ಭಾರತದಲ್ಲಿ ಪ್ರೋತ್ಸಾಹವೂ ಹೆಚ್ಚು ಟೀಕೆಯೂ ಹೆಚ್ಚು – ರೋಹಿತ್ ಶರ್ಮಾ : heggaddesamachar.com

Spread the love

ಕ್ರಿಕೆಟ್ ಗೆ ಅದರದೇ ಆದ ಅಭಿಮಾನಿಗಳು ಇದ್ದಾರೆ. ಆದರೆ ಭಾರತ ಮತ್ತು ಬಾಂಗ್ಲಾ ಫೇಸ್ ಬುಕ್ ಲೈವ್ ನಲ್ಲಿ ಬಚ್ಚಿಟ್ಟ ಒಳಗುಟ್ಟೊಂದು ಭಿತ್ತರವಾಗಿದ್ದು ಹೀಗೆ;
ನಮ್ಮ ಭಾರತ ಕ್ರಿಕೆಟ್ ತಂಡ ಎಲ್ಲೆ ಆಟದ ಅಂಕಣದಲ್ಲಿ ಕಂಡರೂ ಅಭಿಮಾನಿಗಳ ಜಯಕಾರ ಹುಮ್ಮಸ್ಸು ತುಂಬುವ ನಾಣ್ಣುಡಿಗಳು ಕೇಳುತ್ತಾ ಇರುತ್ತವೆ.
ಆದರೆ ಬಾಂಗ್ಲಾ ಬಯಲಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಗಿಂತ ತಾಯ್ನಾಡಿನ ಕ್ರಿಕೆಟ್ ಆಟಗಾರರಿಗೆ ಹೆಚ್ಚು ಒತ್ತು ನೀಡುತ್ತಾರೆ.
ಅವರು ಅಲ್ಲಿಯವರನ್ನಷ್ಟೇ ಹೆಚ್ಚು ಪ್ರೋತ್ಸಾಹಿಸುತ್ತಾರೆ.

ಈ ವಿಚಾರ ಫೇಸ್ಬುಕ್ ಲೈವ್ ಕಾರ್ಯಕ್ರಮ ನಡೆಸುವಾಗ ಭಾರತದ ತಂಡದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಅವರು ಬಾಂಗ್ಲಾ ಕ್ರಿಕೆಟಿಗರಾದ ತಮೀಮ್ ಇಕ್ಬಾಲ್ ಜೊತೆ ಲೈವ್ ಚಾಟ್ ನಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ ಸರಿ ತಪ್ಪುಗಳು ಏನೇ ಇದ್ದರೂ ಅದನ್ನು ಆ ಕ್ಷಣವೇ ಆಟದ ಮೈದಾನದಲ್ಲೇ ಹೇಳಿಬಿಡುತ್ತಾರೆ. ಅಷ್ಟರ ಮಟ್ಟಿಗೆ ಅವರಿಗೆ ಕ್ರಿಕೆಟ್ ಅಚ್ಚುಮೆಚ್ಚು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *