ಬ್ಯಾಡಗಿಯ ಕೆಂಪು ಚಲುವೆಯರ  ಮೇಳ : heggaddesamachar

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ 

ಧಾರವಾಡ ಬಸ್ಸು ನಿಲ್ದಾಣದಲ್ಲಿ  ಇಳಿಯುತ್ತಲೇ  ” ಬ್ಯಾಡಗಿ ಮೆಣಸಿನ ಕಾಯಿ ಮೇಳ” ಎಂಬ ಬಿತ್ತಿ ಪತ್ರ ಹಂಚುವ ಕೆಲವು ಯುವಕರು ದಾರಿ ಹೋಕರ ಕೈಗೆ ಬಿತ್ತಿಪತ್ರ ಹಂಚುತ್ತಾ ನನ್ನ ಕೈಗೂ ಕೊಟ್ಟರು. ಓದಿ ನೋಡುವಾಗ 3 ದಿನಗಳ ಮೆಣಸಿನ ಮೇಳಕ್ಕೆ ಸ್ವಾಗತ ಎಂಬ ಬಿತ್ತಿ ಪತ್ರದ ಒಕ್ಕಣೆಗೆ ಬೆರಗಾದೆ. ಕುತೂಹಲಕ್ಕೆ ಮೇಣಸಿನ ಮೇಳ ನೋಡಿದ ಹಾಗಾಯಿತು ಎಂದು  ನಿರ್ಧರಿತ ದಿನದಂದು ಅಲ್ಲಿಗೆ ಹೊರಟೆ ಹುಬ್ಬಳ್ಳಿ ತೋಟಗಾರಿಕೆ ಇಲಾಖೆ , ರೈತರ ಉತ್ಪದಕರ ಸಂಸ್ಥೆಗಳ ಆಶ್ರಯದಲ್ಲಿ ನಡೆಯುವ ಒಣ ಮೆಣಸಿನ ಮೇಳ ಮೂರು ಸಾವಿರ ಶಾಲಾ ವಠಾರದಲ್ಲಿ ನಡೆಯುತ್ತಿತ್ತು. ಮೆಣಸು ನೇರ ಮಾರಾಟವನ್ನು ಪ್ರೊತ್ಸಾಹಿಸುವುದು ಬೆಳೆಗಾರರ ಮತ್ತು ಗ್ರಹಕರ ನಡುವಿನ ಸಂರ್ಪಕ ಕಲ್ಪಿಸುವುದು ಮೆಣಸಿನ ವಿವಿಧ ತಳಿಗಳು ಮತ್ತು ಸಂಸ್ಕ್ರರಿಸಿದ ಪದಾರ್ಥಗಳನ್ನು ಪರಿಚಯಿಸುವುದು ಮೇಳದ  ಮುಖ್ಯ ಉದ್ದೇಶವಾಗಿರುತ್ತದೆ. ಬ್ಯಾಡಗಿ ಮೆಣಸಿನ ಕಾಯಿ ಬೆಳೆಯುವ ಬಗ್ಗೆ ರೈತರಿಗೆ  ಪ್ರಾತ್ಯಕ್ಷಿಕೆ, ಉಪನ್ಯಾಸ ಬೀಜೋಪಚಾರದ ಬಗ್ಗೆ ಮಾಹಿತಿ. ರೈತರು, ಗ್ರಾಹಕರು, ಕೃಷಿ ವಿಜ್ಞಾನಿಗಳು ಮತ್ತು ಸಂಸ್ಕೃರಣಾ ವಿಭಾಗದ  ಮಾಹಿತಿ ತಂತ್ರಜ್ಞರು‌ ಮೆಣಸಿನ ಬೇಸಾಯದಲ್ಲಿ ನಡೆಸ ಬಹುದಾದ ಸಂಶೋಧನಾ ಮಾಹಿತಿ ಬೆಳೆಗಾರರಿಗೆ ಒದಗಿಸುವುದು ಮೇಳದ ಮುಖ್ಯ ಉದ್ದೇಶ ವಾಗಿರುವುದಲ್ಲದೆ. ಆಸಕ್ತರಿಗೆ ಸಸಿ ನಾಟಿ ಮಾಡುವುದ ರಿಂದ ಹಿಡಿದು ರಾಸಾಯನಿಕ  ಗೊಬ್ಬರ ಕಟ್ಟುವುದು ಕ್ರಿಮಿನಾಶ ಜೌಷದಿ ಸಿಂಪರಣೆ ಬೇಳೆಕಟಾವು .ಮೆಣಸಿಗೆ ತೋರಿಸಬೇಕಾದ ಬಿಸಿಲ ಪ್ರಮಾಣ ತಿಳಿಸಲಾಗುತ್ತದೆ. ಈ ಮೇಳ ಪತ್ರಿ ವರ್ಷ ನಡೆಯುತ್ತಿದ್ದು. ಬ್ಯಾಡಗಿ ,ಧಾರವಾಡ, ಗದಗಸುತ್ತಲಿನ  ಪ್ರದೇಶದಲ್ಲಿ  ಮೆಣಸು ಮಳೆ ಆದಾರಿತ ವಾಗಿ ಬೆಳೆಯುತ್ತದೆ. ಮೆಣಸಿನ  ಮೇಳಕ್ಕೆ ಕಾಲಿಡುತ್ತಲೆ ಕೆಮ್ಮು ತಡೆಯಲಾಗಲಿಲ್ಲ. ನಾನಂತೂ ಕೆಮ್ಮುತ್ತಾ ಮೆಣಸಿನ ಮೇಳದಲ್ಲಿ ಸುತ್ತುತ್ತಿದ್ದಾಗ  ಬ್ಯಾಡಗಿ ಮೆಣಸಿನ ವಿಪರಿತ ಬೇಡಿಕೆಯ ಕಂಡೆ. ವಿದೇಶಗಳಲ್ಲಿ ಬ್ಯಾಡಗಿ ಬೇಡಿಕೆಯಿದ್ದು ಭಾರತ ಮೆಣಸಿನ ಕಾಯಿ ಉತ್ಪಾದನೆ ಹಾಗೂ ರಪ್ತಿನಲ್ಲಿ ಮೊದಲ ಸ್ಥಾನದಲ್ಲಿದೆ.ನೈಸರ್ಗಿಕ ಬಣ್ಣ ತಯಾರಿಕೆಗೆ ಬ್ಯಾಡಗಿ ಮೆಣಸಿನ ಕಾಯಿ ಹೆಚ್ಚು ರಫ್ತಾಗುತ್ತ ದೆ. ಇದರಲ್ಲಿರುವ ಪ್ಯಾಪ್ರಿಕ್ ಅಂಶ ನೈಸರ್ಗಿಕ ಬಣ್ಣದ ತಯಾರಿಕೆಗೆ ಸೂಕ್ತ. ಈ‌ ಮೆಣಸಿನ ರುಚಿ ಘಾಟು, ಖಾರ, ನೀಡುವ ಒಲಿಯೋರೆಸಿನ್ ಎಂಬ  ಅಂಶ ಅಧಿಕವಾಗಿದ್ದು ಇದನ್ನು ಪ್ರತ್ಯೇಕಿಸಿ ಆಹಾರ ಉತ್ಪನ್ನಗಳು ಪಾನೀಯ, ಸಾಸ್, ಔಷಧಿ ತಯಾರಿಕಾಗೆ ಬಳಸಲಾಗುತ್ತದೆ. ಎಣ್ಣೆಗಳ ಬಣ್ಣಕ್ಕಾಗಿಯು ಬಳಸಲಾಗುತ್ತದೆ.

