News (ಸುದ್ದಿ)

ಬೆಳಕವಾಡಿ ಗ್ರಾಮದ ಬಡ ಜನರಿಗೆ ಆಹಾರ ಕಿಟ್ ವಿತರಿಸಿದ ಶಾಸಕ ಡಾ.ಕೆ.ಅನ್ನದಾನಿ : heggaddesamachar.com

Spread the love

ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಗ್ರಾಮ ಪಂಚಾಯಿತಿ ಸಮೀಪದ ಎ.ಪಿ.ಎಂ.ಸಿ ಆವರಣದಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸುಮಾರು ನೂರೈವತ್ತು ಬಡ ಕುಟುಂಬಗಳಿಗೆ ಶಾಸಕ ಡಾ.ಕೆ.ಅನ್ನದಾನಿ ಆಹಾರ ಕಿಟ್ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ ಹಲವು ದಿನಗಳಿಂದ ಭಾರತ ಸೇರಿದಂತೆ ಹಲವು ದೇಶಗಳು ಕೊರೋನ ಎಂಬ ಮಾರಣಾಂತಿಕ ವೈರಸ್ಗೆ ತತ್ತರಿಸಿದೆ ಅದೆ ರೀತಿ ಕರ್ನಾಟಕದ ಹಲವು ಜಿಲ್ಲೆಗಳು ಸೇರಿದಂತೆ ನಮ್ಮ ಮಂಡ್ಯ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದ್ದು ಈ ಸಂದರ್ಭದಲ್ಲಿ ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಜಾಗೃತಿ ವಹಿಸುವ ಜೊತೆಗೆ ಎಲ್ಲರೂ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಬೇಕು, ಬೆಳಕವಾಡಿ ಗ್ರಾಮದ ಜನತೆ ನನಗೆ ಸಂಕಷ್ಟದ ಕಾಲದಲ್ಲಿ ರಾಜಕೀಯವಾಗಿ ಪುನರ್ ಜನ್ಮ ನೀಡಿದ್ದಾರೆ ಈ ಗ್ರಾಮಕ್ಕೆ ಮೊದಲೆ ಆಹಾರ ಕಿಟ್ ವಿತರಿಸಬೇಕಾಗಿತ್ತು ಆದರೆ ಮಳವಳ್ಳಿಯಲ್ಲಿ ಹೆಚ್ಚು ಕೊರೋನ ಪ್ರಕರಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಲ್ಲಿಗೆ ಬರಲು ತಡವಾಯಿತು ಈ ನಿಟ್ಟಿನಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಸಾರ್ವಜನಿಕರ ಜೊತೆ ನಿಲ್ಲಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.


ಈ ವೇಳೆ ಗ್ರಾ.ಪಂ. ಅಧ್ಯಕ್ಷ ಪಿ.ಸೋಮು ಮಾತನಾಡಿ ಬೆಳಕವಾಡಿ ಗ್ರಾಮದಲ್ಲಿರುವ ಬಡ ಜನರನ್ನು ಗುರುತಿಸಿ ಆಹಾರ ಕಿಟ್ ವಿತರಿಸಿದ ಶಾಸಕ ಡಾ.ಕೆ.ಅನ್ನದಾನಿ ರವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯ ಗುರುಸ್ವಾಮಿ, ಪಿ.ಡಿ.ಒ ಶಿವಸ್ವಾಮಿ, ಮುಖಂಡರಾದ ಅಶ್ವಥ್ ಕುಮಾರ್, ನಾಗಭೂಷಣ್, ಒಕ್ಕರಹಳ್ಳಿ ಜಯರಾಜು, ಬಿ.ಎಂ.ಕಾಂತರಾಜು, ಸ್ಪಾಟ್ ರಮೇಶ್, ಪ್ರಭಾಕರ್ ಸೇರಿದಂತೆ ಇತರರಿದ್ದರು.

Leave a Reply

Your email address will not be published. Required fields are marked *