Literature (ಸಾಹಿತ್ಯ)

ಬಲ್ಲಿರೇನಯ್ಯ..ಮಟ್ಟುಗುಳ್ಳದ ರುಚಿಯಾ : heggaddesamachar

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

ಜಿಯೊಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್ ನೊಂದಾಯಿತ.  ಅಧಿಕೃತ ವಾಗಿ 2011 ರಲ್ಲಿ ಭೌಗೋಳಿಕ ಮಾನ್ಯತೆ ( ಜಿ ಐ) ಪಡೆದ ವಿಶಿಷ್ಟ ಬದನೆ “ಮಟ್ಟುಗುಳ್ಳ ” ಪ್ರಮುಖವಾಗಿ ಉಡುಪಿ ಜಿಲ್ಲೆಯ ಮಟ್ಟು ಎಂಬ ಊರಿನ ಮರಳು‌ಮಿಶ್ರಿತ ಕಂದು‌ಮಣ್ಣಿನಲ್ಲಿ ಬೆಳೆಯುವ  ಈ‌ ಗುಳ್ಳಕ್ಕೆ ಮಟ್ಟು ಗ್ರಾಮದ ‌ಬೆಳೆಗಾರರ‌ ಸಂಘದಲ್ಲಿ ‌ಲಾಂಛನ (ಸ್ಟಿಕರ್) ಅಂಟಿಸಿ‌ ಮಾರುಕಟ್ಟೆಗೆ  ಸರಭರಾಜು ಮಾಡಲಾಗುತ್ತದೆ. ಇದರ ಮಾರಾಟಕ್ಕೆ ಬ್ರಾಂಡ್ ನೇಮ್ ನೊಂದಣಿ ಯಾಗಿದ್ದು  1 ,2 ,5, 10 ಕೆ.ಜಿ ಬ್ಯಾಗ್  ಜಿ ಐ ಸಂಖ್ಯೆ ಸಹಿತ ಮಾರಾಟಕ್ಕೆ  ಅವಕಾಶವಿದೆ . ಉಡುಪಿಗುಳ್ಳ, ಶ್ರಿವಾದಿರಾಜಗುಳ್ಳ ಎಂಬ ಹೆಸರು ಇದ್ದು. ತಿಳಿಹಸಿರು ಮಿಶ್ರಿತ   ಬಿಳಿ ಗೆರೆಗಳನ್ನು ಹೊಂದಿದ ತೆಳು ಮೇಲ್ಪದರದ ಮೆದುವಾದ ತಿರುಳು‌ ಕಡಿಮೆ‌ ಬೀಜ ದುಂಡನೆಯ‌ ಗುಳ್ಳ  ವಿಶೇಷ ರುಚಿ ಹೊಂದಿದ ಅಪೂರ್ವ ಬದನೆಕಾಯಿ ತಳಿ ಜನ ಮೆಚ್ಚುಗೆ ಗಳಿಸಿದ ತರಕಾರಿ. ಮಟ್ಟುಗುಳ್ಳದ ಹೆಸರಿನಲ್ಲಿ ಅನ್ಯಬದನೆಯನ್ನು ಸುಳ್ಳು ಹೇಳಿ ಮಾರಿದರೆ ತಪ್ಪಿತಸ್ಥರಿಗೆ ಟ್ರೇಡ್ ಮಾರ್ಕ್ ಕಾಯಿದೆ ಉಲ್ಲಂಘನೆಯ ನಿಯಮಾನುಸಾರ ಶಿಕ್ಷೆ ಆಗುತ್ತದೆ. ಮಟ್ಟುಗುಳ್ಳ ತಿಂದು‌  ರುಚಿ ಬಲ್ಲವರಿಗೆ ಅದರ ಅಡುಗೆಯ ಬಹುರೂಪದ‌ ಅರಿವಿರುತ್ತದೆ.

ಭಾರತದಾದ್ಯಂತ ವ್ಯೆವಿಧ್ಯಮಯ  ಬದನೆ ಇದ್ದು  ಉದ್ದಬದನೆ, ಗುಂಡುಬದನೆ, ಬಿಳಿ, ಹಸಿರು, ನೆರಳೆ ಬಣ್ಣದ ಬದನೆ ,ಮುಳ್ಳು ಬದನೆ, ಬೊಳುಬದನೆ  ವಿವಿಧ ಪ್ರಕಾರದ ಬದನೆಗಳಿದ್ದರು  ಜನರ ಪ್ರಥಮ ಆಯ್ಕೆ ‌ಹಾಗೂ  ಮೆಚ್ಚುಗೆ ಮಟ್ಟುಗುಳ್ಳಕ್ಕೆ. ಆಕಾರದಲ್ಲಿ ‌ಡುಂಡಗೆ  ಇದ್ದು ತೊಟ್ಟು ಮತ್ತು ಎಲೆಗಳಲ್ಲಿ ಚಿಕ್ಕ ಚಿಕ್ಕ ಹರಿತವಾದ ಮುಳ್ಳುಗಳಿಂದ ಕೂಡಿರುತ್ತದೆ. ಸಸ್ಯಹಾರಿ   ಪ್ರಿಯರ ಅಚ್ಚು ಮೆಚ್ಚಿನ ತರಕಾರಿ ಇದು. ಮಧ್ಯವರ್ತಿಗಳ‌  ಹಾವಳಿ ನಕಲಿ ಗುಳ್ಳ ಅಂದರೆ ಮಟ್ಟುಗುಳ್ಳವನ್ನೆ ಹೊಲುವ ಇತರ ಬದನೆ ಸೇರಿಸಿ ಮಾರಾಟ  ಮಾಡಿ ಗ್ರಾಹಕರನ್ನು ಮೊಸಗೊಳಿಸದಂತೆ ಮಟ್ಟುಗುಳ್ಳಕ್ಕೆ  ಪ್ರಥಮ ಹಾಗೂ ದ್ವಿತೀಯ ಶ್ರೇಣಿಯ ಮಟ್ಟುಗುಳ್ಳಗಳನ್ನು ವಿಂಗಡಿಸಿ ಸ್ಟಿಕರ್ ಹಾಕಿ‌ಮಾರುಕಟ್ಟೆಗೆ ಬಿಡಲಾಗುತ್ತದೆ. ಶ್ರೀ ವಾದಿರಾಜ ಸ್ವಾಮೀಜಿಯವರು ನೀಡಿರುವ‌ ನೈವೇದ್ಯ ವನ್ನು ತಿನ್ನುವ ಹಯಗ್ರಿವ ಮತ್ತು ಮಟ್ಟುಗುಳ್ಳದ ಚಿತ್ರದ ಈ ಲಾಂಛನದ  ಸ್ಟಿಕ್ಕರನ್ನು ಗುಳ್ಳಕ್ಕೆ ಅಂಟಿಸುವುದರಿಂದ ಅಸಲಿ‌ನಕಲಿ  ಗುಳ್ಳಗಳನ್ನು‌ ಗುರುತಿಸಲು ಸಾದ್ಯಾವೆಂದು‌ 2017 ರಲ್ಲಿ ‌ಸೋದೆ‌ಮಠದ‌ ಆಗಿನ ಮಠಾಧಿಪತಿಗಳಾದ‌ ಶ್ರೀ ಶ್ರೀ ವಿಶ್ವ‌ವಲ್ಲಭ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತದಿಂದ ಸ್ಟಿಕರ್‌  ಬಿಡುಗಡೆ ಗೊಳಿಸಲಾಗಿದೆ. ಅಕ್ಟೋಬರ್ ನಿಂದ ‌ಮಾರುಕಟ್ಟೆಗೆ‌  ಪ್ರವೇಶಿಸಿಸುವ ಮಟ್ಟುಗುಳ್ಳಕ್ಕೆ ಊರು ಪರ ಊರುಗಳಲ್ಲಿ ವಿಶೇಷ ಬೇಡಿಕೆ ‌ಇದೆ. ಗುಳ್ಳದ ಯಾವ ಒಂದು ಭಾಗವೂ‌ ವ್ಯರ್ಥ ವಿಲ್ಲದೆ ಪಾಕ ವೈವಿಧ್ಯಗಳಲ್ಲಿ ಗುಳ್ಳದ  ವಿವಿಧ ರೂಪಗಳು ಕಾಣಬಹುದು.

