Literature (ಸಾಹಿತ್ಯ)

“ಭೂತಾಯಿ ಅಳಲು ” : heggaddesamachar.com

Spread the love

ಸಾಕು – ಸಾಕಾಗಿದೆ ಈ ನನ್ನ ಒಡಲ ಒಳಗಿನ ದಗೆಯು,
ಹೇಳಿಕೊಳ್ಳಲಿ ನಾ… ಯಾರಲ್ಲಿ ಇದರ ಪರಿಯು !
ನೀಡಿದೆನು ನಾ ನಿನಗೆ ಬದುಕಲು ಆಸರೆಯ,
ಮರಳಿ ನೀ ನನಗೆ ಕೊಟ್ಟಿದ್ದು ಇದೆಂಥ ಉಡುಗೊರೆಯ !!

ಕಾಣದ ನನ್ನೊಡಲ ಅಂತರಜಾಲವನ್ನು ಪಡೆಯಲು,
ಕಬ್ಬಿಣದ ಸಲಕೆಯಿಂದ ನನ್ನ ಗರ್ಭ ಚೀಲವನ್ನು ಹರಿದ ಪಾಪಿ ನೀನು,
ಆದರೂ… ನಾ ಸಹಿಸಿಕೊಂಡೆ…
ನೀ ನನ್ನ ಮಗುವೆಂದು. //1//

ನನ್ನ ಮೇಲಿನ ಅತಿಯಾದ ಆಸೆಗಾಗಿ,
ನಿನ್ನ ಒಡಹುಟ್ಟಿದ ಸಂಬಂಧವನ್ನೇ ನೀ ಕೆಡೆಸಿಕೊಂಡೆ.
ನನ್ನನ್ನು ಮಧ್ಯದಲ್ಲಿ ನೀ… ಬಳಸಿಕೊಂಡು,
ನಿನ್ನವರನ್ನು ನೀ… ಬಳಸಿಕೊಂಡು,
ನಿನ್ನವರನ್ನು ನೀ…ದೂರಮಾಡಿ ಕೊಂಡೆ.
ಆದರೂ ಅರಿಯು ಮೂಡಿಸಲಿಲ್ಲ…
ನಿನ್ನ ಮೂರ್ಖ ತನದ ಬುದ್ಧಿ. //2//

ನನ್ನ ಬಂಧು -ಬಾಂದವರಾದ ವೃಕ್ಷಗಳನ್ನು ನೀ ಕಡಿದು,
ನಿನ್ನ ದುರಾಸೆಯ ಸಾಮ್ರಾಜ್ಯವನ್ನು ನೀ ಕಟ್ಟಿ ಕೊಂಡೆ.
ಹಚ್ಚ -ಹಸಿರು ತಂಪಿನಿಂದ ಕೂಡಿದ ನನ್ನ ಮೈಯ ಮೇಲೆ…
ಶಾಖದ ಜ್ವಾಲೆಯನ್ನೇ ಬಿರುವಂತೆ ನೀ ಮಾಡಿದೆ.
ಆದರೂ ನಾ ನಿನ್ನ ಶಪಿಸಲಿಲ್ಲ,
ನೀ.. ನನ್ನ ಮಕ್ಕಳೆಂದು. //3//

ಆರ್. ಕೆ. ಮಂಜುನಾಥ್ ಶೆಟ್ಟಿ,
ಉಳ್ಳೂರು – ಕುಂದಾಪುರ.

Leave a Reply

Your email address will not be published. Required fields are marked *