ಬಿಗ್ ಬಾಸ್ ಮನೆಯೊಳಗೆ ಮತ್ತೊಬ್ಬಳು ಎಂಟ್ರಿ: HeggaddeSamachar.com


ಬಿಗ್ ಬಾಸ್ ಕನ್ನಡ ೭ನೇ ಆವೃತ್ತಿಯ ಆಟ ದಿನದಿಂದ ದಿನಕ್ಕೆ ಕುತೂಹಲದ ಗಟ್ಟ ತಲುಪುತ್ತಿದೆ. ಪ್ರತಿವಾರ ಒಬ್ಬೊಬ್ಬರೇ ಮನೆಯಿಂದ ಹೊರಕ್ಕೆ ಬರುತ್ತಿದ್ದಾರೆ ಹಾಗೆಯೇ ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಒಬ್ಬೊಬ್ಬರೇ ಒಳಗೂ ಹೋಗುತ್ತಿದ್ದಾರೆ. ಈ ಹಿಂದೆ ಆರ್.ಜೆ ವೃಥ್ವಿ ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಹೋಗಿದ್ದರು. ಅದರಂತೆ ಕಳೆದ ವೀಕೆಂಡ್ ನಲ್ಲಿ ಸುಜಾತ ಮನೆಯಿಂದ ಹೊರಬಿದ್ದಿದ್ದರು ಅದರಂತೆ ಈಗ ಮತ್ತೊಬ್ಬರು ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಮನೆಯೊಳಗೆ ಪ್ರವೇಶಿಸುತ್ತಿದ್ದಾರೆ

ಹಾಗಾದರೆ ಅರ್ಯಾರು!?
ಅವರೇ ನಟಿ ರಕ್ಷಾ ಸೋಮಶೇಖರ್. ಎಸ್!.. ಅಂದ ಹಾಗೆ ರಕ್ಷಾ ಸೋಮಶೇಖರ್ ಯಾರು ಎಂದು ನೀವು ಕೇಳುವುದಾದರೆ ಅದರ ಡಿಟೇಲ್ಸ್ ಇಲ್ಲಿದೆ ನೋಡಿ:

ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ರಕ್ಷಾ ಸೋಮಶೇಖರ್ ಯಾರು ಗೊತ್ತಾ!?
ರಕ್ಷಾ ಸ್ಯಾಂಡಲ್ ವುಡ್ ಅಂಗಳದಲ್ಲಿ ಈಗ ತಾನೇ ಹೆಸರುಗಿಟ್ಟಿಸಿಕೊಳ್ಳುತ್ತಿರುವ ನಟಿ… ಹೌದು.., ಈ ಹಿಂದೆಕಾರ್ತಿಕ್ ಜಯರಾಂ ನಟಿಸಿದ್ದ ಮೇ ೧ ಚಿತ್ರದಲ್ಲಿ ರಕ್ಷಾ ನಾಯಕಿಯಾಗಿದ್ದಳು. ಅಲ್ಲದೇ ಮನೆಯೊಳಗಿರುವ ಕಿಶನ್ಗೂ ಆಕೆ ಆಪ್ತೆ ಎನ್ನುವುದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ತಿಳಿಯುತ್ತಿದೆ.