News (ಸುದ್ದಿ)

ಬಸವನಿಗೊಲಿದ ಚಾಲೆಂಜಿಂಗ್ ಸ್ಟಾರ್ – ಬಸವನ ಅನಾರೋಗ್ಯಕ್ಕೆ ದರ್ಶನ್ ಸಹಾಯ : heggaddesamachar.com

Spread the love

ದರ್ಶನ್ ಅವರು ಒಂದಲ್ಲ ಒಂದು ಕಾರಣಕ್ಕೆ ಅಭಿಮಾನಿಗಳ ಮನ ಗೆಲ್ಲುತ್ತಾರೆ,
ಹೌದು ಈಗ ಬಸವನ ಪಾಲಿಗೂ ಆಪ್ತರಕ್ಷಕರಾಗಿ ಡಿ ಬಾಸ್ ನೆರವಾಗಿದ್ದು ಎಲ್ಲರಿಗೂ ಖುಷಿಯ ವಿಚಾರ.
ಕಳೆದ ಚುನಾವಣಾ ಸಮಯದಲ್ಲಿ, ಕೆ ಆರ್ ನಗರ ಕಾಳಮ್ಮನ ಕೊಪ್ಪಲು ಗ್ರಾಮದಲ್ಲಿ, ಸುಮಲತಾ ಅಂಬರೀಶ್ ಅವರು ಚುನಾವಣೆ ಎದುರಿಸಲು ಮತ ಪ್ರಚಾರದಲ್ಲಿ ತೊಡಗಿದ್ದಾಗ, ದರ್ಶನ್ ಕೂಡಾ ಮತಪ್ರಚಾರಕ್ಕೆ ಸುಮಲತಾ ಅವರೊಂದಿಗೆ ತೆರಳಿದ್ದ ಸಂದರ್ಭ, ಬೀದಿ ನಡುವೆ ಬಸವ ಒಂದು ಹಟಹಿಡಿದಂತೆ, ಮತಪ್ರಚಾರಕರನ್ನು ಚಲಿಸಲು ಬಿಡದೆ, ಕೈಗೂ ಸಿಗದೆ ತುಂಬಾ ಸತಾಯಿಸುತ್ತಿತ್ತು.
ಇದನ್ನು ಗಮನಿಸಿದ್ದ ದರ್ಶನ್ ಅವರು, ತಾವು ಕೂತಿದ್ದ ಗಾಡಿಯಿಂದಿಳಿದ್ದು ಬಸವನ ಸಮೀಪ ಸ್ಪರ್ಶವಾಗುತ್ತಿದ್ದಂತೆ ಆ ಬಸವ ಸುಮ್ಮನಾಗಿ, ಎಲ್ಲರೂ ಸಲೀಸಾಗಿ ಸಾಗುವಂತೆ ಒಂದೆಡೇ ಸುಮ್ಮನಾಗಿತ್ತು.


ಆದರೆ ಅದೇ ಬಸವ ಕಳೆದ ಕೆಲ ದಿವಸಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದು, ನೀರು ಆಹಾರ ಮೇವು ಸೇವನೆಗೂ ಮುಂದಾಗದೆ ಮೌನವಾಗಿದೆ.
ಈ ವಿಚಾರ ತಿಳಿದ ದರ್ಶನ್ ಅವರು ಬಸವನ ಆರೈಕೆಗಾಗಿ ಸಹಾಯಹಸ್ತದ ಜೊತೆಗೆ ಪಶುವೈದ್ಯರನ್ನು ಕಳುಹಿಸಿ ಆರೈಕೆಗೆ ಅನುವಾಗುವಂತೆ ಸ್ನೇಹಿತರನ್ನು ವೈದ್ಯರ ಜೊತೆಯಾಗಿ ಬಸವನ ಆರೋಗ್ಯ ಸುಧಾರಿಸಲು ನೆರವಾಗಿದ್ದಾರೆ.
ಗ್ರಾಮಸ್ಥರು ಖುಷಿ ಪಟ್ಟಿದ್ದು ಅಲ್ಲದೆ ನಿರಾಳರಾಗಿದ್ದು ಸಹಾಯಹಸ್ತ ನೀಡಿದ ದರ್ಶನ್ ಅವರಿಗೆ ಧನ್ಯವಾದ ತಿಳಿಸುತ್ತಿದ್ದಾರೆ.
ಪ್ರಾಣಿ ಪ್ರೀಯ ದರ್ಶನ್ ಪ್ರಾಣಿಗಳ ಪಾಲಿಗೆ ಮತ್ತೊಮ್ಮೆ ಆಪತ್ಬಾಂಧವ ಎಂದೆನಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *