ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ : heggaddesamachar

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ    

  ಭಾರತ ಹುಲಿಗಳ ನಾಡು ಎಂದು ಕರೆಸಿಕೊಂಡಿದ್ದು ರಾಷ್ಟ್ರೀಯ ಪ್ರಾಣಿಯಾಗಿ ಗುರುತಿಸಿ ಕೊಂಡಿದ್ದರು ಹುಲಿ ಎಂದರೆ ಭಯ‌ಮೂಡುವುದು ಸಹಜ. ಗಾಂಭೀರ್ಯ ನಡಿಗೆ, ಹೊಳೆವಕಣ್ಣು, ನೇರ ನೋಟ, ಹೊಂಬಣ್ಣದ ಮೈ, ಮೈಮೇಲೆ ಮೂಡಿರುವ ಪಟ್ಟೆಗಳಿರುವ ಹುಲಿಯನ್ನು ನೋಡಲು ಎಲ್ಲರು ‌ಇಷ್ಟ ಪಡುತ್ತಾರೆ ಆದರೆ ಎಲ್ಲಿಯಾದರೂ ಹುಲಿಯ ಗರ್ಜನೆ ಕೇಳಿದರೆ ಖಂಡಿತ ಬೆಚ್ಚಿ ಬೀಳುತ್ತೇವೆ.    ಜುಲೈ 29 ರಂದು ನಡೆದ ವಿಶ್ವ ಹುಲಿ ದಿನಾಚರಣೆಯಂದು ಮುಂದಿನ ದಿನಗಳಲ್ಲಿ ಹುಲಿಗಳ ಸಂಖ್ಯೆ ದ್ವಿಗುಣವಾಗುವ  ನಿರೀಕ್ಷೆಯ ಸಂಕಲ್ಪವನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ( N T C A) ತೊಟ್ಟಿದೆ. ಹುಲಿ ಸಂರಕ್ಷಣೆಯಲ್ಲಿ ಭಾರತ ಮೂಂಚುಣಿಯಲ್ಲಿದ್ದು ಕರ್ನಾಟಕ 2 ನೇ ಸ್ಥಾನದಲ್ಲಿದೆ.
  


  2010 ರಲ್ಲಿ ಮೊದಲ ಬಾರಿಗೆ ಹುಲಿಗಳ ಸಂತತಿಯಲ್ಲಿ ಇಳಿಕೆ ಗಮನಿಸಿದ  ಅಂತಾರಾಷ್ಟ್ರೀಯ ಶೃಂಗ ಸಭೆಯಲ್ಲಿ ಹುಲಿಗಳ ಅವನತಿಯನ್ನು ತಡೆಯುವ ಹಾಗೂ ಅವುಗಳ ಸಂರಕ್ಷಣೆಗಾಗಿ  ಇಂಟರ್ ನ್ಯಾಶನಲ್ ಟೈಗರ್ ದಿನವನ್ನು ಆಚರಿಸಲು ನಿರ್ಧರಿಸಲಾಯಿತು.
  ರಾಷ್ಟ್ರದಲ್ಲಿ ಅತಿ ಹೆಚ್ಚು ಹುಲಿಗಳಿರುವ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕ ರಾಜ್ಯಕ್ಕೆ ಸಂದಿದೆ. ಭಾರತದ 18 ರಾಜ್ಯ ಹುಲಿ ಸಂರಕ್ಷಣಾವಲಯ ಹೊಂದಿದ್ದು ಮೂರು ಲಕ್ಷದ ಒಂದು ಸಾವಿರ (ಅಂದಾಜು ಗಣತಿ) ವಿಶ್ವದ ಒಟ್ಟು ಹುಲಿಗಳ ಸಂಖ್ಯೆಯಲ್ಲಿ  70 % ರಷ್ಟು ಹುಲಿಗಳು ಭಾರತದಲ್ಲಿದೆ. ಭಾರತದ ಎಲ್ಲಾ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳಿವೆ. ಬಂಡಿಪುರ, ನಾಗರಹೊಳೆ, ಭದ್ರ, ಬಿಳಿಗಿರಿ ರಂಗನ ಬೆಟ್ಟ, ಮತ್ತು ಕಾಳಿ ಹುಲಿ ಸಂರಕ್ಷಿತ ಪ್ರದೇಶ, ಪಶ್ಚಿಮ ಘಟ್ಟಗಳ ಮತ್ತು ಪೂರ್ವ ಘಟ್ಟ ಪ್ರದೇಶಗಳ ಕಾಡುಗಳು  ಹುಲಿವಾಸಕ್ಕೆ ಉತ್ತಮ ಸ್ಥಳ.ಹುಲಿ ಆಹಾರ ಸತಪಳಿಯಲ್ಲಿ ಮೇಲಸ್ತರದಲ್ಲಿದ್ದು ಪರಿಸರ ವ್ಯವಸ್ಥೆಯ ಪ್ರತೀಕ . ಹುಲಿ ಇರುವ ಅರಣ್ಯ ಪರಿಸರ ಸಮೃದ್ಧ ಹಾಗೂ ಸಮತೋಲನ ದೊಂದಿಗೆ ಜೀವ ವೈವಿಧ್ಯತೆಯಿಂದ ಕುಡಿರುತ್ತದೆ.

