News (ಸುದ್ದಿ)

ಮತ್ತೆ ರೀ ಎಂಟ್ರೀ ಸಿಂಗಂ? – ಅಣ್ಣಾಮಲೈ ರಾಜೀನಾಮೆ ಮತ್ತು ರಾಜಕೀಯ: heggaddesamachar

Spread the love

ಪೊಲೀಸ್ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿ ಅಭಿಮಾನಿಗಳನ್ನು ಗೆದ್ದ ದಕ್ಷ ಪೋಲಿಸ್ ಅಧಿಕಾರಿ,
ಅವರು ತೋರಿದ ಕಾರ್ಯದಕ್ಷತೆ, ಮಾಡುತ್ತಿದ್ದ ಕಾರ್ಯವೈಖರಿ ಸದೃಢ ಸಮಾಜದ ಏಳಿಗೆಗೆ ತುಂಬಾ ಒಳ್ಳೆಯ ಅಡಿಪಾಯವನ್ನು ಹಾಗೂ ಉತ್ತಮ ರೀತಿಯ ಕಾರ್ಯಚಟುವಟಿಕೆಗಳನ್ನು ಒದಗಿಸಿದೆ ಎಂದರೆ ಅದು ಕರ್ನಾಟಕಕ್ಕೆ ಸಿಕ್ಕ ಸೌಭಾಗ್ಯ.
ಪೊಲೀಸ್ ಅಧಿಕಾರಿಯಾಗಿ ಒಂಬತ್ತು ವರ್ಷ ಕಳೆದು ಹತ್ತು ವರ್ಷ ಆಗುವಷ್ಟರಲ್ಲಿ ಪೊಲೀಸ್ ವೃತ್ತಿಯಿಂದ ದೂರಸರಿದದ್ದು ತುಂಬಾ ಜನರಿಗೆ ನೋವುಂಟು ಮಾಡಿದ ಸಂಗತಿ.
ದಕ್ಷ ಅಧಿಕಾರಿಯನ್ನು ಕಳೆದುಕೊಳ್ಳಬೇಕಲ್ವ ಎನ್ನುವುದು ಎಲ್ಲರಿಗೂ ಬೇಸರದ ವಿಷಯವೇ.
ಆದರೆ ಅವರ ಪ್ರಕಾರ ಬದುಕಿನ ಎಲ್ಲ ಮಜಲುಗಳನ್ನು ನಾವು ಅನುಭವಿಸಬೇಕು ಹಾಗೂ ಪೊಲೀಸ್ ಅಧಿಕಾರಿಯಾಗಿ ಮಾತ್ರ ಇದ್ದು ಅದನ್ನು ಅನುಭವಿಸಲು ಸಾಧ್ಯವಿಲ್ಲ ಎನ್ನುವ ಮಾತು ಅವರದು.
ಪೊಲೀಸ್ ಆಗಿದ್ದಾಗ ಕುಟುಂಬದವರನ್ನು ಹಾಗೂ ಕುಟುಂಬದ ಕಾರ್ಯಕ್ರಮಗಳನ್ನು ತುಂಬಾ ಮಿಸ್ ಮಾಡುತ್ತೇವೆ.


ಹೌದು ದಕ್ಷ ಪೊಲೀಸ್ ವೃತ್ತಿಯಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ, ವೈಯಕ್ತಿಕವಾಗಿ ಕೆಲವೊಂದು ಖುಷಿ ಕಳೆದುಕೊಳ್ಳುತ್ತೇವೆ.
ನಾವು ಮನುಷ್ಯರಾಗಿ ಎಲ್ಲವನ್ನು ಅನುಭವಿಸಬೇಕು ಅನುಭವ ಪಡೆದರೆ ಮಾತ್ರ ಉತ್ತಮ ಬದುಕು ನಿರ್ಮಾಣ ಸಾಧ್ಯ.
ಪರೀಕ್ಷೆಗಳು ಎಲ್ಲವೂ ಕಷ್ಟವಾಗಿರುತ್ತದೆ, ಆದರೆ ಪರೀಕ್ಷೆಯನ್ನು ಗುರಿಯಾಗಿಸಿಕೊಂಡು ನಾವು ಅದರಲ್ಲಿ ಸಮಯ ಕಳೆಯಬಾರದು, ಒಂದು ಪರೀಕ್ಷೆಯಲ್ಲಿ ವಿಫಲರಾದರೆ ಇನ್ನೊಂದು ಘಟ್ಟದ ಪರೀಕ್ಷೆಗೆ ತಯಾರಿ ನಡೆಸಬೇಕು ಪರೀಕ್ಷೆಯೊಂದೇ ಜೀವನವನ್ನು ರೂಪಿಸುವುದಿಲ್ಲ, ಅಥವಾ ಸರ್ಕಾರಿ ವೃತ್ತಿ ಮಾತ್ರವೇ ನಮ್ಮ ಬದುಕಿನ ಉನ್ನತ್ತಿಗೆ ಸಹಕಾರಿಯಾಗಿಲ್ಲ, ಪ್ರತಿಯೊಂದರಲ್ಲಿಯೂ ನಾವು ಪಡೆಯುವುದಾದರೆ ಉತ್ತಮ ರೀತಿಯ ಫಲಿತಾಂಶ ದೊರಕುತ್ತದೆ.
ಆದರೆ ಅದಕ್ಕೆ ಪರಿಶ್ರಮ ತುಂಬಾ ಮುಖ್ಯ, ಪರಿಶ್ರಮ ಹೊರತಾಗಿದ್ದು ಯಾವುದೂ ಇಲ್ಲ.
ಮತ್ತೆ ಪುಸ್ತಕ ಓದುವ ಹವ್ಯಾಸ ತುಂಬಾ ಒಳ್ಳೆಯದು ಸಾಧಕರನ್ನು ಜೀವನವನ್ನು ನೋಡಿದಾಗ ಪುಸ್ತಕ ಓದದವರು ಯಾರು ಇಲ್ಲ,
ಸಮಾಜ ಬದಲಾಗಬೇಕಾದರೆ ನಾವು ನಮ್ಮ ಕಾರ್ಯವೈಖರಿಯನ್ನು ದಕ್ಷತೆಯಿಂದ ಮಾಡಬೇಕು. ನಾವು ಮಾಡುವ ಕಾರ್ಯದಲ್ಲಿ ನಮ್ಮಲ್ಲೇ ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕು. ನಮ್ಮ ಕಾರ್ಯಕ್ಷೇತ್ರದಲ್ಲಿ ಹೊಸ ರೀತಿಯ ಪ್ರಯೋಗಗಳನ್ನು ಅಥವಾ ಹೊಸ ರೀತಿಯ ಬದಲಾವಣೆಗಳನ್ನು ತಂದಲ್ಲಿ ಮಾತ್ರ ಉತ್ತಮ ರೀತಿಯ ಕಾರ್ಯಕ್ಷೇತ್ರ ರೂಪುಗೊಳ್ಳಲು ಸಾಧ್ಯ.


