ಮಂಗ್ಲಿ ಕನ್ನಡದಲ್ಲೂ ಹಾಡೇ ಬಿಟ್ಲು : heggaddesamachar

Spread the love

ಕಣ್ಣೇ ಅಧಿರಿಂದಿ ಹಾಡಿನ ಮೂಲಕ ಹುಚ್ಚೆಬ್ಬಿಸಿ ಬಿಟ್ಟಿದ್ದ ಮಂಗ್ಲಿ ಇದೀಗ ಕನ್ನಡದಲ್ಲೂ ಹಾಡಿ ಹೋಗಿದ್ದಾಳೆ. ಮೊದಲ ಬಾರಿಗೆ ಕರಿಯ ಐ ಲವ್ ಯೂ ಸಿನಿಮಾಗೆ ಈಕೆ ಧ್ವನಿಯಾಗಿದ್ದು ಹಾಡಿನ ರೆಕಾರ್ಡಿಂಗ್ ಕೂಡ ಈಗಾಗಲೇ ಮುಗಿದಿದೆ.

‘ಕರಿಯಾ ಐ ಲವ್ ಯೂ’ ಹೊಸಬರ ಚಿತ್ರವಾಗಿದ್ದು ಹಳ್ಳಿಯಲ್ಲಿ ನಡೆಯುವ ಪ್ರೇಮಕಥೆಯನ್ನ ಹೊಂದಿದೆಯಂತೆ.

ರಾಬರ್ಟ್ ಸಿನಿಮಾ ಹಾಡನ್ನ ಮಂಗ್ಲಿ ಹಾಡಿದ ಮೇಲಂತೂ ಆಕೆಗೆ ಫ್ಯಾನ್ಸ್ ಫಾಲೋವರ್ಸ್ ಜಾಸ್ತಿನೆ ಆಗಿದ್ರು. ಆಕೆಯಿಂದ ಕನ್ನಡ ಹಾಡನ್ನು ಹಾಡಿಸಿ ಎನ್ನುವ ಒತ್ತಾಯವೂ ಜಾಸ್ತಿ ಆಗಿತ್ತು ಅದಕ್ಕೆ ತಕ್ಕಂತೆ ಇದೀಗ ಮಂಗ್ಲಿ ಮೊದಲ ಕನ್ನಡ ಹಾಡು ಹಾಡಿದ್ದು, ಹಾಡಿನ ಬಿಡುಗಡೆಗೆ ಅವರ ಕನ್ನಡ ಅಭಿಮಾನಿಗಳು ಕಾದು ಕುಳಿತಿದ್ದಾರೆ… ಈ ಹಾಡಿಗೆ ಲೋಕಿ ಎಂಬುವವರು ಸಂಗೀತ ನೀಡಿದ್ದಾರೆ.

ರಿ: ಹೆಗ್ಗದ್ದೆ ಸಮಾಚಾರ್.ಕಾಮ್

Leave a Reply

Your email address will not be published. Required fields are marked *