News (ಸುದ್ದಿ)
ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಸೀಸನ್ 4 ವಿನ್ನರ್ ಸಾವು: heggaddesamachar

ಸ್ಟಾರ್ ಸುವರ್ಣ ಚಾನೆಲ್ ನಡೆಸುತ್ತಿದ್ದ ಪ್ಯಾಟೆ ಹುಡುಗೀರ್ ಹಳ್ಳಿ ಲೈಫ್ ಸೀಸನ್ 4 ಕಾರ್ಯಕ್ರಮದ ವಿನ್ನರ್ ಆಗಿದ್ದ ಮೆಬಿನ ಮೈಕಲ್ ಕಾರು ಅಪಘಾತವಾಗಿದ್ದು, ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ದೇವಿಹಳ್ಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಾರು ಮತ್ತು ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ, ಮೆಬಿನಾ ಮೈಕಲ್ ಅವರು ತೀವ್ರ ಗಾಯಗೊಂಡ ಪರಿಣಾಮ ಸಾವನ್ನಪ್ಪುತ್ತಾರೆ.
ಇವರು ಬೆಂಗಳೂರಿನಿಂದ ಪೇಟೆಯತ್ತ ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ ಕಾರಿನಲ್ಲಿದ್ದ ಉಳಿದಿಬ್ಬರ ಸ್ಥಿತಿ ಚಿಂತಾಜನಕವಾಗಿದೆ, ಅವರನ್ನು ಆದಿಚುಂಚನ ಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ.
ಮೆಬಿನಾ ಮೈಕಲ್ ಅವರು ಮಾಡೆಲಿಂಗ್ನಲ್ಲೂ ಹೆಚ್ಚು ಆಸಕ್ತಿ ಇದ್ದವರು ಆಗಿದ್ದರಿಂದ ಮಾಡೆಲಿಂಗ್ ಕೂಡಾ ಮಾಡುತ್ತಿದ್ದರು.
ಸ್ಟಾರ್ ಸುವರ್ಣ ಕನ್ನಡ ವಾಹಿನಿಯ ಪ್ಯಾಟೆ ಹುಡುಗೀರ್ ಹಳ್ಳಿ ಲೈಫ್ ಸೀಸನ್ 4 ರ ವಿನ್ನರ್ ಆಗಿ ಖ್ಯಾತಿ ಪಡೆದಿದ್ದರು.ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿ ತನ್ನದೇ ಆದ ಫ್ಯಾನ್ ಫಾಲೋವರ್ಸ್ ಕೂಡಾ ತುಂಬಾ ಮಂದಿ ಇದ್ದರು.
ಈಗ ಅಪಘಾತಕ್ಕೀಡಾಗಿ ದುರ್ಮರಣ ಹೊಂದಿದ ಮೆಬಿನಾ ಮೈಕಲ್ ಇವರ ಸಾವು ಅವರ ಕುಟುಂಬ ವರ್ಗ ಹಾಗೂ ಸ್ನೇಹ ವರ್ಗಕ್ಕೆ ಮತ್ತು ಎಲ್ಲಾ ಚಿರಪರಿಚಿತರಿಗೆ ಈ ಘಟನೆ ಅತೀವ ನೋವನ್ನುಂಟು ಮಾಡಿದೆ.