ತಮಿಳುನಾಡಿನಲ್ಲಿ ನಾಯಕತ್ವದ ಕೊರತೆ ತುಂಬಾ ಇದೆ ಹಾಗಾಗಿ ಉತ್ತಮ ನಾಯಕತ್ವ ಗುಣವನ್ನು ಯುವಕರಿರಲ್ಲಿ ಹುರಿದುಂಬಿಸಿ ಉತ್ತಮ ಸಮಾಜ ನಿರ್ಮಾಣ ಮಾಡುವ ಕನಸಿದೆ ಮತ್ತು ಮುಂದಿನ 2021 ನೇ ಲೋಕಸಭಾ ಎಲೆಕ್ಷನ್ ಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಇಚ್ಛೆಯಿದೆ. ಉತ್ತಮ ಬದಲಾವಣೆಗಳೊಂದಿಗೆ,
ನಾವು ಉತ್ತಮ ರೀತಿಯ ಹಾದಿಗಳಲ್ಲಿ ಉತ್ತಮ ಪ್ರಯೋಗಗಳನ್ನು ಮಾಡಿದರೆ ಉತ್ತಮ ಸರ್ಕಾರ ಮತ್ತು ಸಮಾಜದ ಸೃಷ್ಟಿ ಸಾಧ್ಯ. ಶಿಕ್ಷಣ ಒಂದೇ ನಮ್ಮ ಬದುಕನ್ನು ಬದಲಾಯಿಸುವುದಿಲ್ಲ,ನಮ್ಮೊಳಗಿನ ಉತ್ತಮ ವ್ಯಕ್ತಿತ್ವ ವಿಕಸನವನ್ನು ಹೊರಚೆಲ್ಲಿದರೆ ಉತ್ತಮವಾದ ಜೀವನ ನಿರ್ಮಾಣ ಸಾಧ್ಯ ಎನ್ನುತ್ತಾರೆ.
ನಮ್ಮ ಈ ಜೀವನದಲ್ಲಿ ಮಾತ್ರ ಸೇವೆಗೈಯಲು ಅವಕಾಶ ದೊರಕುವುದು ಅದನ್ನು ಕಳೆದುಕೊಳ್ಳುವುದು ಬೇಡ.
ಉತ್ತಮ ನಾಯಕರ ಅಗತ್ಯ‌ತುಂಬಾ ಇದೆ. ಉತ್ತಮ ಕಾರ್ಯಕ್ಷೇತ್ರ ಹಾಗೂ ಕಾರ್ಯದಕ್ಷತೆ ಅಷ್ಟೇ ಪ್ರಮುಖ ಪಾತ್ರವಹಿಸುತ್ತದೆ ನಮ್ಮಿಂದ ಬದಲಾವಣೆ ತರಲು ಸಾಧ್ಯ ಅದರ ಬಗ್ಗೆ ನಾವೆಲ್ ಪ್ರಯತ್ನಪಡಬೇಕು ಅದಕ್ಕಾಗಿ ನಾವು ಶ್ರಮಪಡಬೇಕು ಹಾಗಾಗಿ
ಸೇವೆ, ರಾಜಕೀಯ, ಶಿಕ್ಷಣ ಎಲ್ಲವೂ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಬದುಕಿಗೆ ಇವೆಲ್ಲವೂ ಅನುಭವಗಳನ್ನು ನೀಡುತ್ತದೆ ಮಹತ್ವಪೂರ್ಣ ಆದವುಗಳು.

Leave a Reply

Your email address will not be published. Required fields are marked *