News (ಸುದ್ದಿ)

ಬಹುಜನ ಸಮಾಜ ಪಕ್ಷದಿಂದ 2564 ನೇ ವೈಶಾಖ ಬುದ್ಧ ಪೂರ್ಣಿಮೆ ಆಚರಣೆ: heggaddesamachar.com

Spread the love

ಹಲಗೂರು: 2564 ನೇ ವೈಶಾಖ ಬುದ್ಧ ಪೂರ್ಣಿಮೆಯನ್ನು ಬಹುಜನ ಸಮಾಜ ಪಕ್ಷ ಹಲಗೂರು ಹೋಬಳಿ ಮತ್ತು ಕಸಬ ಹೋಬಳಿ ಘಟಕದ ವತಿಯಿಂದ ಪಕ್ಷದ ಕಛೇರಿಯಲ್ಲಿ ಆಚರಣೆ ಮಾಡಲಾಯಿತು.

ಪಕ್ಷದ ತಾಲ್ಲೂಕು ಸಂಯೋಜಕರಾದ ಹ.ನಾ.ವೀರಭದ್ರಯ್ಯ ರವರು ಬುದ್ಧರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ 2564 ನೇ ವೈಶಾಖ ಬುದ್ಧ ಪೂರ್ಣಿಮೆಯನ್ನು ಚಾಲನೆ ನೀಡಿದರು.

ನಂತರ ಮಾತಾನಾಡಿದ ಅವರು ನಾಡಿನ ಜನತೆಗೆ 2564ನೇ ವೈಶಾಖ ಬುದ್ಧ ಪೂರ್ಣಿಮೆಯ ಶುಭಾಯಗಳು ಕೋರಿದರು ಜಗದ ಮೊದಲ ಬೆಳಕು ಭಗವನ್ ಬುದ್ಧರ ಮಧ್ಯಮ ಮಾರ್ಗ ವೈಜ್ಞಾನಿಕ ವಿಜ್ಞಾನ ಸರ್ವಕಾಲಕು ಅನ್ವಯ, ಬುದ್ಧನ ಧಮ್ಮವನ್ನು ಆಚರಿಸುತ್ತಿರುವ ದೇಶಗಳು ಜಗತ್ತಿನ ಬಲಿಷ್ಠ ಸಮೃದ್ದ ರಾಷ್ಟ್ರಗಳಾಗಿವೆ ಬುದ್ಧನ ಮಾತೃಭೂಮಿ ಧಮ್ಮದ ಆಚರಣೆಯ ಕೊರತೆಯಿಂದಾ ಮೂಡನಂಬಿಕೆ, ಅಜ್ಞಾನ ,ಅಸ್ಪೃಶ್ಯತೆ,ಅಸಮಾನತೆಯ ಮನೋರೋಗದಿಂದ ಭಾರತ ದೇಶ ರೋಗಗ್ರಸ್ತವಾಗಿದೆ ಈ ಮನೋ ರೋಗದಿಂದ ವಿಮುಖರಾಗಲು ಇರುವ ಮಾರ್ಗ ನಮ್ಮ ದೇಶ ಬೌದ್ಧ ರಾಷ್ಟ್ರವಾದಗಲೇ ಪ್ರಬುದ್ಧ ಭಾರತ ನಿರ್ಮಾಣ ಸಾಧ್ಯ.

ಸರ್ವಜನ ಹಿತಾಯ ಸರ್ವಜನ ಸುಖಾಯ ಎಂದ ಬುದ್ಧರ ನಿಲವು ಪ್ರಸ್ತುತ ನಮ್ಮ ಪಕ್ಷದ ಪ್ರಮುಖ ಉದ್ದೇಶ ಆಗಿದ್ದು ನಮ್ಮ ವಿಮೋಚಕರ ಧೇಯಾ ಉದ್ದೇಶ ಅದೇ ಆಗಿದೆ ನಾಡಿನ ಸರ್ವರಿಗೂ ಸಮಪಾಲು ಸಮಬಾಳು,ಸಹಬಾಳ್ವೆ , ಸಿಗಬೇಕು ಎಂಬುದು ಪಕ್ಷದ ಮೂಲ ಆಶಯವಾಗಿದೆ ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಖಜಾಂಚಿ ಬಿ.ಡಿ .ರಾಜೇಂದ್ರ ,ಆನಂದ್ ಕುಮಾರ್, ಹಲಗೂರು ಹೋಬಳಿ ಘಟಕದ ಅಧ್ಯಕ್ಷರಾದ ಉಮೇಶ್. ಎಸ್.ಮೌರ್ಯ, ಮಹೇಶ್. ಎಚ್.ಮೌರ್ಯ, ಮುನಿರಾಜ್ ,ಸಿದ್ದಲಿಂಗ ಮೂರ್ತಿ, ಸುರೇಶ್,ಮರಿಸ್ವಾಮಿ,ಆನಂದ್ ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *