ಮಡ್ಡಿಗೆ ಕರ್ನಾಟಕ ಫಿದಾ: heggaddesamchar

Spread the love

ಬಹುನಿರೀಕ್ಷಿತ ಮಡ್ಡಿ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಿನಿವಲಯದಲ್ಲಿ ಭಾರಿ ಪ್ರಶಂಸೆಯನ್ನ ಬಾಚಿಕೊಂಡಿದೆ‌. ಚಿತ್ರದ ಹಿನ್ನಲೆ ಸಂಗೀತಕ್ಕಂತೂ ಇಡೀ ಕರ್ನಾಟಕದ ಸಿನಿ ಪ್ರೇಕ್ಷಕರು ರವಿ ಬಸ್ರೂರ್ ಗೆ ಶಹಬ್ಬಾಸ್ ಎನ್ನುತ್ತಿದ್ದಾರೆ‌.

ಹೊಸಬರು, ಪಳಗಿದ ತಂತ್ರಜ್ಞರ ಜೊತೆ ಸೇರಿ ಅಂತರಾಷ್ಟೀಯ ಮಟ್ಟದಲ್ಲಿ ಸಿದ್ದವಾದ ಹೊಸ ಪ್ರಯತ್ನ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಗೊಳ್ಳಲಿದೆ, ಪಿಕೆ೭ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ಪ್ರೇಮ್ ಕೃಷ್ಣ ದಾಸ್ ನಿರ್ಮಾಣದಲ್ಲಿ ಡಾ|| ಪ್ರಗ್ಬಲ್ ದಾಸ್ ನಿರ್ದೇಶನದ ಮೊದಲ ಹೆಜ್ಜೆ

ಹೊಸ ಪ್ರಯೋಗಾತ್ಮಕ ಸಿನಿಮಾಗಳ ಅಬ್ಬರ ಈಗಂತೂ ಎಲ್ಲಾ ಕಡೆ ಅಬ್ಬರಿಸುತ್ತಿದೆ ಆ ದಿಸೆಯಲ್ಲಿ ಮತ್ತೊಂದು ಪ್ರಯೋಗಾತ್ಮಕ ಸಿನಿಮಾ ಜೊತೆ ಬರುತ್ತಿದ್ದಾರೆ ನಿರ್ದೇಶಕ ಪ್ರಗ್ಬಲ್ ದಾಸ್ ಭಾರತೀಯ ಸಿನಿಮಾ ಇತಿಹಾಸದಲ್ಲೇ ಸಂಪೂರ್ಣ ಮಡ್ ರೇಸ್‌ನ ಸಿನಿಮಾ ಈವರೆಗೂ ಮಾಡಿಲ್ಲ ಇದೀಗ ಆ ಸಾಹಸಕ್ಕೆ ಪ್ರಗ್ಬಲ್ ದಾಸ್ & ಟೀಮ್ ಕೈ ಹಾಕಿದೆ,

ಉತ್ತಮ ಗುಣಮಟ್ಟದ ಸಿನಿಮಾ ನೀಡುವ ಉದ್ದೇಶದಿಂದ, ಸರಾಸರಿ ಐದು ವರ್ಷದಿಂದ ಮಡ್ ರೇಸ್ ಬಗ್ಗೆ ಕಲಿತುಕೊಂಡು ಕಲಾವಿದರಿಗೆ ಟ್ರೈನಿಂಗ್ ನೀಡಿ ಡ್ಯೂಪ್ ಇಲ್ಲದೆ ಚಿತ್ರೀಕರಿಸಿರುವುದೇ ಚಿತ್ರದ ವಿಶೇಷ ರಿಯಲ್ ಜೀಪ್‌ಗಳಲ್ಲಿ ರಿಯಲ್ ರೇಸ್ ಹಾಗೂ ರಿಯಲ್ ಎಕ್ಸಿಡೆಂಟ್‌ಗಳ ನೈಜತೆ ಸೆರೆಹಿಡಿಯಲು ಸಿನಿಮಾದ ಯಾವ ಭಾಗವೂ ಕಮ್ಮಿ ಎನಿಸದಂತೆ ಭಾರಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ,

“ಮಡ್ಡಿ” ಎಂಬ ಶೀರ್ಶಿಕೆಯಲ್ಲಿ ರೋಚಕ ಕಥೆಯೊಂದಿಗೆ ಸಿನಿಮಾ ಹೆಣೆಯಲಾಗಿದೆ, ಅಡ್ವಂಚರಸ್ ಆಕ್ಷನ್ ಶೈಲಿಯ ಚಿತ್ರವಾಗಿದ್ದು ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಗೊಳ್ಳಲಿದೆ, ಮೋಷನ್ ಪೋಸ್ಟರ್ ಮೂಲಕ ಅಬ್ಬರದ ಸದ್ದು ಮಾಡಿರುವ ಮಡ್ಡಿ ಟೀಸರ್ ಮೂಲಕ ಸದ್ದು ಮಾಡಲು ಸಜ್ಜಾಗಿದೆ, ಮಡ್ಡಿ ಚಿತ್ರೀಕರಣದಲ್ಲಿ ೧೩ಕ್ಕೂ ಹೆಚ್ಚು ಕ್ಯಾಮಾರಗಳನ್ನ ಬಳಸಲಾಗಿದ್ದು ಇನ್ನು ತಾಂತಿಕ ವರ್ಗಕ್ಕೆ ಬಂದರೆ, ಕೆ.ಜಿ.ಎಫ್ ಸಿನಿಮಾದ ಮೂಲಕ ಭಾರತದಾದ್ಯಂತ ಸದ್ದು ಮಾಡಿರುವ ರವಿ ಬಸ್ರೂರ್ ಚಿತ್ರಕ್ಕೆ ಸಂಗೀತ ಹಾಗೂ ಸೌಂಡ್ ಡಿಸೈನ್ ಮಾಡಿದ್ದು ತಮಿಳಿನ ರಾಕ್ಷಸನ್ ಚಿತ್ರದ ಮೂಲಕ ಸಂಕಲನದಲ್ಲಿ ಭಾರಿ ಹೆಸರು ಮಾಡಿದ ಸ್ಯಾಲ್ ಲೋಕೇಶ್ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ, ಇಂಡಿಯನ್ ಇಂಗ್ಲೀಷ್ ಸಿನಿಮಾ ಮೂಲಕ ಛಾಯಾಗ್ರಹಣದಲ್ಲಿ ಹೆಸರು ಮಾಡಿರುವ ಕೆ.ಜಿ.ರತೀಶ್ ಈ ಚಿತ್ರಕ್ಕೆ ಕ್ಯಾಮರಾಮನ್ ಹಾಗೂ ಕಲರಿಸ್ಟ್ ಆಗಿ ಕೆಲಸ ಮಾಡಿದ್ದಾರೆ,

ಕಳೆದ ಐದು ವಷರ್ದಿಂದ ಮಡ್ ರೇಸ್ ಬಗ್ಗೆ ಅಧ್ಯಯನ ನಡೆಸಿ ಈ ಸಿನಿಮಾ ನಿರ್ದೇಶಿಸಿರುವ ಪ್ರಗ್ಬಲ್ ದಾಸ್, ಮಡ್ ರೇಸ್ ಎಂಬ ಕಲೆಯನ್ನ ನೋಡುಗ ಚಿತ್ರಮಂದಿರದಲ್ಲಿ ತನ್ನ ಕುರ್ಚಿಯ ತುದಿಯಲ್ಲಿ ಕುಳಿತು ನೋಡುವಂತೆ ದೃಶ್ಯಗಳನ್ನ ಹೆಣೆದಿದ್ದಾರಂತೆ, ರೇಸ್‌ನಲ್ಲಿ ಗೆಲ್ಲಬೇಕೆನ್ನುವವರ ಭಾವುಕತೆ ಸಾವಿನ ತುದಿಯನ್ನು ಕಂಡುಬಂದಂತೆ ಆ ಭಯಾನಕ ದೃಶ್ಯದೊಳಗಿನ ಅವರ ಧೈರ್ಯ ನೋಡುಗನನ್ನ ಅಚ್ಚರಿಪಡಿಸದೆ ಇರಲು ಸಾಧ್ಯವಿಲ್ಲ ಎಂದರು,

ನೈಜ್ಯ ಜಾಗದಲ್ಲೇ ಕ್ಯಾಂಪ್ ಹಾಕಿ ಚಿತ್ರೀಕರಿಸಿದ್ದು, ಬಹುತೇಕ ಹೊಸಬರೇ ಈ ಸಿನಿಮಾದಲ್ಲಿ ನಟಿಸಿದ್ದಾರೆ, ಯುವನ್, ರಿಧಾನ್ ಕೃಷ್ಣ ಅನುಷಾ ಸುರೇಶ್, ಅಮಿತ್ ಶಿವದಾಸ್ ನಾಯರ್, ಹರಿರ್ಶ ಪೆರಾಡಿ, ವಿಜಯನ್, ರೆಂಜಿ ಪೆನಿಕರ್ ತಾರಾಂಗಣದಲ್ಲಿದ್ದು, ಚಿತ್ರದ ಟೀಸರ್ ಇಂದು ಚಿತ್ರದ ಟೀಸರ್ ಬಿಡುಗೊಂಡಿದ್ದು, ಶೀಘ್ರದಲದಲಿ ಅಂದರೆ ಇದೇ ಎಪ್ರಿಲ್ ಅಥವಾ ಮೇ ಹೊತ್ತಿಗೆ ಸಿನಿಮಾ ಚಿತ್ರಮಂದಿರದಲ್ಲಿ ಅಬ್ಬರಿಸಲಿದೆ ಎಂದು ಚಿತ್ರತಂಡ ತಿಳಿಸಿದೆ.

ರಿ.ಹೆಗ್ಗದ್ದೆ ಸಮಾಚಾರ್.ಕಾಮ್ ಬೆಂಗಳೂರು

Leave a Reply

Your email address will not be published. Required fields are marked *