News (ಸುದ್ದಿ)
ಬೆಳ್ಳಂಬೆಳಗ್ಗೆ ಅಧಿಕಾರಿಗಳ ದಾಳಿ- ಕಾನೂನು ಉಲ್ಲಂಘಿಸಿದ ಅಂಗಡಿಗಳಿಗೆ ದಂಡ : heggaddesamachar.com

ತಿ.ನರಸೀಪುರ:ಬೆಳ್ಳಂ ಬೆಳಗ್ಗೆ ಪುರಸಭೆ ಅಧಿಕಾರಿಗಳ ದಾಳಿ. ಪುರಸಭೆ ಆರೋಗ್ಯಾಧಿಕಾರಿ ಚೇತನ್ ಮತ್ತು ತಂಡದಿಂದ ದಾಳಿ.
ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವ್ಯಾಪಾರ ನಡೆಸುತ್ತಿದ್ದ ಅಂಗಡಿ ಮೇಲೆ ದಾಳಿ. ಪುರಸಭೆ ಮತ್ತು ಸರ್ಕಾರದ ಆದೇಶ ಉಲ್ಲಂಘನೆ ಮಾಡುತ್ತಿರುವ ಬಟ್ಟೆ ಅಂಗಡಿ ಮಾಲೀಕರು.
ತಿ.ನರಸೀಪುರ ಪಟ್ಟಣದ ಪ್ರತಿಷ್ಠಿತ ಅಂಗಡಿಗಳಾದ ವಾಸವಿ ಹಾಲ್ ಮತ್ತು ಎಸ್ಪಿಸ್ ಬಟ್ಟೆ ಅಂಗಡಿಯಲ್ಲಿ ತುಂಬಿ ತುಳುಕುತ್ತಿದ್ದ ಜನತೆ. ಪುರಸಭೆ ಆದೇಶ ಉಲ್ಲಂಘನೆ ಮಾಡಿದ್ದಕ್ಕೆ ಸ್ಥಳದಲ್ಲೇ ದಂಡ ವಿಧಿಸಿ ಬೀಗ ಜಡಿಸಿದ ಅಧಿಕಾರಿಗಳು. ಪಟ್ಟಣದಾದ್ಯಂತ ಕಾರ್ಯಾಚರಣೆ ಮಾಡುತ್ತಿದ್ದೇವೆ. ಸಾರ್ವಜನಿಕರು ಕೂಡ ಸರ್ಕಾರದ ಆದೇಶಗಳನ್ನು ಪಾಲಿಸುವಂತೆ ಮನವಿ ಮಾಡಿದ ಪುರಸಭೆ ಆರೋಗ್ಯಾಧಿಕಾರಿ ಚೇತನ್.