ಭಜರಂಗಿ 2 ಟೀಸರ್ ಯ್ಯೂಟ್ಯೂಬ್ ನಲ್ಲಿ ಎಬ್ಬಿಸಿದೆ ಬಿರುಗಾಳಿ:

ರ್ಯೂ ಟ್ಯೂಬ್ ನಲ್ಲಿ ಬಿರುಗಾಳಿ ಎಬ್ಬಿಸಲು ಬಂದಿದೆ ಶಿವಣ್ಣ ಅವರ ಬಹುನಿರೀಕ್ಷಿತ ಹಾಗೂ ಬಹು ಆಸಕ್ತಿಯನ್ನು ಹುಟ್ಟಿ ಹಾಕಿರುವ ಸಿನಿಮಾ ಭಜರಂಗಿ-2 ನ ಟೀಸರ್.
ಜಯಣ್ಣ ಫಿಲ್ಮ್ ಬ್ಯಾನರ್ ನಲ್ಲಿ ಜಯಣ್ಣ ಮತ್ತು ಭೋಗೇಂದ್ರ ಅವರು ನಿರ್ಮಾಣ ಮಾಡುತ್ತಿರುವ, ಭಜರಂಗಿ- ೧ ರ ಮೂಲಕ ಭರ್ಜರಿ ಸಿನಿಮಾವನ್ನು ನೀಡಿದ್ದ ಎ.ಹರ್ಷ ಅವರೇ ಭಜರಂಗಿ-2 ರ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಸಿನಿಮಾ ಈಗಾಗಲೇ ಸಾಕಷ್ಟು ಸಂಚಲನವನ್ನು ಸೃಷ್ಟಿಸಿದೆ.

ಸಿನಿಮಾ ಆರಂಭವಾದಾಗಿನಿಂದಲೂ ಸಖತ್ ಸದ್ದು ಮಾಡುತ್ತಿದೆ. ಹ್ಯಾಟ್ರಿಕ್ ಹೀರೋ ಶಿವಣ್ಣ ಅವರಿಗೆ ನಾಯಕಿಯಾಗಿ ಭಾವನಾ ಈ ಸಿನಿಮಾದಲ್ಲಿ ಇದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಪ್ರತಿ ಲುಕ್ ನೋಡುಗನಿಗೆ ಕಿಕ್ ನೀಡುವಂತೆ ಇದೆ. ಈಗ ಟೀಸರ್ ಅದನ್ನು ಮೀರಿದ ಕ್ರೇಜ್ ಹುಟ್ಟು ಹಾಕುವಂತಿದೆ.

ಹೊಸ ಬಗೆಯ ಲುಕ್, ಕಾಸ್ಟ್ಯೂಮ್, ಲೊಕೇಷನ್, ಶಿವಣ್ಣನ ಎನರ್ಜಿ ಎಲ್ಲವೂ ಅವರ ಅಭಿಮಾನಿಗಳಲ್ಲಿ ಹೇಳಲಾರದ ಖುಷಿ ನೀಡಿದೆ…ಶಿವಣ್ಣನ ಹುಟ್ಟು ಹಬ್ಬಕ್ಕೆ ಅವರ ಅಭಿಮಾನಿಗಳಿಗೆ ಒಳ್ಳೆಯ ಗಿಫ್ಟೇ ಸಿಕ್ಕಂತಿದೆ.