  ಹುಲಿ ತನ್ನ ಭೂಮಿ ಮಿತಿಯೊಳಗೆ ವಾಸಿಸಲು ತನ್ನ ಪ್ರಾಂತ್ಯವನ್ನು ಸ್ಪಷ್ಟವಾಗಿ‌ ನಿಗದಿಮಾಡಿಕೊಂಡು ಅದರೊಳಗೆ ಜೀವಿಸುವ ಪ್ರಾಣಿ. ಅರಣ್ಯದಲ್ಲಿ ಒಂದು ಹುಲಿಗೆ 15 ರಿಂದ 16 ಚದರ ಕಿಮೀ ಜಾಗ ಬೇಕಾಗುತ್ತದೆ. ಆದರೆ ಇತ್ತೀಚೆಗೆ ಅಷ್ಟು ಸ್ಥಳಗಳು ಹುಲಿಗೆ ದೊರೆಯುತ್ತಿಲ್ಲ ಎನ್ನುತ್ತಾರೆ ನಾಗರಹೊಳೆ ಅಭಯಾರಣ್ಯ ದ ಟೈಗರ್ ಸಫಾರಿ ನಡೆಸುವವರು.ನೀರಿನ ಆಶ್ರಯ ದಟ್ಟ ಕಾಡುಗಳಲ್ಲಿ ವಾಸಿಸಲು ಇಷ್ಟ ಪಡುವ ಹುಲಿ ನೀರಿನಲ್ಲಿ ಈಜುತ್ತದೆ. ವೇಗದ ಓಟ‌ ಹಾಗು ಜಿಗಿತದಲ್ಲಿಯು ನಿಪುಣತೆ  ಹೊಂದಿದ್ದು ಸರಹದ್ದು ವ್ಯಾಪ್ತಿಯ ಬಗ್ಗೆ ಹುಲಿಗಳ ನಡುವೆ ಕಾಳಗ ನಡೆಯುವುದು ಸಾಮಾನ್ಯ. 

  ಕೆಲ ಆಕಸ್ಮಿಕ ಘಟನೆಗಳು ಹಾಗೂ ಅಂತರಿಕ ಸಂತಾನೋತ್ಪತ್ತಿಯಿಂದ ಉಂಟಾಗುವ ಸಮಸ್ಯೆಗಳಿಗೆ ಹುಲಿಗಳ ವಂಶ ತಳಿ ಬಲಿಯಾಗಿದ್ದು ಇದೆ. ರಕ್ತ ಸಂಬಂಧಿತ ಹುಲಿಗಳ ಮಿಲನದಿಂದ ಉಂಟಾಗುವ ಸಂತಾನ ಆರೋಗ್ಯಯುತ ಮತ್ತು ಸಶಕ್ತವಾಗಿರದ ಸಾದ್ಯತೆಗಳೆ ಹೆಚ್ಚು .ಇದುವರೆಗೆ ಹುಲಿಗಳ ಚಲನ ವಲನದ‌ ಮೇಲೆ ನಿಗಾ ಇಡಲು ಪರಿಸರ ವಿಜ್ಞಾನ ಮತ್ತು ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ ಸಂಶೋಧಕರು ಹುಲಿಗಳ ಸಂಖ್ಯೆಯಲ್ಲಿ ಅಂದಾಜು ‌ಮಾಡಲು ನಿಗಾವಹಿಸುತ್ತಿದ್ದರು‌. ಆದರೆ ಈ ವರ್ಷದಿಂದ ಜಾಗತಿಕ ಹುಲಿ ಅನುವಂಶಿಕ ಡೇಟಾಬೇಸ್‌ ರೂಪಿಸುವ ತಯಾರಿಯಲ್ಲಿದೆ. ಇದು ಅಗತ್ಯವೂ ಹೌದು.  ಹುಲಿಗಳ ವಾಸಸ್ಥಾನ ನಷ್ಟ, ಹವಾಮಾನ ಬದಲಾವಣೆ, ಕಳ್ಳ ಮೃಗ ಬೇಟೆ  ಸೇರಿದಂತೆ ಇನ್ನೂ ಹಲವಾರು ಅಂಶಗಳಿಂದ ಹುಲಿಗಳ ರಕ್ಷಣೆಯ ಗುರಿ ಅಗತ್ಯವಾಗಿದೆ.

  ಹುಲಿಗಳಿಗೆ ಹೆಚ್ಚಿನ ಆಪತ್ತು ತಂದೊಡ್ಡುವುದು ಮಾನವನ ಕಳ್ಳ ಬೇಟೆ ಅರಣ್ಯ ನಾಶವು ಹುಲಿಗಳ ಸಂತಾನಾಭಿವೃದ್ಧಿಗೆ ಮಾರಕವಾಗಿ ಹುಲಿಗಳ ಆಹಾರ ವಾದ ಇತರ ಸಸ್ಯಹಾರಿ ಪ್ರಾಣಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಹುಲಿ ಚರ್ಮ ಸೇರಿದಂತೆ ದೇಹದ ಇತರ ಭಾಗಗಳಿಗೆ ಪ್ರಮುಖವಾಗಿ ಹೊರ ದೇಶಗಳಲ್ಲಿ ತುಂಬಾ ಬೇಡಿಕೆ ಇದ್ದಕಾರಣ ಕಳ್ಳ ಬೇಟೆಯಾಡುವವರ ಸಂಖ್ಯೆ ಹೆಚ್ಚಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಹುಲಿ ಚರ್ಮ ಕಳ್ಳ ಸಾಗಾಣಿಕೆಯಲ್ಲಿ ಅಂತಾರಾಷ್ಟ್ರೀಯ ಬೇಟೆಗಾರರ ಜಾಲ ಭಾರತದಲ್ಲೂ ಕಾರ್ಯ ಅಚರಣೆ ನಡೆಸುತ್ತಿದ್ದು, ಹುಲಿಗಳ ಅಂಗಗಳಿಗೆ ಅಂತಾರಾಷ್ಟೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಕಣ್ಣು ,ಚರ್ಮ, ಎಲುಬು,ಪಂಜಾ ಮತ್ತಿತರ ದೇಹದ ಭಾಗಗಳಿಗೆ ವಿದೇಶಗಳಲ್ಲಿ ಬಾರಿ ಬೇಡಿಕೆ ಇದೆ. ಕೆಲ ಔಷಧ ತಯಾರಿಕೆಗೂ ಹುಲಿಗಳ ಅಂಗಾಂಗ ಬಳಸಲಾಗುತ್ತದೆ.ಹುಲಿ ಎಲುಬಿನಿಂದ ಸಂದಿವಾತ‌ ನಿವಾರಣೆ, ಕಾಮೋತ್ತೇಜಕ ಔಷಧಗಳನ್ನು ತಯಾರಿಸಲು ಹುಲಿಯ ಅಂಗಗಳ‌ ಬಳಕೆಯಾಗುತ್ತದೆ.
            
 ಪ್ರಾಣಿ ಸಂಕುಲ ಸ್ಥಿರವಾಗಿದ್ದರೆ ಮನುಷ್ಯ ಜೀವನವೂ ಸ್ಥಿರವಾಗಿರುತ್ತದೆ. ಪ್ರಾಣಿಗಳು  ಪರಿಸರ ಸಮತೋಲನಕ್ಕೆ ಆಸರೆ ಇದರಿಂದ ಪ್ರಕೃತಿಗೆ ಅನಾಹುತಗಳಿಲ್ಲದೆ ಸದೃಡವಾಗಿರುತ್ತದೆ. ಹುಲಿಗೆ ವರ್ಷದ ಯಾವುದೇ ಸಮಯದಲ್ಲಿ ಗರ್ಭಧರಿಸುವ ದೇಹ ರಚನೆ ಇದ್ದು ಗರ್ಭಧಾರಣೆ ಅವಧಿ 16 ವಾರಗಳು ಜನಿಸಿ 18 ತಿಂಗಳಲ್ಲಿ ಸ್ವಾವಲಂಬನೆಯಾಗುತ್ತದೆ. ಹೆಣ್ಣು ಹುಲಿ 3 ರಿಂದ 4 ವರ್ಷದಲ್ಲಿ ಲೈಂಗಿಕವಾಗಿ ಪ್ರೌಢಾವಸ್ಥೆಯನ್ನು  ಹೊಂದಿದರೆ ಗಂಡುಗಳಲ್ಲಿ ಈ ಅವಧಿ 4 ರಿಂದ 5 ವರ್ಷಗಳು.

