News (ಸುದ್ದಿ)

ಬಾಲಿವುಡ್ ನಲ್ಲಿ ಡಾನ್ ಪಾತ್ರಧಾರಿ ಸೋನು ಸೂದ್ ಬಸ್ ಸೇವೆಗೆ ಕಾರ್ಮಿಕರ ಆಶೀರ್ವಾದ: heggaddesamachar.com

Spread the love

ತಮ್ಮ ಉತ್ತಮ ನಟನೆಯ ಮೂಲಕ ಎಲ್ಲರ ಮನಗೆದ್ದು, ಹಲವಾರು ಡಾನ್ ಪಾತ್ರಗಳಲ್ಲಿ ಮಿಂಚಿದ್ದ ಸೋನು ಸೂದ್ ಸಹೃದಯತೆಯನ್ನು ಮೆರೆಯುವುದರೊಂದಿಗೆ ಅರ್ಧದಾರಿಯಲ್ಲಿ ಸಿಲುಕಿದವರನ್ನು ತಾಯ್ನಾಡಿಗೆ ಮರಳಿಸುವ ಮೂಲಕ ಪ್ರೀತಿಗೆ ಪಾತ್ರರಾಗಿದ್ದಾರೆ.
ಲಾಕ್ ಡೌನ್ ನಿಂದಾಗಿ ಮಹಾರಾಷ್ಟ್ರದಲ್ಲಿ ಸಿಲುಕಿದ್ದ ಕರ್ನಾಟಕ ಭಾಗದ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸುವ ಸಲುವಾಗಿ ಅವರಿಗೆಂದೇ ಪ್ರತ್ಯೇಕ 10 ಬಸ್ಸುಗಳನ್ನು ನಿಗದಿ ಮಾಡಿ, ಪ್ರಯಾಣದ ವೇಳೆ ಹಸಿವಿನಿಂದ ಕಂಗೆಡಬಾರದು ಎಂದು ಆಹಾರದ ಕಿಟ್ ಕೂಡಾ ನೀಡಿ, ಖುದ್ದಾಗಿ ನಟ ಸೋನು ಸೂದ್ ಅವರೇ ಬಂದು ಕಾರ್ಮಿಕರನ್ನು ಬಸ್ಸಿಗೇರಿಸಿ ತಾಯ್ನಾಡಿಗೆ ಮರಳುವಂತೆ ಮಾಡಿದ್ದಾರೆ.


ಅಲ್ಲದೇ ಮೊನ್ನ ತಾನೇ ಪಂಜಾಬಿನಲ್ಲಿ ಕಷ್ಟದಲ್ಲಿದ್ದವರಿಗೆ ಸರಿಸುಮಾರು 1500 ಆಹಾರದ ಕಿಟ್ ಗಳನ್ನು ವಿತರಿಸಿದ್ದರು.
ಸೆಲೆಬ್ರಿಟಿಯಾಗಿ ಈ ಸಹೃದಯತೆ, ಎಲ್ಲರೂ ಇವರ ಮೇಲೆ ಇಟ್ಟಿದ್ದ ಪ್ರೀತಿ ಅಭಿಮಾನ ದುಪ್ಪಟ್ಟು ಆಗುವುದರೊಂದಿಗೆ, ಅದರಾಚೆಗೆ ನೋಡುವುದಾದರೆ ಉತ್ತಮ ಮಾನವೀಯತೆಯ ಮೌಲ್ಯವನ್ನು ಸಾರಿದ್ದಾರೆ.

Leave a Reply

Your email address will not be published. Required fields are marked *