ಆಡುಮಾತಿನಲ್ಲಿ ಬದನೆ ಬಹು ಸಸಾರದ ಅಥವಾ ಅವಗಣನೆಗೆ  ಒಳಗಾದ ತರಕಾರಿ. ಕೆಲವೊಮ್ಮೆ ಬೈಯಲು ಬದನೆಯನ್ನೆ ಸಾಕ್ಷಿ ಯನ್ನಾಗಿ ಮಾಡುವುದು ಇದೆ. ಆದರೆ ಮಟ್ಟುಗುಳ್ಳ ಹಾಗಲ್ಲ ಸೊದೆ ಮಠದ ವಾದಿರಾಜ  ಸ್ವಾಮಿಯವರ  ವರಪ್ರಸಾದ ಎಂಬ ಐಹಿತ್ಯವಿದೆ. ಮಟ್ಟುಗುಳ್ಳಕ್ಕೂ ಉಡುಪಿ ಶ್ರಿಕೃಷ್ಣ ಮಠಕ್ಕೂ ಅವಿನಾಭಾವ ನಂಟು.ಹಯಗ್ರೀವನೀಗೆ ನೈವೇದ್ಯ ಅರ್ಪಿಸಿದ ಕಥೆಯಲ್ಲಿ ಪರ ವಿರೋಧ ವಿಚಾರಗಳಿವೆ .ಆದ್ದರಿಂದ ಆ ಕಥೆಯ ವಿಚಾರವನ್ನು ನಾನಿಲ್ಲಿ ಬರಯದೆ  ಕೇವಲ ಮಟ್ಟುಗುಳ್ಳದ ಬಗ್ಗೆ ಮಾತ್ರ ಬರೆಯುತ್ತಿದ್ದೆನೆ.ಗುಳ್ಳವಾದಿರಾಜರು  ಕೊಟ್ಟ ಬೀಜ ಎಂಬ ಭಕ್ತಿ ಯಿಂದ ‌ಇಂದಿಗೂ ಹಲವಾರು ಆಚರಣೆ ರೂಢಿಯಲ್ಲಿರುವುದು ನಿಜ. ಉಡುಪಿಯ‌ ಅಷ್ಟ ಮಠಗಳಲ್ಲಿ ಒಂದಾದ ಸೋದೆಮಠದ ಶ್ರೀ ವಾದಿರಾಜರು ಅನುಗ್ರಹಿಸಿ ನೀಡಿದ ಮುಷ್ಟಿ ಬೀಜ ದಿಂದಲೇ ಸೃಷ್ಟಿ ಯಾದ ಮಟ್ಟುಗುಳ್ಳ ಆರಂಭವಾಯಿತು‌  ಎಂಬ‌ಕಾರಣಕ್ಕೆ ತಾವು‌ಬೆಳೆಸಿದ  ಗುಳ್ಳದ  ಪ್ರಥಮ ಫಸಲನ್ನು  ಶ್ರಿಕೃಷ್ಣ ಮಠಕ್ಕೆ ಅರ್ಪಿಸುವುದು‌ ವಾಡಿಕೆ. ಪರ್ಯಾಯದ‌ ಭೊಜನದಲ್ಲಿ‌ ಮಟ್ಟುಗುಳ್ಳಕ್ಕೆ ‌ ಅಗ್ರಸ್ಥಾನ. ಮಕರಸಂಕ್ರಾಂತಿಯ ವಿಶೇಷ ನೈವೇದ್ಯದಲ್ಲೂ  ಗುಳ್ಳ ‌ಇದ್ದೆ ಇರುತ್ತದೆ.

ಮಟ್ಟುಗುಳ್ಳ ಬೆಳೆವ ಪರಿ= ಉಡುಪಿ,ಕಟಪಾಡಿ,‌ಮಟ್ಟುವಿನ‌  ಆಸುಪಾಸಿನ ಊರಿನ ಲ್ಲಿ  ಕೃಷಿಕರು  ಮಟ್ಟುಗುಳ್ಳದ ಕೃಷಿಯನ್ನು ಪೂರ್ಣ ಪ್ರಮಾಣದಲ್ಲಿ ವಾಣಿಜ್ಯ ಕೃಷಿ ಯನ್ನಾಗಿ ಬೆಳೆಸುತ್ತಾರೆ. 2020ರಲ್ಲಿ ಅಂದಾಜು 128 ಎಕರೆ ಭೂಮಿಯಲ್ಲಿ  ಬೆಳೆಗಾರರು  ಮಟ್ಟುಗುಳ್ಳ ಬೆಳೆದಿದ್ದಾರೆ ಎಂಬ  ಮಾಹಿತಿ  ದಾಖಲಾಗಿದೆ . ನವೆಂಬರ್ ‌ನಿಂದ  ಮೇ ತಿಂಗಳ ತನಕ ಸಮೃದ್ಧವಾಗಿ  ಸ್ಥಳಿಯ ಮಾರುಕಟ್ಟೆಯೊಂದಿಗೆ ಬೆಂಗಳೂರು , ಮುಂಬಯಿಯ ‌ಮಾರುಕಟ್ಟೆಯಲ್ಲಿ  ಗುಳ್ಳ ಸಿಗುತ್ತದೆ . ಇಂದಿಗೂ ಸಾಂಪ್ರದಾಯಿಕ ‌ ನಾಟಿ ಕ್ರಮವಾದ ನೀರಾವರಿ  ವ್ಯವಸ್ಥೆ ಯಲ್ಲಿ ಈ  ಬೆಳೆ ಬೆಳೆಯುತ್ತಾ‌ ಬಂದರೂ ಕೆಲ‌ ವರ್ಷಗಳಿಂದ ಗುಳ್ಳದ  ಇಳುವರಿಯಲ್ಲಿ  ಒಂದಲ್ಲ ಒಂದು ತೊಂದರೆ ‌ಅಥವಾ ಇಳುವರಿಯಲ್ಲಿ ಕುಂಠಿತವಾಗುತ್ತದೆ. ಕೀಟ ನಾಶಕದ ಬಳಕೆಯಿಂದ ‌ಮಣ್ಣು ತನ್ನ ಮೂಲ ಗುಣವನ್ನು ಕಳೆದು ಕೊಳ್ಳುತ್ತಿದೆ. ಅದಕ್ಕಾಗಿ ಮಟ್ಟುಗುಳ್ಳದ ‌ಇತಿಹಾಸ, ಬೆಳವಣಿಗೆ, ನಾಟಿಪದ್ದತಿ, ಅಷ್ಟೇ ಅಲ್ಲದೇ ಸಂಶೋಧನೆಗೂ‌  ಅವಕಾಶ ಕಲ್ಪಸಲಾಗಿದೆ. ಹಾಗೂ ‌ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಂಡು ಬೆಳೆಗಾರರನ್ನು  ಸೆಳೆಯಲು ಅನೇಕ ಕಾರ್ಯ ವೈಖರಿ ಯನ್ನು ಮಟ್ಟುಗುಳ್ಳ ಬೆಳೆಗಾರರ  ಸಂಘ ಹಮ್ಮಿಕೊಂಡಿದೆ.

ಉಡುಪಿ ‌ಮಟ್ಟು ಮತ್ತು ಕಟಪಾಡಿಯ  ಆಸುಪಾಸಿನ ಊರಿನಲ್ಲಿ ‌ ಕೃಷಿಕರು ಡೊಡ್ಡ ಡೊಡ್ಡ ಗದ್ದೆಗಳಲ್ಲಿ ಪ್ರತಿ ವರ್ಷ ಗುಳ್ಳ ಕೃಷಿ ಮಾಡುತ್ತಾರೆ. ಇಂದಿಗೂ ಮಟ್ಟುವಿನವರು ಉಡುಪಿಯ  ಕೃಷ್ಣ ‌ಮಠಕ್ಕೆ‌ಬೀಜ ತಂದು  ದೇವರನ್ನು  ಪ್ರಾರ್ಥಿಸಿದ‌ ನಂತರ  ಗುಳ್ಳದ ಬೀಜ ಬಿತ್ತುತ್ತಾರೆ. ಕೊಟ್ಟಿಗೆ ಗೊಬ್ಬರದಿಂದ ಭರ್ಜರಿ ಫಸಲು‌ಸಾದ್ಯ. ಆದರೆ  ದರಕುಸಿತ,  ಸಮಯಕ್ಕೆ ಸರಿಯಾಗಿ ದೊರೆಯದ‌ ಮಾರುಕಟ್ಟೆಯಿಂದ‌  ಬೆಳೆಗಾರರು ಹಿಂದೆಟು ಹಾಕುತ್ತಿರುವುದು ಕಾಣುತ್ತಿದೆ.  ಆದರೆ ಉತ್ತಮ ಇಳುವರಿ ಕೊಡುವ ಹೆಚ್ಚು ‌ಬೇಡಿಕೆ‌ ಇರುವ ಮಟ್ಟುಗುಳ್ಳ  ಪ್ರಕೃತಿ ‌ವಿಕೋಪದಿಂದಾಗಿ  ನಷ್ಟವನ್ನು ಅನುಭವಿಸಿದ್ದು‌ ಇದೆ.

ನಾಲಿಗೆ ಅರಸುವ  ಹೊಸ ರುಚಿ ಅಡುಗೆ ಮಟ್ಟುಗುಳ್ಳದಿಂದ ತಯಾರಿಸಬಹುದು. ಗುಳ್ಳದ ಸಿಹಿಗೊಜ್ಜು ,ಮಸಾಲಪಲ್ಯ ,ಮಟ್ಟುಗುಳ್ಳ ಕೆಂಡದಲ್ಲಿ ‌ಸುಟ್ಟು ಸಿಪ್ಪೆತೆಗೆದು  ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಹುಣಿಸೆ ಹುಳಿಯೊಂದಿಗೆ ರುಚಿಕರ ಚಟ್ನಿ ತಯಾರಿಸ‌ ಬಹುದು. ಗುಳ್ಳ ಮಸಾಲಾ ಎಣ್ಣೆಗಾಯಿ, ಗುಳ್ಳ ‌ಹುಳಿ, ಮಟ್ಟುಗುಳ್ಳ ಡುಂಡಗೆ ಕತ್ತರಿಸಿ  ಉದ್ದಿನ ಹಿಟ್ಟು ಹಾಗೂ ಕಡಲೆ‌ಹಿಟ್ಟಿನಲ್ಲಿ ಮುಳುಗಿಸಿ ಎಣ್ಣೆಯಲ್ಲಿ  ಕರಿದು‌ ಬಜ್ಜಿಯಾ ತಯಾರಿಸ‌ ಬಹುದು. ನುಗ್ಗೆಕಾಯಿ  ಗುಳ್ಳ ‌,ಬೆಳೆ ಹಾಕಿದ ‌ತೆಂಗಿನ‌ ತುರಿಯೊಂದಿಗಿನ  ಪದಾರ್ಥ ಅನ್ನದೊಂದಿಗೆ ಬಹುರುಚಿಕರ‌ವಾಗಿರುತ್ತದೆ.  ಮಟ್ಟುಗುಳ್ಳದ ‌ಬಾತ್, ಸಾಂಬಾರ್, ಗುಳ್ಳ ಮೊಸರು ಗೊಜ್ಜು, ಗುಳ್ಳ ‌ಗಸಿ,‌ ಗುಳ್ಳಹಸಿಮಸಾಲ, ಮತ್ತು ಮಾಂಸ ‌ಹಾರಿಗಳು ಮಟ್ಟುಗುಳ್ಳ ದೊಂದಿಗೆ ಒಣ ಮೀನು, ಮಳಿ(ಮರ್ವಾಯಿ) , ಒಣಸಿಗಡಿ  ಸೇರಿಸಿ ಮಾಡಿದ ಪದಾರ್ಥ ಬಹುರುಚಿಯಾಗಿರುತ್ತದೆ. ಮಟ್ಟುಗುಳ್ಳದ ವಿವಿಧ ಖಾದ್ಯಗಳ‌  ರುಚಿ  ಸವಿಯದವರು ಅತೀ ವಿರಳ. ಬದನೆ ಎಂದರೆ ಸಾಮಾನ್ಯವಾಗಿ  ನಿಕೃಷ್ಟ  ಎಂದೇ ಪರಿಗಣಿಸುವವರು‌ ಮಟ್ಟು ಗುಳ್ಳ ‌ತಿಂದು ನೋಡಿ.

