Literature (ಸಾಹಿತ್ಯ)

ಬದಲಾದೆವು ನಾವು: heggaddesamachar.com

Spread the love

ಎದುರು ಸಿಕ್ಕರು
ಒಂದೂ ಮಾತನಾಡದ ನಾವು
ಪೇಸ್ಬುಕ್, ವಾಟ್ಸಾಪುಗಳಲಿ ಚಾಟಿಗಿಳಿಯುತ್ತೇವೆ
ಅಂಗೈಯಗಲದ ಮೊಬೈಲೆಂಬ ಮಾಯಾವಿಯೊಳಗೆ ಬಂಧಿಯಾಗಿದ್ದೇವೆ

ದೊಡ್ಡದಾದ ಮನೆ
ಮನೆಯ ತುಂಬ ಕೋಣೆಗಳು
ಕೆಲಸ ಮುಗಿಸಿ ನಮ್ಮ ನಮ್ಮದೆ ಕೋಣೆಯೊಳಗೆ
ಮೊಬೈಲ್ ಹಿಡಿದು ಕೂತ ನಮಗೆ ಅದೊಂದೆ ಪ್ರಪಂಚ
ಅದೆಷ್ಟೂ ಸಾವಿರ ಮೈಲಿ ದೂರವಿರುವ
ಗೆಳೆಯ, ಗೆಳತಿಯರ ನೋವಿಗೆ ನಲಿವಿಗೆ
ಮಿಡಿಯುವ ನಮಗೆ
ನಮ್ಮ ಪಕ್ಕದೆ ಕೋಣೆಯೊಳಗಿಂದ ಸದ್ದಿಲ್ಲದೆ ಬಿಕ್ಕುವ ಅಮ್ಮನ ಸದ್ದು ನಮಗೆ ಕೇಳಿಸುವುದಿಲ್ಲ.

ಮೊದಲು ಹೀಗಿರಲಿಲ್ಲ ನಾವು
ಎಲ್ಲರು ಮನೆಯ ಅಂಗಳದಲಿ ಸೇರಿ ನಕ್ಕು ನಲಿಯುತ್ತಿದ್ದೆವು
ಒಬ್ಬರನೊಬ್ಬರ ನೋವಿಗೆ ಮಿಡಿಯುತ್ತಿದ್ದೆವು
ಒಬ್ಬೊಬ್ಬರ ಕಾಲೆಳೆಯುತಾ
ದಿನದ ದಿನಚರಿಗಳ ಮಾತಾಡುತಾ
ಅಮ್ಮನ ಕೈ ತುತ್ತು ಸವಿಯುತಾ, ಅವಳನ್ನು ನಗಿಸುತ್ತಾ ಹಾಯಾಗಿದ್ದೇವು
ಮೊಬೈಲ್ ಬಂದ ಮೇಲೆ ನಾವು ಬದಲಾದೆವು
ಉಳಿದು ಹೋದ ಅಮ್ಮ ಮತ್ತು ಮನೆಯ ಅಂಗಳ ಒಂಟಿಯಾದರು
ನಾವು ಕೋಣೆಯೊಳಗೆ ಬಂಧಿಯಾದೆವುಯಾರಿಗು ಈಗ ಸಮಯವಿಲ್ಲ
ಒಬ್ಬರ ನೋವು ಮತ್ತೊಬ್ಬರಿಗೆ ಕಾಣುವುದಿಲ್ಲ
ಓಡುವ ಕಾಲದ ಜೊತೆ ರೇಸಿಗೆ ಬಿದ್ದವರಂತೆ ಓಡುವ ನಮಗೆ ಸಂಬಂಧಗಳು ಕಾಣಿಸುತ್ತಿಲ್ಲಬದಲಾಗುವುದೆಂದರೆ ಹಳೆಯ ಬೇರುಗಳನ್ನ ಮರೆಯುವುದಲ್ಲ
ಹಳೆಯದರೊಂದಿಗೆ ಬೆಳೆಯುವುದು
ನಾವು ಎಷ್ಟೆ ಬೆಳೆದರು ನಮ್ಮ ಸಂಬಂಧಗಳನ್ನ
ನಮ್ಮತನಗಳನ್ನ ಕಳೆದುಕೊಳ್ಳದಿರುವುದು…..

ಬದಲಾಗುವುದೆಂದರೆ ಹಳೆಯ ಬೇರುಗಳನ್ನ ಮರೆಯುವುದಲ್ಲ
ಹಳೆಯದರೊಂದಿಗೆ ಬೆಳೆಯುವುದು
ನಾವು ಎಷ್ಟೆ ಬೆಳೆದರು ನಮ್ಮ ಸಂಬಂಧಗಳನ್ನ
ನಮ್ಮತನಗಳನ್ನ ಕಳೆದುಕೊಳ್ಳದಿರುವುದು…..

  • ಪ್ರಭಾಕರ್ ಎಂ.ಸಿ

Leave a Reply

Your email address will not be published. Required fields are marked *