News (ಸುದ್ದಿ)

ಮಂಡ್ಯದಲ್ಲಿ ಪತ್ರಿಕಾ ಸಂಪಾದಕರ ಪ್ರತಿಭಟನೆ: heggaddesamachar.com

Spread the love

ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಸರ್ಕಾರಿ ಜಾಹೀರಾತು ಬಾಕಿ ಹಣ ಬಿಡುಗಡೆ ಹಾಗೂ ಪ್ರೋತ್ಸಾಹ ರೂಪದಲ್ಲಿ ಕೋವಿಡ್-19 ರ ಜಾಹೀರಾತು ಬಿಡುಗಡೆ ಮಮಾಡುವಂತೆ ಒತ್ಜಾಯಿಸಿ ಪತ್ರಿಕೆ ಸಂಪಾದಕರು ಪ್ರತಿಭಟನಾ ಧರಣಿ ನಡೆಸಿದರು
ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಎದುರು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು
ಕೋವಿಡ್-19ಕರೋನಾ ಹೆಮ್ಮಾರಿ ತನ್ನ ಅಟ್ಟಹಾಸ ಮೆರೆಯುತ್ತಿರುವ ಈ ಬಿಕ್ಕಟ್ಟಿನ ವೇಳೆ ತತ್ತರಿಸುತ್ತಿರುವ ಪತ್ರಕರ್ತರನ್ನು ಕೊರೋನಾ ವಾರಿಯರ್ಸ್ ಎಂದು ಹೆಸರಿಗಷ್ಟೆ ಹೇಳಿದ್ದು ಬಿಟ್ಟರೆ ಅವರ ಸಂಕಷ್ಟಕ್ಕೆ ನೆರವಾಗದಿರುವುದು ದುಃಖದ ವಿಷಯವಾಗಿದೆ.

ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಪತ್ರಕರ್ತರು ಇದ್ದು .
ಲಾಕ್ ಡೌನ್ ದುಸ್ಥಿತಿಯಲ್ಲಿ ಜಾಹೀರಾತುಗಳೇ ಬರದೆ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿವೆ. ಜಾಹೀರಾತುಗಳೆ ಪತ್ರಿಕೆಗಳಿಗೆ ಆರ್ಥಿಕ ಜೀವಾಳವಾಗಿವೆ ಎಂದು ತಿಳಿಸಿದರು
ಸರ್ಕಾರಿ ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ , ಪ್ರಾದೇಶಿಕ ಮತ್ತು ರಾಜ್ಯಮಟ್ಟದ ಪತ್ರಿಕೆಗಳು ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಸರ್ಕಾರ ಜಾಹೀರಾತು ನೀಡಿರುವ ಬಾಕಿ ಬಿಲ್ಲು ಸುಮಾರು 40 ಕೋಟಿಗೂ ಹೆಚ್ಚು ಹಣ ಬಿಡುಗಡೆಯಾಗಬೇಕಾಗಿದೆ. ಈ ಬಾಕಿ ಜಾಹೀರಾತು ಹಣ ಬಿಡುಗಡೆಮಾಡಬೇಕು. ಪ್ಯಾಕೇಜ್ ರೂಪದಲ್ಲಿ ಜಾಹೀರಾತನ್ನು ನೀಡುವ ಮೂಲಕ ಪತ್ರಿಕೆಗಳ ನೆರವಿಗೆ ಬರಬೇಕು ಆದರೆ ಸರ್ಕಾರ ದಿವ್ಯ ನಿರ್ಲಕ್ಷ್ಯ ತೊರಿದೆ
ಗುಜರಾತಿನಲ್ಲಿ ಮಾಧ್ಯಮಗಳಿಗೆ ಸರ್ಕಾರಿ ಜಾಹೀರಾತಿನ ಬಾಕಿ ಇದ್ದ ಪೂರ್ಣ ಮೊತ್ತವನ್ನು ಬಿಡುಗಡೆ ಮಾಡುವ ಮೂಲಕ ವಿಶೇಷ ಪ್ಯಾಕೇಜ್ ರೂಪದಲ್ಲಿ ನೆರವು ನೀಡಿದೆ ರಾಜ್ಯದಲ್ಲಿಯೂ ಅದೇ ಮಾದರಿಯಲ್ಲಿ ಪ್ಯಾಕೇಜ್ ರೂಪದಲ್ಲಿ ಕೂಡಲೆ ಜಾಹೀರಾತಿನ ಬಾಕಿ ಮೊತ್ತವನ್ನು ಬಿಡುಗಡೆ ಮಾಡಬೇಕು.
ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಪ್ರೋತ್ಸಾಹ ರೂಪದಲ್ಲಿ ಜಾಹೀರಾತು ನೀಡಬೇಕು.ಎಂದು ಒತ್ತಾಯಿಸಿದರು
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ ಸಿ ಮಂಜುನಾಥ್. ಸೋಮಶೇಖರ್ ಕೆರಗೋಡು. ಜನೋದಯ ಮಂಜುಳ ಕಿರುಗಾವಲು. ಮತ್ತಿಕೆರೆ ಜಯರಾಂ ಬಿ.ಪಿ.ಪ್ರಕಾಶ್. ಜನಯೋಗಿ ಎಂ. ಎಸ್ ಮೂರ್ತಿ. ಚಲುವರಾಜು ಇತರಿದ್ದರು

ರಿ : heggaddesamachar.com

Leave a Reply

Your email address will not be published. Required fields are marked *