ಬಿ.ವೈ ವಿಜಯೇಂದ್ರ ಬಳಗದ ವತಿಯಿಂದ ನಿರಾಶ್ರೀತರಿಗೆ ಆಹಾರ ಪೊಟ್ಟಣ ವಿತರಣೆ: heggaddesamachar.com

ಮೈಸೂರು: ಬಿ.ವೈ ವಿಜಯೇಂದ್ರ ಬಳಗದ ವತಿಯಿಂದ
ಕೋರೋನ ಮಹಾಮಾರಿ ಭೀತಿಯಿಂದ ಸಂಕಷ್ಟದಲ್ಲಿರುವ ಬಡವರಿಗೆ,ಕೂಲಿ ಕಾರ್ಮಿಕರಿಗೆ,ನಿರಾಶ್ರೀತರಿಗೆ ಆಹಾರ ಪೊಟ್ಟಣ ವಿತರಿಸಲಾಯಿತು.
ಮೈಸೂರಿನ ಗನ್ ಹೌಸ್ ಸರ್ಕಲ್ ನಲ್ಲಿರುವ ನಿರ್ಗತಿಕರಿಗೆ ಮಾಜಿ ಶಾಸಕ ಮಾರುತಿರಾವ್ ಪವರ್,ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ,ಬಿಜೆಪಿ ಮಹಿಳಾ ಮುಖಂಡೆ ಲಕ್ಷ್ಮೀದೇವಿ ಆಹಾರ ವಿತರಿಸಿದರು.
ಇದೇ ಸಂದರ್ಭ ಮಾರುತಿರಾವ್ ಪವರ್ ಮಾತನಾಡಿ ಲಾಕ್ ಡೌನ್ ಆರಂಭದ ದಿನದಿಂದಲೂ ಸಹ ಬಿ.ವೈ.ವಿಜಯೇಂದ್ರ ಬಳಗದಿಂದ ಬಡವರಿಗೆ,ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ,
ಬೀದಿ ಬದಿ ವ್ಯಾಪಾರಿಗಳಿಗೆ ಆಹಾರ ವಿತರಿಸುತ್ತಾ ಬಂದಿದ್ದಾರೆ.ಪ್ರಧಾನಿ ಮೋದಿರವರು ನೆನ್ನೆ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ರವರು ಯಾವ ಯಾವ ಕ್ಷೇತ್ರಕ್ಕೆ ಅಂತ ಮಾಹಿತಿ ನೀಡಲಿದ್ದಾರೆ.ಸುಮಾರು 8 ರಿಂದ 10 ವರ್ಷದ ಬಜೆಟ್ ಹಣವನ್ನು ಮೋದಿರವರು ಘೋಷಣೆ ಮಾಡಿಯೋದು ಹೆಮ್ಮೆಯ ವಿಷಯ ಅವರಿಗೆ ಅಭಿನಂದಿಸುತ್ತೇನೆ ಎಂದರು.
ಇದೇ ಸಂದರ್ಭ
ಸ್ಲಂ ಮೋರ್ಚಾ ಕಾರ್ಯದರ್ಶಿ ಸಿಂಧೆ,ವಕೀಲರಾದ ಪ್ರಸನ್ನ,ನಿಖಿಲ್, ಜಸ್ವಂತ್, ಅಶೋಕ್, ಸತೀಶ್ ಭಟ್ಟರು, ಅರಸೀಕೆರೆ ಉಮೇಶ್ ಸೇರಿದಂತೆ ಮುಂತಾದವರು ಉಪಸ್ಥಿತಿರಿದ್ದರು.