https://www.youtube.com/c/HeggaddeStudio

   ಹುಲಿ ಗಣತಿಗೆ  ಅವುಗಳ ಪಟ್ಟಿಯೆ ಆಧಾರ ಹುಲಿಯ ಮೈಮೇಲಿನ ಪಟ್ಟಿಗಳು ವಿಭಿನ್ನವಾಗಿ ರುತ್ತದೆ.ಈ ಪಟ್ಟಿಯನ್ನು ನೋಡಿಯೆ ಹುಲಿಗಳ ಸಂಖ್ಯೆ ನಿರ್ಧರಿಸಲಾಗುತ್ತದೆ. ಕಾಡಿನಲ್ಲಿ ಬೇರೆ ಬೇರೆ ಸ್ಥಳದಲ್ಲಿ ಇಟ್ಟ ಸ್ವಯಂ ಚಾಲಿತ ಕ್ಯಾಮರಾ ಟ್ರಾಪ‌್ ಗಳ ಮೂಲಕ ಹುಲಿಗಳ ಚಿತ್ರಗಳನ್ನು ಸೆರೆ ಹಿಡಿಯಲಾಗುತ್ತದೆ.  ಸೆರೆ ಹಿಡಿದ ಚಿತ್ರಗಳಲ್ಲಿ ಹುಲಿಪಟ್ಟಿಗಳನ್ನು ಪರಿಶೀಲಿಸಿ ಹುಲಿಗಳ ಸಂಖ್ಯೆ ಅಂದಾಜು ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಹುಲಿಯ ಹೆಜ್ಜೆ ಗುರುತು, ಲದ್ದಿ, ಗರ್ಜನೆಗಳಿಗೂ ಮಹತ್ವ ನೀಡಲಾಗುತ್ತದೆ.  ಹುಲಿಗಳ ಸಂಖ್ಯೆ ಪತ್ತೆ ಹಚ್ಚಲು ಅದರ ಸಂರಕ್ಷಣೆ ಹುಲಿಗಳ ಅವನತಿ ಮತ್ತು ಬೆಳವಣಿಗೆ ತಂತ್ರಜ್ಞಾನ ಬಳಸಿಕೊಂಡು ಇನ್ನಷ್ಟು ವೈಜ್ಞಾನಿಕವಾಗಿ ಗಣತಿ ಮಾಡಲು ಬಯೋಲಾಜಿಕಲ್ ಇಂಡಿಕೇಶನ್ ಕ್ಯಾಮೆರಾ ಟ್ರಾಪ್, ಪೋಟೋ ಗ್ರಾಫ್ಸ್ ಮೂಲಕ ಗಣತಿ ಮಾಡಲಾಗಿದೆ.  ಪ್ರಪಂಚದಲ್ಲಿ ಹುಲಿ ಗಣತಿ ಮೊದಲು ಪ್ರಾರಂಭವಾಗಿರುವುದು ಭಾರತದ ಜಾರ್ಖಂಡದ ಪಲ್ಮಾಪ್ ಹುಲಿರಕ್ಷಿತಾರಣ್ಯದಲ್ಲಿ .ನಮ್ಮ ದೇಶದಲ್ಲಿ ಹುಲಿ ಸಂರಕ್ಷಣೆಗೆಂದು ಪ್ರತ್ಯೇಕವಾದ ವಿಶೇಷ ಹುಲಿ ರಕ್ಷಣಾಪಡೆ ಸ್ಥಾಪಿಸಿದ ಏಕೈಕ ರಾಜ್ಯ ಕರ್ನಾಟಕ.

  ಮೈಸೂರು ಮೃಗಾಲಯ, ಬನ್ನೇರು ಘಟ್ಟ  ಹಾಗೂ  ನಾಗರ ಹೊಳೆಯ ಹುಲಿಗಳನ್ನು ಕಣ್ಣು ತುಂಬಾ ನೋಡಿ ಬಂದಿದ್ದೆ. ನಾಗರ ಹೊಳೆ ಅಭಯಾರಣ್ಯದಲ್ಲಿ ಸಫಾರಿಗೆ ಹೋದಾಗ  ಹುಲಿ ನೋಡಲು ಸಿಗುವುದು ಒಂದು ಅದೃಷ್ಟ.. ನಿಮಗೆ ಅದೃಷ್ಟ ವಿದ್ದರೆ ಹುಲಿ ನೋಡಲು ಸಿಗುತ್ತದೆ ಎಂದಿದ್ದರು ಸಫಾರಿ ಗೈಡ್. ಹುಲಿಗಳ ಬಗ್ಗೆ ಜಾಗೃತಿ ಕಾರ್ಯ ಕ್ರಮಗಳು ಅಲ್ಲಲ್ಲಿ ನಡೆಯುತ್ತದೆ.  ಒಟ್ಟಿನಲ್ಲಿ ಹುಲಿಯ ಬದುಕಿಗೆ ಪೂರಕ ವಾತಾವರಣ ಸೃಷ್ಟಿ ನಮ್ಮೆಲ್ಲರ ಆದ್ಯ ಕರ್ತವ್ಯ.

Leave a Reply

Your email address will not be published. Required fields are marked *