ಕರೊನಾ‌  ಕಾರ್ಮೋಡದ ಲಾಕ್ ಡೌನ್ ‌ನಡುವೆಯು ಉಡುಪಿ ಜಿಲ್ಲೆಯ ಮಟ್ಟುಗುಳ್ಳ ಭರ್ಜರಿ ಮಾರಾಟವಾಗಿದೆ. ಲಾಕ್ ಡೌನ್ ಆರಂಭದಲ್ಲಿ ಮಾರಾಟ ಕ್ಕೆ‌ ತೊಡಕ್ಕಾಗಿದ್ದರು‌ ಅನಂತರ  ಜಿಲ್ಲಾ ‌ತೋಟಗಾರಿಕೆ ಇಲಾಖೆ ಮತ್ತು ಶ್ರೀ ವಾದಿರಾಜ ಮಟ್ಟುಗುಳ್ಳ ಬೆಳೆಗಾರರ ಸಂಘದ ನಡುವೆ ಮಾತುಕತೆ‌ ನಡೆದು ಉಡುಪಿ ‌ ಮತ್ತು ದಕ್ಷಿಣ ಕನ್ನಡ ‌ಜಿಲ್ಲಾ‌ತೋಟಗಾರಿಕಾ  ಇಲಾಖೆಯು ಸಾರ್ವಜನಿಕರಿಗೆ‌‌‌ ಮಾರಾಟ‌ ವ್ಯವಸ್ಥೆಯನ್ನು ‌ಮಾಡಿದೆ  ಸರಕು ಸರಬರಾಜು‌ ಮಾಡಲು ಇಲಾಖೆಯಿಂದ ‌ ಪಾಸ್ ಪಡೆದು‌ ಮಾರಟದಲ್ಲಿ  ತೊಡಗಿಕೊಂಡ‌ ಕಾರಣ ವಿಶೇಷ ಸಭೆ ‌ಸಮಾರಂಭ ದೇವಳದಲ್ಲಿ  ಊಟ ಇಲ್ಲದೆ‌ ಇದ್ದರು  ಮಟ್ಟುಗುಳ್ಳ ಹೆಚ್ಚನ ಪ್ರಮಾಣದಲ್ಲಿ ಖರೀದಿಸಿದ್ದಾರೆ ಎಂದು ಮಟ್ಟುಗುಳ್ಳ ಬೆಳೆಗಾರರ ಸಂಘದ   ಲಕ್ಷ್ಮಣ ಮಟ್ಟು ಹೇಳುವಂತೆ  ಲಾಕ್ ಡೌನ್ ನಡುವೆಯು ಗುಳ್ಳ ಭರ್ಜರಿ ಮಾರಾಟವಾಗಿದೆ.

