ಮನೆ, ಕಛೇರಿ ಬಾಡಿಗೆಯ ಹೊಡೆತ,, ತಪ್ಪಿಸಬೇಕು ಸರ್ಕಾರ ಜನರಿಗಾಗುತ್ತಿರುವ ಈ ಇರಿತ… | heggaddesamachar.com

✒️ – ಸಂದೀಪ್ ಶೆಟ್ಟಿ ಹೆಗ್ಗದ್ದೆ
ಸಂಪಾದಕರು
ಹೆಗ್ಗದ್ದೆಸಮಾಚಾರ್.ಕಾಮ್
ನಮ್ಮದೇ ತಪ್ಪಿರಬಹುದು!,
ತಪ್ಪಿಯೂ ಹೊರ ನಡೆದರೆ ಮತ್ತೆ ತಪ್ಪಾಗಬಹುದು!!, ಕೃಷ್ಣನ ಮಾತು ನಿಜವಿರಬಹುದು!, ನಿರ್ಲಕ್ಷ್ಯ ತೋರಿದರೆ ಕಲಿಯುಗ ಅಂತ್ಯಕ್ಕೆ ಸರಿದಾರಿ ಹಿಡಿಯಬಹುದು!..?
ಆಗೋದೆಲ್ಲ ಆಗೋಯ್ತು, ಇನ್ನಾಗದಿರುವ ಕಡೆ ಪಣ ತೊಟ್ಟಾಯ್ತು…? ಹೋರಾಡೋಣ.
ಎಷ್ಟು ದಿನ ಈ ಹೋರಾಟ!!, ಸೋಂಕು ಸಾಯುವ ತನಕ..; ಸರಿ… ಸಾಯಿಸೋಣ, ನಾವು ಸಾಯದಿರೋಣ…
ಎಲ್ಲೋ ಇದ್ದವರು, ಎಲ್ಲಿಂದಲೋ ಬಂದು, ಏನೇನೋ ಮಾಡಿ, ಹೊಟ್ಟೆ ಬಟ್ಟೆ, ಕಂಫೌಂಡು ಬೇಲಿ ಎಲ್ಲವನ್ನೂ ವಿಸ್ತರಣೆ ಮಾಡಿ ಸೈ ಎನಿಸಿದ್ದು ಒತ್ತಟ್ಟಿಗಿರಲಿ…
ದಿನಗೂಲಿಯವನ ಉದ್ದಿಮೆಯ ಮಾಲೀಕನ ಗತಿ ಈಗ ಏನೆಂದು ಹೇಳಲಿ..!?
ಸಣ್ಣ ಮಾಲೀಕರು, ತಿಂಗಳ ಸಂಬಳಿಗರು, ಬೀದಿ ವ್ಯಾಪಾರಿಗಳು , ಮಂಥ್ಲಿ ಕಮಿಟ್ ಮೆಂಟ್ ಅನ್ನೋ ಮಹಾಮಾರಿಯನ್ನ ಬೆನ್ನಿಗೆ ಹೊತ್ತುಕೊಂಡಿರುವ ದಾರ್ಶನಿಕರು, ಹೋಟೆಲ್ ಮಾಲೀಕರು, ಊರು ಬಿಟ್ಟು ಮನೆ ಬಾಡಿಗೆ ಪಡೆದು ಜೀವನ ಸವೆಸುವ ಪರ ಊರಿಗ ಎಲ್ಲಾ ಏನ್ಮಾಡ್ಭೇಕು..!??
ಮಿತ್ರರೇ ಆಗಿದ್ದು ಆಯ್ತು… ಎಲ್ಲ ಸೇರಿ ಈ ಕೊರೋನಾ ವೈರಸ್ ವಿರುದ್ಧ ಹೋರಾಡೋಣ…
ಬ್ಯುಸಿನೆಸ್ ಇಲ್ಲ. ಈಗಾಗಲೇ ವ್ಯವಹಾರ ನೆಲಕಚ್ಚಿದೆ. ಎಲ್ಲಾ ಉದ್ದಿಮೆದಾರರ ಭರವಸೆಯ ದುಡ್ಡು ಸಾಲದ ಬಿಲ ತೋಡಲು ನಿಂತಿದೆ.

ಈಗಲೇ ಎಚ್ಚೆತ್ತುಕೋಬೇಕು, ಇಲ್ಲವಾದರೆ ಮುಂದಿನ ದಿನ ಕಠಿಣವಾಗಿ ಆರ್ಥಿಕ ದುಸ್ಥಿತಿ ಪ್ರತಿ ಮನೆಯಲ್ಲೂ ಬುಗಿಲೇಳುವುದು ಖಂಡಿತ.
ಸರ್ಕಾರ ಈ ಬಗ್ಗೆ ಗಮನಕೊಡಬೇಕು, ಮನೆ, ಅಂಗಡಿ, ಉದ್ದಿಮೆಗಾಗಿ ಅವಲಂಭಿತರಾಗಿರುವ ಅದೆಷ್ಟೋ ಮಂದಿಗೆ ಒಂದು ತಿಂಗಳ ಬಾಡಿಗೆ ಹಣ ಕಟ್ಟದಿರಲು ಆದೇಶಿಸಬೇಕು…
ಬಾಡಿಗೆ ಮಾಲೀಕ ಪೀಪಾಸುಗಳಿಗೂ ನಮ್ಮ ದೇಶದ ಸಂಕಷ್ಟ ಅರಿವಿಗೆ ಬರಬೇಕು…
ಇಷ್ಟು ದಿನ ಟ್ಯಾಕ್ಸು, ಮಣ್ಣು-ಮಸಿ ಅಂತ ಸರ್ಕಾರದ ಹೊಟ್ಟೆ ತುಂಬಿಸಿರುವ ಅದೆಷ್ಟೋ ಮಂದಿಗೆ ಈ ಸಮಯವಾದರೂ ಸರ್ಕಾರ ಆಸರೆಯಾಗಬೇಕು…
ಇದು ಸರ್ಕಾರದ ಕದ ತಟ್ಟುವವರೆಗೂ ಷೇರ್ ಮಾಡಿ…
(ವಿ.ಸೂ: ಸರಿ ಎನಿಸಿದರೆ ಮಾತ್ರಾ!!)