          ಪ್ರಖ್ಯಾತ ಬ್ಯಾಡಗಿ ಚಲುವೆಯರ ನೈಜ ಕೆಂಪು ರಂಗು ಹಾಗೂ ಗುಣಮಟ್ಟದ ವಿಶೇಷ ರುಚಿಯಿಂದ ಜನ ಮೆಚ್ಚುಗೆಗಳಿಸಿದೆ.ಬ್ಯಾಡಗಿ ಊರನ ಸಿರಿಸೊಬಗಿನ  ಮೆಣಸು ಬೆಳೆಗೆ ವಾಣಿಜ್ಯ ರೂಪ ನೀಡಿದ್ದು ಅಲ್ಲದೆ  ಮೆಣಸು ದೇಶ ವಿದೇಶಗಳಲ್ಲಿ ಹೆಸರು ವಾಸಿಯಾಗಿದೆ. ಕರ್ನಾಟಕ ರಾಜ್ಯ ಸಂಬಾರ ಪದಾರ್ಥಗಳ ಅಭಿವೃದ್ಧಿ ‌ಮಂಡಳಿ ತೋಟಗಾರಿಕೆ ಇಲಾಖೆ ವಾಣಿಜ್ಯೋಧಮ ಸಂಸ್ಥೆ ಆಶ್ರಯದಲ್ಲಿ ಬ್ಯಾಡಗಿ ಮೆಣಸಿನಕಾಯಿ ಮೇಳ ಆಯೋಜಿಸಲಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಖ್ಯಾತಿಯನ್ನು ಬ್ಯಾಡಗಿ ಮೆಣಸು ‌ಹೊಂದಿದ್ದು ತನ್ನ ಕಡು ಗೆಂಪು ಬಣ್ಣದಿಂದಲೇ ನೋಡುಗರ ಬಾಯಲ್ಲಿ‌ ನೀರೂ ರಿಸುವ ಕೆಂಪು ಸುಂದರಿ ಬ್ಯಾಡಗಿ ಪ್ರಮುಖ ವಾಣಿಜ್ಯ ಬೆಲೆಗಳಲ್ಲೊಂದಾದ ಒಣ‌ಮೆಣಸಿನ  ಬೆಲೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ.ಭಾರತದ ಅತೀ ದೊಡ್ಡ ಮೆಣಸಿನ ಮಾರುಕಟ್ಟೆಯಾದ ಬ್ಯಾಡಗಿ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮೆಣಸಿನ ಕಾಯಿ ದರ  ತಾರಕ್ಕೆರಿದ್ದು .ಪ್ರಸ್ತುತ ವರ್ಷ ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮೆಣಸಿನ ಕಾಯಿ ವ್ಯಾಪಾರ ವಹಿ ವಾಟಿನಲ್ಲಿ ದಾಖಲೆ ಬರೆಯುತ್ತಿದ್ದು 28. 12.2020 ರಂದು ಕ್ವಿಂಟಾಲ್ ಗೆ ಅರ್ಧ ಲಕ್ಷ ಅಂದರೆ 50,111 ರೂಪಾಯಿ ದಾಟುವ ‌ಮೂಲಕ ಈವರೆಗೆ ಸರ್ವಕಾಲಿಕ  ದಾಖಲೆಗಳನ್ನು ಮುರಿದಿದೆ.  ಬ್ಯಾಡಗಿ ಮಾರುಕಟ್ಟೆ ಪ್ರಾಂಗಣದ ಅಂಗಡಿಯೊಂದರಲ್ಲಿ ಗದಗ ಜಿಲ್ಲೆಯ ಬೇಟಗೇರಿ ಗ್ರಾಮದ ಮಲ್ಲಿಕಾರ್ಜುನ ಬಸಪ್ಪ ಕರಿಮುಟ್ಟಿ ಎಂಬ ರೈತ ಮಾರಾಟಕ್ಕಿಟ್ಟಿದ್ದ ಬ್ಯಾಡಗಿ ಡಬ್ಬಿ  ಮೆಣಸು ಆರ್. ಆರ್. ಆಲಗೇರಿ ಎಂಬ ವ್ಯಾಪಾರಿ ಈ ದರದಲ್ಲಿ ಖರಿದಿಸಿದ್ದಾರೆ.   ಪ್ರತಿ ವರ್ಷ ಬೇಸಿಗೆಯಲ್ಲಿ ದರ ಏರಿಕೆ ಆಗುತಿತ್ತು  ಆದರೆ ಈ ಬಾರಿ ಚಳಿಗಾಲ ಅಂದರೆ ನವೆಂಬರ್ – ಡಿಸೆಂಬರ್ ನಲ್ಲಿ ‌ಬೆಲೆಏರಿಕೆ ಯಾಗಿದೆ.    

 
 ತದನಂತರ ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಫೆಬ್ರವರಿ 4 ರಂದು ಬ್ಯಾಡಗಿ ಡಬ್ಬಿತಳಿಯ ಕೆಂಪು ಮೆಣಸು ಕ್ವಿಂಟಲ್ ಗೆ  76,109 ರೂಪಾಯಿಯ ಅತ್ಯುತ್ತಮ ಬೆಲೆ ದೊರೆತು ಈ‌ ಮೊದಲಿನ ದಾಖಲೆ ಮುರಿದು ಬ್ಯಾಡಗಿ ಕೆಂಪು ಮೆಣಸಿನ ಕಾಯಿಗೆ ಅತೀ ಹೆಚ್ಚುದರ ದೊರೆಯುವ‌ ಮೂಲಕ ಸರಣಿ ವಿಶ್ವ ದಾಖಲೆಯತ್ತ ಸಾಗಿರುವ ಬ್ಯಾಡಗಿ ಮೆಣಸಿನ ಕಾಯಿ ಮಾರುಕಟ್ಟೆಯಿಗ  ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.


        ಮಸಾಲ ಪ್ಯಾಕ್ಟರಿ ಹಾಗೂ ಉಪ್ಪಿನ ಕಾಯಿ ಕಾರ್ಖಾನೆಗಳಿಂದ  ಗುಣಮಟ್ಟದ ಮೆಣಸಿನ ಕಸಾಯಿಗೆ ಬೇಡಿಕೆ ಹೇಚ್ಚಾಗಿದೆ.  ಬ್ಯಾಡಗಿ ಮೆಣಸು ಬಂಗಾರದ ಬೆಲೆಗೆ‌ ಮಾರಾಟವಾಗುತ್ತಿದ್ದು .ಸಾಮಾನ್ಯ ಮೆಣಸಿಗಿಂತ  ಆಕಾರದಲ್ಲಿ ಉದ್ದವಾಗಿರುವ ಬ್ಯಾಡಗಿ ಖಾರ ಕಡಿಮೆ ಆದರೆ ಹೆಚ್ಚು ರುಚಿಕರ , ಆರೋಗ್ಯಕರ ಕೆಂಪು ಮೆಣಸಿನ ಕಾಯಿ ವಿಶ್ವ ಮಟ್ಟದಲ್ಲಿ ಸದ್ದು ಮಾಡಿದೆ.ಬ್ಯಾಡಗಿ ಮೆಣಸು ಭಾರತದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದ್ದು ಭಾರತಿಯ ಆಹಾರ ಪದ್ದತಿಯಲ್ಲಿ ಪ್ರಮುಖ ಸ್ಥಾನಗಳಿಸಿದ್ದು ಅಲ್ಲದೆ ಮೆಣಸಿಲ್ಲದ ಊಟ ಊಹಿಸಲು ಅಸಾದ್ಯ. ನಿತ್ಯ ಅಡುಗೆಯ  ಭಾಗವಾಗಿರುವ ಮೆಣಸು  ನಮ್ಮ ಆರೋಗ್ಯ ಕಾಪಾಡಲು ಜೀರ್ಣ ಶಕ್ತಿಗೆ ಪೂರಕ . ವರ್ಷ ಗಟ್ಟಲೇ ಇಟ್ಟರು  ಹಾಳಾಗದ ಒಣ ಮೆಣಸು ದೇಶ ವಿದೇಶಗಳಲ್ಲಿ ಬೇಡಿಕೆ ಇದ್ದು 1948 ರಲ್ಲೇ ಬ್ಯಾಡಗಿ ‌ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾರಂಭವಾಗಿದೆ. ಬ್ಯಾಡಗಿ ಮೆಣಸಿನ ಮಾರುಕಟ್ಟೆ ದಿನೆ ದಿನೆ ಬೆಳೆಯುತ್ತಿದೆ.

           ನೈಸರ್ಗಿಕ ಕೆಂಪು ಬಣ್ಣ ಹೊಂದಿದ ಬ್ಯಾಡಗಿ ಮೆಣಸಿಗೆ ವಿವಿಧ ಉದ್ಯಮಗಳು ಲಗ್ಗೆ ಇಡುತ್ತಿದೆ.ಬ್ಯಾಡಗಿ ಯ ಕೆಂಪು ರಂಗು ಆಹಾರ ಪದಾರ್ಥಕ್ಕೆ  ಮೆರುಗು ನೀಡುವುದಲ್ಲದೆ. ಸೌಂದರ್ಯ ಸಾದನಗಳಾದ ಲಿಪ್ ಸ್ಟಿಕ್, ನೇಲ್ ಪಾಲಿಸ್, ನೋವು ನಿವಾರಕ ಮುಲಾಮು  ಸೇರಿದಂತೆ ಕೆಂಪು ಬಣ್ಣದ ಸೌಂದರ್ಯ ಸಾಧನಗಳಲ್ಲಿ ಬಳಸಲಾಗುತ್ತದೆ. ಆಹಾರ ಪದಾರ್ಥಗಳಿಗಷ್ಟೆ ಬಳಕೆ ಯಾಗುತ್ತಿದ್ದ ಬ್ಯಾಡಗಿಮೆಣಸು ಕಳೆದ ಎರಡು ದಶಕಗಳಿಂದ  ಕಾಂತ್ರಕಾರಿ ಬದಲಾವಣೆ ಕಂಡು ಅದರಲ್ಲಿ ನೈಸರ್ಗಿಕ ಬಣ್ಣ (ಓಲಿಯೋರೇಸಿನ್) ಔಷದ  ಸೌಂದರ್ಯ ವರ್ಧಕ ಸೇರಿದಂತೆ ವಿವಿಧ ವಸ್ತುಗಳ ತಯಾರಿಕೆ ಬಳಕೆಯಾಗಿ ಬಹು ಬೇಡಿಕೆಯ ವಸ್ತು ವಾಗಿದೆ.ಬ್ಯಾಡಗಿ ಬಣ್ಣಕ್ಕೆ ಬೆರಗಾದ ಬಹುರಾಷ್ಟ್ರೀಯ ಕಂಪನಿಗಳು ಬ್ಯಾಡಗಿ ಹಾಗೂ ಹುಬ್ಬಳ್ಳಿ ಧಾರವಾಡದ ಆಸುಪಾಸಿನಲ್ಲಿ ಅನೇಕ ಬಣ್ಣ ತಯಾರಿಕಾ ಕಾರ್ಖಾನೆ ಗಳು‌  ಪ್ರಾರಂಭವಾಗಿದೆ.ಮೆಣಸು ಸಂರಕ್ಷಿಸುವ ಕೋಲ್ಡ್ ಸೋರೆಜ್ ಬಿಲ್ಡಿಂಗ್ ಗಳು ಎಲ್ಲೆಂದರಲ್ಲಿ ತಲೆ ಎತ್ತಿದೆ. ತೋಟ್ಟು ತೆಗೆದ ಮೆಣಸು ತಂಪಾಗಿಟ್ಟಷ್ಟು ಹೆಚ್ಚು ಬಣ್ಣ ಬಿಡುತ್ತದೆ. ಮೆಣಸು ಒಣಗಿಸಲು ಅನುಕೂಲವಾಗುವಂತೆ ಅತ್ಯಾಧುನಿಕ  ಸೋಲಾರ್ ಟ್ಯುನರ್ ಡ್ರೆಯರ್ (ಸೌರಶಾಖ ಘಟಕ) ಸ್ಥಾಪಿಸಿ ಹೆಚ್ಚಿನ ಬ್ಯಾಡಗಿ ಮೆಣಸು‌ ಅಭಿವೃದ್ಧಿಗೆ ಕಾರಣವಾಗಿದೆ. ಕೆಂಪು ಮೆಣಸಿನಲ್ಲಿರುವ ಓಲಿಯೊರೆಸಿನ್ ಎಂಬ ಕೆಂಪು ನೈಸರ್ಗಿಕ ಬಣ್ಣವನ್ನು ಪ್ರ್ಯತೇಕಿಸಿ ಸಂಸ್ಕರಿಸಿ ಬಳಸಲಾಗುತ್ತದೆ.

         ಹುಬ್ಬಳ್ಳಿ ‌ಮೂರುಸಾವಿರ ಮಠದ  ಮೈದಾನದಲ್ಲಿ ಲೋಡುಗಟ್ಟಲೇ ಬ್ಯಾಡಗಿ ಮೆಣಸು ಸುರಿದು ತೊಟ್ಟು ಬೇರ್ಪಡಿಸುವ ಮಹಿಳೆಯರ ಸಾಲು ಸಾಲು ಕಂಡೆ. ಮೆಣಸಿನ  ತೊಟ್ಟು ಬೇರ್ಪಡಿಸಿದ್ದಕ್ಕೆ  ಕೆ.ಜಿಗೆ  ಎಷ್ಟು ಹಣ ಅಂತ ನಿಗದಿಯಿರುತ್ತದೆ. ವಿಪರೀತ ಘಾಟುವಾಸನೆ ಯಿಂದ ಕೈಚರ್ಮದಲ್ಲಿ ಸಮಸ್ಯೆ ಬರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಈ ಮೇಳದಲ್ಲಿ ದಲ್ಲಾಳಿಗಳ ಕೈಚಳಕವು ವಿಪರೀತವಾಗಿದೆ.ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಕಮಿಷನ್ ವಸೂಲು ಮಾಡುತ್ತಾರೆಂಬ ಆರೋಪವಿದೆ. ಮೆಣಸು ಸಾಗಿಸುವ ದೊಡ್ಡ ದೊಡ್ಡ ದಲ್ಲಾಳಿಗಳು, ಮಣಸಿನ‌ ಮೂಟೆ ಹೊರುವ ಹಮಾಲಿಗ ಳು , ಖರಿದಿದಾರರಿಂದ ಇಡಿ ಮೈದಾನ ತುಂಬಿದೆ. ಒಣಮೆಣಸಿನ‌ ವಹಿವಾಟಿನ ಈ ಮೇಳದೊಳಗೆ ನಾನು ಅಲೆಯುತ್ತಾ ರೈತರು, ಇಲ್ಲಿನ ಸಿಬ್ಬಂದಿಗಳು ಹಾಗೂ ಕೆಲ ವ್ಯಾಪಾರಸ್ಥರ ವ್ಯವಹಾರವನ್ನು ಗಮನಿಸಿದಾಗ  ಒಂದು ಮೆಣಸಿನ ಲಾರಿ‌ಬಂದ‌ತಕ್ಷಣ ಆ ಲಾರಿಯಲ್ಲಿನ ಮೆಣಸು ಖರೀದಿಸಿ ಕೆಲವೆ ಗಂಟೆಗಳಲ್ಲಿ ಇನ್ನೊಬ್ಬರಿಗೆ ಮಾರಿ ಹೆಚ್ಚಿನ ಹಣ‌ಮಾಡಿಕೊಳ್ಳುತ್ತಾರೆ. ವ್ಯಾಪಾರಿಗಳು ರೈತರಿಗಿಂತಲೂ  ಹೆಚ್ಚು ಸಂಪಾದಿಸುತ್ತಾರೆ  ಎಂಬ ಆರೋಪ‌ ಕೆಲ ವರ್ಷಗಳ ಹಿಂದೆ ಕೇಳಿಬರುತ್ತಿತ್ತು.

           2016 ರಲ್ಲಿ ಈ ಮೆಣಸಿನ ‌ಮೇಳದಲ್ಲಿ 2 ಕೋಟಿ ವಹಿವಾಟು 2017ರಲ್ಲಿ 2.6 ಕೋಟಿ ವ್ಯಾಪಾರ 2018ರಲ್ಲಿ 3.7ಕೋಟಿ, 2019 ರಲ್ಲಿ ಕರೊನಾ ಕರಿನೆರಳಿನಲ್ಲಿಯು 3.8 ಕೋಟಿ ವ್ಯವಹಾರ ನಡೆದಿದೆ ಎಂದು ಇಲ್ಲಿನ ಅಧಿಕೃತ ದಾಖಲಾತಿಗಳಿಂದ ತಿಳಿದುಬರುತ್ತದೆ. ಬ್ಯಾಡಗಿ ಡಬ್ಬಿ ಹಾಗೂ ಕಡ್ಡಿ ಎಂಬ 2 ತಳಿ ಒಣ‌ಮೆಣಸಿಗೆ  ಮೇಳದಲ್ಲಿ ಹೆಚ್ಚಿನ ಬೇಡಿಕೆ ಇದೆ .ಬ್ಯಾಡಗಿ ಎಂಬ ಊರಿನ ಹೆಸರು ಈ ಮೆಣಸಿನ ಜೊತೆಗೆ ಸೇರಿಕೊಂಡಿದೆ.ಮೆಣಸಿನಿಂದಲೇ ಈ ಊರು ಪ್ರಸಿದ್ದಿ ಪಡೆದಿದೆ.

           ಬ್ಯಾಡಗಿ ಊರಿನ ಸುತ್ತಾ ಮುತ್ತಲ ಊರುಗಳಲ್ಲಿ ಬ್ಯಾಡಗಿ ಮೆಣಸಿನ ಕಾಯಿ ವಿಪರೀತವಾಗಿ ಬೆಳೆಯಲಾಗಿ ದೆ .ಅತಿ ವೃಷ್ಟಿ ಅನಾವೃಷಟ್ಟಿಯಿಂದ ಬೆಳೆ ಹಾಳಾಗುವುದು ನಿಜ. ಉತ್ತಮವಾಗಿ ಬೆಳೆದು ನಿಂತ ಮೆಣಸಿನ ಕಾಯಿಗೆ ರೋಗ ಬಾದಿಸದ್ದಿದ್ದರೆ ರೈತರು ‌ನಷ್ಟಕ್ಕೆ ಒಳಗಾಗುತಾರೆ.ಅಷ್ಟೇ ಅಲ್ಲದೇ ಈ ರೋಗದಿಂದ‌ ಮೆಣಸು ಖಾರದ‌ಗುಣವನ್ನು ಕಳೆದು ಕೊಳ್ಳುತ್ತದೆ. ಇತ್ತೀಚೆಗೆ ಸಾವಯವ ಮೆಣಸಿನ ಕೃಷಿ ಸಂಪೂರ್ಣ ಮಾಯವಾಗಿದೆ.ಮಣ್ಣಿನ ಗುಣಧರ್ಮ, ಹವಾಮಾನ ವೈಪರೀತ್ಯದಿಂದ ಮೆಣಸಿನ ಕಾಯಿ ಬೆಳೆಗೆ ರೋಗ ತಗುಲುತ್ತಿರುವ ಹಿನ್ನೆಲೆಯಲ್ಲಿ ಇಳುವರಿ ಕಡಿಮೆ ಯಾಗುತ್ತಿರುವುದರಿಂದ  ಬೆಳೆಯಲ್ಲಿ ವಿಮುಖರಾಗುತ್ತಿ ದ್ದಾರೆ.