ಭೌಗೋಳಿಕ  ಮಾನ್ಯತೆ ಪಡೆದ ತಾಜಾ ಮಟ್ಟುಗುಳ್ಳದ ಮಾರಾಟಕ್ಕೆ ಹಾಗೂ ಖರೀದಿಗೆ  ಹ್ಯಾಪ್ಯಾಮ್  ಮಾದರಿಯಲ್ಲಿ ಕಿಯೋಸ್ಕೊ ಸೆಂಟರ್  ಹಾಗೂ  ಮಟ್ಟುಗುಳ್ಳದ ಭವಿಷ್ಯಕ್ಕಾಗಿ  ಗ್ರೀನ್ ಹೌಸ್ ‌ನಿರ್ಮಾಣದಂತ ಅನೇಕ ಹೊಸ ಯೋಜನೆಗಳು ಕಾರ್ಯ ರೂಪಕ್ಕೆ ಬರುತ್ತಿದೆ. ಮಟ್ಟುಗುಳ್ಳದ ‌ಬೆಳೆಗಾರಿಕೆ,‌ಮಾರುಕಟ್ಟೆ, ಬೆಳೆಗಾರರ ಬಗ್ಗೆ ಅಧ್ಯಯನ ‌ನಡೆಸಲು ಮಣಿಪಾಲ  ಇಂಟರ್ ನ್ಯಾಶನಲ್ ಯುನಿವರ್ಸಿಟಿಯ  ವಿದ್ಯಾರ್ಥಿಗಳ ತಂಡ‌ ಮಟ್ಟುಗುಳ್ಳ‌ ಬೆಳೆಯುವ ಪ್ರದೇಶಕ್ಕೆ ಆಗಮಿಸಿ ‌ಮಾಹಿತಿ ಕಲೆಹಾಕಿ ಅಧ್ಯಯನ ‌ನಡೆಸಿದ್ದಾರೆ.

ಭಾರತದಲ್ಲಿ  2010 ರಿಂದ ಬಿಟಿಬದನೆ  ಬೀಜ  ನಿಷೇಧ ‌ಜೌರಿಯಲ್ಲಿದೆ ಆದರೂ ಇಂದಿಗೂ ‌ರಾಜರೋಷವಾಗಿ ಬಿಟಿಬದನೆ‌  ಹಾಗೂ ‌ಬೀಜ ಮಾರಾಟ ವಾಗುತ್ತದೆ. ಇದು ದೇಶಿತಳಿಗಳಿಗೆ  ಅಪಾಯವನ್ನು  ತಂದೊಡ್ಡುತ್ತಿದೆ. ರಾಷ್ಟ್ರೀಯ ತೋಟಗಾರಿಕಾ‌ ಸಮಿತಿಯ‌ ಮಾಹಿತಿ‌ ಅಂತೆ ಕರ್ನಾಟಕ  ಬದನೆ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದೆ. ಕೃಷಿ ವಿಶ್ವ ವಿದ್ಯಾನಿಲಯಗಳು, ಕೃಷಿ ವಿಜ್ಞಾನಿಗಳು  ಮತ್ತು ರೈತರು  ಒಂದಾಗಿ ನಮ್ಮ ನಾಡಿನ ಮಟ್ಟುಗುಳ್ಳದಂತ ಬೆಳೆಯ ಪ್ರಗತಿಗೆ ಈ ತಳಿಯ ಅಭಿವೃದ್ಧಿಗೆ  ಉತ್ಪಾದನೆಯ  ಹೆಚ್ಚಳಕ್ಕೆ ಸೂಕ್ತ ಮಾರುಕಟ್ಟೆ ಹಾಗೂ ‌ಹೆಚ್ಚಿನ ಪ್ರಚಾರ‌ ನೀಡಲು ಇನ್ನೂ ಹೆಚ್ಚಿನ ಶ್ರಮವಹಿಸಬೇಕಾಗಿದೆ.

Leave a Reply

Your email address will not be published. Required fields are marked *