಂದ ಲಾಭದಾಯಕ.

Leave a Reply

Your email address will not be published. Required fields are marked *