 ಬಿತ್ತನೆ ಬೀಜಕ್ಕಾಗಿ ಬ್ಯಾಡಗಿ ಮೆಣಸಿನ ಕಾಯಿಯನ್ನು ಬೆಳೆವ ರೈತವರ್ಗವೂ ಇದೆ. ಹುಬ್ಬಳ್ಳಿ ಹೊರವಲಯದ ಬೊಮ್ಮಲಾಪುರದಲ್ಲಿರುವ  ಬ್ಯಾಡಗಿ ಮೆಣಸಿನ  ಕಾಯಿ ಬೀಜ ಬೇರೆ ಬೇರೆ ಜಿಲ್ಲೆ ಹಾಗೂ ಹೊರ ರಾಜ್ಯದ ರೈತರಿಗೆ  ಮಾರಾಟ ಮಾಡಲಾಗುತ್ತದೆ. ಬೀಜ ಮಾರಾಟದಲ್ಲಿ ಮೊಸವು ನಡೆಯುತ್ತದೆ.  ಹುಬ್ಬಳ್ಳಿ ರೈತರೊಬ್ಬರು ಬ್ಯಾಡಗಿ ಬೀಜವೆಂದು ಕರಿದಿಸಿ ಬೀಜ ಬಿತ್ತುವಾಗ ಏನು ಗೊತ್ತಾಗಲ್ಲಿಲ್ಲ. ಮೆಣಸಿನ ಕಾಯಿ ಬೆಳೆದ ಮೇಲೆ ಮೂರು ತರಹದ ಕಾಯಿ ಕಾಣಿಸಿಕೊಂಡಿತು.ಬ್ಯಾಡಗಿ ಡಬ್ಬಿ ಮೆಣಸು ಎಂದು ಕರಿದಿಸಿ ಮೊಸ ಹೋದೆ. 15 ಕ್ವಿಂಟಲ್ ಬರಬೇಕಿದ್ದ ಬೆಳೆ 4 ಕ್ವಿಂಟಲ್ ಬಂದಿದೆ. ಬೀಜದ ಆಯ್ಕೆ ಯಲ್ಲಿ ‌ರೈತರು ಹೆಚ್ಚಿನ ಗಮನವಹಿಸ‌ಬೇಕು ಎನ್ನುತ್ತಾರೆ. ಮೆಣಸು ಬೆಳೆವ ಬಹುತೇಕ ರೈತರು ಬೀಜ ಬಿತ್ತುತಾರೆ ಕೆಲವೆಡೆ ಸಸಿ ನಾಟಿಯು ಮಾಡಲಾಗುತ್ತದೆ. ಸಸಿ ನಾಟಿ‌ಮಾಡಿದ‌ ನಂತರ ನಾಲ್ಕು ದಿನಕೊಮ್ಮೆ ನೀರುಣಿಸಲಾಗುತ್ತದೆ.ಪ್ರತಿ 20 ದಿನಗಳಿಗೊಮ್ಮೆ ಕಳೆ ತೆಗೆದು. ಬಿಸಿಲಿಗೆ  ಎಲೆ ಬಾಡದಂತೆ ಹೂವು ಉದುರದಂತೆ ನೀರುಣಿಸುವ ಕಾಳಜಿ ವಹಿಸಲಾಗುತ್ತದೆ. ಕೀಟ ಬಾದೆಗೆ ತುತ್ತಾಗದಂತೆ ರೋಗ ನಿರ್ವಹಣೆಗೆ ಕೀಟ ನಾಶಕ ಸಿಂಪಡಿಸಬೇಕು. ಕಳಪೆ ಬೀಜ ,ಪ್ರಕೃತಿ ಮುನಿಸು‌ ಬೆಳೆ‌ ಇಳುವರಿ ಪ್ರಮಾಣ ತಗ್ಗುವುದು ಇದೆ. ಮೆಣಸಿನ ಗಿಡ‌ನೆಟ್ಟು 30 ರಿಂದ 40 ದಿನಗಳಲ್ಲಿ ಹೂ ಬಿಡುತ್ತದೆ. ಬ್ಯಾಡಗಿ ಮೆಣಸಿಗೆ ದೇಶ ವಿದೇಶಗಳಲ್ಲಿ ಬೇಡಿಕೆ ಇದ್ದರು  ಬೆಳೆಗಾರರಿಗೆ ಒಮ್ಮೊಮ್ಮೆ ಖಾರವಾಗುವುದಿದೆ.

Leave a Reply

Your email address will not be published. Required fields are marked *