Literature (ಸಾಹಿತ್ಯ)

ಪೋಶ್ ಮತ್ತು ಅಪರಾಧ ಕಾನೂನು ಕಾಯ್ದೆ : heggaddesamachar.com

Spread the love
 • ಮಾಲತಿ ಲೋಕಪ್ಪ, ಅಡ್ವೊಕೇಟ್, ಶಿವಮೊಗ್ಗ. ಮೊ. ೯೧೧೦೬೬೫೩೪೯

೧೯೭೭ ರಲ್ಲಿ ಸುಪ್ರೀಂ ಕೋರ್ಟ್ ಅಸ್ತಿತ್ವಕ್ಕೆ ತಂದಿದ್ದ ವಿಶಾಖಾ ಗೈಡ್‌ಲೈನ್ಸ್ಅನ್ನು (ಭಾರತದಲ್ಲಿನ ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಬಳಸುವ ಮಾರ್ಗಸೂಚಿ) ರದ್ದುಗೊಳಿಸಿ, ಕೆಲಸದ ಸ್ಥಳದಲ್ಲಿ ಮಹಿಳೆಯ ಮೇಲಿನ ಕಿರುಕುಳ (ತಡೆ, ನಿಷೇಧ ಮತ್ತು ನಿವಾರಣೆ) ಕಾಯ್ದೆ, ೨೦೧೩ ಅಥವಾ ಪೊಶ್ ಕಾಯ್ದೆಯನ್ನು ಅಂಗೀಕರಿಸಲಾಯಿತು.
ಅಪರಾಧ ಕಾನೂನು (ತಿದ್ದುಪಡಿ) ಕಾಯ್ದೆ, ೨೦೧೩ ನ್ನು ಅಂಗೀಕರಿಸಲಾಯಿತು. ಭಾರತೀಯ ನೀತಿ ಸಂಹಿತೆ ಸೆಕ್ಷನ್ ೩೫೪ ನ್ನು ಅಳವಡಿಸಲಾಯಿತು. ಇದರಲ್ಲಿ ಲೈಗಿಂಕ ಕಿರುಕುಳ ಮತ್ತು ಆ ಅಪರಾಧಕ್ಕೆ ಇರುವ ದಂಡಗಳ ಕುರಿತು ವಿವರಿಸಲಾಗಿದೆ. ಜತೆಗೆ ಲೈಂಗಿಕ ಕಿರುಕುಳವನ್ನು ಅಪರಾಧವಾಗಿದ್ದು, ಇಂತಹ ಅಪರಾಧಗಳ ಬಗ್ಗೆ ನೌಕರರು ಮಾಹಿತಿ ನೀಡಬೇಕು ಎಂದು ಈ ಕಾಯ್ದೆ ಹೇಳಿದೆ.
ಉದ್ಯೋಗ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ
* ದೈಹಿಕ ಸ್ಪರ್ಶ ಮತ್ತು ಅದರ ಮುಂದುವರಿಕೆ
* ಲೈಂಗಿಕ ಸಹಕಾರಗಳಿಗೆ ಬೇಡಿಕೆ ಅಥವಾ ಮನವಿ
* ಲೈಂಗಿಕತೆಗೆ ಸಂಬoಧಿಸಿದ ಹೇಳಿಕೆಗಳು
* ಅಶ್ಲೀಲ ಚಿತ್ರಗಳನ್ನು ತೋರಿಸುವುದು ಮತ್ತು ಅದರ ಬಗ್ಗೆ ಮಾತನಾಡುವುದು
* ಯಾವುದೇ ರೀತಿಯ ಲೈಂಗಿಕ ಅನುಚಿತ ದೈಹಿಕ, ವಾಕ್ ಅಥವಾ ಇತರೆ ರೀತಿಯ ನಡವಳಿಕೆ
ಕಂಪನಿಯ ಹೊಣೆಗಳೇನು?

 • ಲೈಂಗಿಕ ಕಿರುಕುಳದ ವಿಚಾರಗಳನ್ನು ಸಿಬ್ಬಂದಿ ಸಭೆಗಳಲ್ಲಿ ಮತ್ತು ಇತರೆ ಸೂಕ್ತ ವೇದಿಕೆಗಳಲ್ಲಿ ಪ್ರಸ್ತಾಪಿಸಲು ಕೆಲಸಗಾರರಿಗೆ ಅವಕಾಶ ನೀಡಬೇಕು ಮತ್ತು ಇದರ ಬಗ್ಗೆ ಉದ್ಯೋಗದಾತರ ಸಭೆಗಳಲ್ಲಿ ವ್ಯಾಪಕವಾಗಿ ಚರ್ಚೆ ನಡೆಯಬೇಕು ಎಂದು ಕಾನೂನು ಹೇಳುತ್ತದೆ.
 • ಮಾರ್ಗದರ್ಶಿಗಳನ್ನು ಪ್ರಕಟಿಸುವುದರ ಮೂಲಕ ಮಹಿಳಾ ಉದ್ಯೋಗಿಗಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಪ್ರಮುಖವಾಗಿ ಮಾಡಬೇಕು.
 • ಸಂತ್ರಸ್ತೆ ಅಥವಾ ಸಾಕ್ಷಿದಾರರ ವಿರುದ್ಧ ತಾರತಮ್ಯ ನಡೆಯದಂತೆ ತಡೆಯುವುದು ಮತ್ತು ದೌರ್ಜನ್ಯಕ್ಕೆ ಒಳಗಾದ ಆರೋಪ ಮಾಡಿರುವ ಸಂತ್ರಸ್ತೆ ವರ್ಗಾವಣೆಯ ಆಯ್ಕೆ ಇದ್ದು ಅದಕ್ಕೆ ಕೋರಿದಾಗ ಅದಕ್ಕೆ ಅವಕಾಶ ನೀಡುವುದು ಕಂಪನಿಯ ಹೊಣೆಗಾರಿಕೆ.
 • ಕಚೇರಿ ಮಾತ್ರವಲ್ಲದೆ, ಕೆಲಸಕ್ಕೆ ಸಂಬoಧಿಸಿದ ಉದ್ಯೋಗಿಯು ಭೇಟಿ ನೀಡುವ ಯಾವುದೇ ಸ್ಥಳ, ಆ ಭೇಟಿಗೆ ಒದಗಿಸುವ ಸಾರಿಗೆ ಸೌಲಭ್ಯ ಕೂಡ ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ. ರೆಸ್ಟೋರೆಂಟ್‌ಗಳಲ್ಲಿನ ಊಟದ ಅವಧಿಯಲ್ಲಿ ಕಿರುಕುಳ ನಡೆದರೂ ಅದನ್ನು ಪರಿಗಣಿಸಲಾಗುತ್ತದೆ.
  ಉಲ್ಲಂಘನೆಯಾದರೆ ಏನು ಶಿಕ್ಷೆ
 • ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸುವ ಅಪರಾಧಕ್ಕೆ ಕ್ರಿಮಿನಲ್ ಲಾ ಆಕ್ಟ್ ೨೦೧೩ ರ ಅಡಿಯಲ್ಲಿ ೧ ರಿಂದ ೫ ವರ್ಷ ಜೈಲು ಮತ್ತು ದಂಡ ವಿಧಿಸಬಹುದು.
 • ಮಹಿಳೆಯ ಗಮನಕ್ಕೆ ಬಾರದಂತೆ ಆಕೆಯ ಚಿತ್ರವನ್ನು ನೋಡವುದು, ತೆಗೆಯುವುದು ಮತ್ತು ಹಂಚುವುದನ್ನು ಮಾಡಿದರೆ ಮಾಹಿತಿ ತಂತ್ರಜ್ಞಾನ ಕಾಯ್ದೆ, ೨೦೦ರ ಅಡಿ ೧ ರಿಂದ ೭ ವರ್ಷ ಜೈಲು ಮತ್ತು ದಂಡ ವಿಧಿಸಲು ಅವಕಾಶವಿದೆ.
 • ಮಹಿಳೆಯ ಗೌರವಕ್ಕೆ ಕುಂದುತರುವoತೆ ಪದಗಳ ಬಳಕೆ, ಹಾವಭಾವಗಳನ್ನು ಪ್ರದರ್ಶನಕ್ಕೆ ೨೦೧೩ರ ಕ್ರಿಮಿನಲ್ ಕಾನೂನು ಕಾಯ್ದೆಯಡಿ ಮೂರುವರ್ಷ ಜೈಲು ಶಿಕ್ಷೆ ವಿಧಿಸಬಹುದು.
 • ತಮ್ಮ ಅಧೀನ ನೌಕರರ ಜತೆ ಸಹಮತದ ಲೈಂಗಿಕ ಸಂಬoಧ ಹೊಂದಿದರೂ ಅಪರಾಧ ಕಾನೂನು ಕಾಯ್ದೆಯಡಿ ೫ ರಿಂದ ೧೦ ವರ್ಷ ಜೈಲು ಹಾಗೂ ದಂಡ ವಿಧಿಸಬಹುದು.
  ಕಾನೂನು ಪ್ರಕಾರ ಲೈಂಗಿಕ ಕಿರುಕುಳವೆಂದರೆ ಏನೇನು? ಏನು ಹೇಳುತ್ತೆ ಕಾಯ್ದೆ ?
  ದೇಶಾದ್ಯಂತ ಲೈಂಗಿಕ ಕಿರುಕುಳದ ವಿರುದ್ಧ ಜನಜಾಗೃತಿ ಅಭಿಯಾನ ಸ್ವಯಂಚಾಲಿತವಾಗಿ ನಡೆಯುತ್ತಿದೆ. ಮಹಿಳೆಯರು ತಮಗಾದ ದೌರ್ಜನ್ಯಗಳ ಬಗ್ಗೆ ಬಹಿರಂಗವಾಗಿ ಮಾತನಾಡತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಲೈಂಗಿಕ ಕಿರುಕುಳ ಎಂದರೆ ಏನು ಎಂಬುದರ ವ್ಯಾಖ್ಯಾನ ಇಲ್ಲಿದೆ.
 • ಬೆಂಗಳೂರು: ಈಗ ಭಾರತ ಸೇರಿ ವಿಶ್ವಾದ್ಯಂತ Me Too ಎಂಬ ಅಭಿಯಾನ ದೊಡ್ಡ ಸದ್ದು ಮಾಡುತ್ತಿದೆ. ಪುರುಷರಿಂದ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳಕ್ಕೆ ಒಳಗಾದ ಮಹಿಳೆಯರು ಮೀಟೂ ಹೆಸರಲ್ಲಿ ಧ್ವನಿ ಎತ್ತಲು ಪ್ರಾರಂಭಿಸಿದ್ದಾರೆ. ಕೆಲವಾರು ವರ್ಷಗಳಿಂದಲೇ ಈ ಧ್ವನಿ ಜೋರಾಗತೊಡಗಿತಾದರೂ ೨೦೧೭ ರಿಂದ #Me Too ಎಂಬ ಹ್ಯಾಷ್‌ಟ್ಯಾಗ್ ಮೂಲಕ ಒಂದು ಪಥದಲ್ಲಿ ಈ ಅಭಿಯಾನ ನಡೆಯುತ್ತಿದೆ. ತಮ್ಮ ಜೀವನದ ಯಾವುದೇ ಕಾಲಘಟ್ಟದಲ್ಲಿಯಾದರೂ ಸರಿ ಲೈಂಗಿಕ ದೌರ್ಜನ್ಯ ನಡೆದಿದ್ದರೆ ಅದನ್ನು ದೈರ್ಯವಾಗಿ ಪ್ರಸ್ತಾಪಿಸಿ ತಮ್ಮ ಬಾಳಿಗೆ ಹುಳಿ ಹಿಂಡಿದ ಕೀಚಕರನ್ನು ಬಯಲಿಗೆ ತರುವ ಈ ಅಭಿಯಾನಕ್ಕೆ ಪುರುಷರಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ. ಈ ಲೈಂಗಿಕ ಕಿರುಕುಳವನ್ನು ಕಾನೂನು ಹೇಗೆ ವ್ಯಾಖ್ಯಾನಿಸುತ್ತದೆ? ಅತ್ಯಾಚಾರ ಎಸಗುವುದು ಮಾತ್ರವೇ ಅಪರಾಧವಾ? ೨೦೧೩ ರಲ್ಲಿ ಕೇಂದ್ರಸರ್ಕಾರವು ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಕಾಯ್ದೆಯನ್ನು ಜಾರಿಗೆ ತಂದಿದೆ. ಅದಕ್ಕೂ ಮುಂಚೆ ಲೈಂಗಿಕ ಕಿರುಕುಳದ ವಿಚಾರಗಳಲ್ಲಿ ವಿಶಾಖಾ ಮಾರ್ಗದರ್ಶಿ ಸೂತ್ರವನ್ನು ಅನುಸರಿಸಲಾಗುತ್ತಿತ್ತು. ಈಗ ಹೊಸ ಕಾಯ್ದೆಯು ಲೈಂಗಿಕ ಅಪರಾಧ ತಡೆಗಟ್ಟಲು ಪ್ರಬಲ ಕಾನೂನುಗಳನ್ನು ಮುಂದಿಟ್ಟಿವೆ.
  ಕಂಪನಿಗಳಿಗೆ ಕಟ್ಟುಪಾಡು:
  ಕನಿಷ್ಟ ೧೦ ಉದ್ಯೋಗಿಗಳಿರುವ ಸಂಸ್ಥೆಯಲ್ಲಿ ಆಂತರಿಕ ದೂರು ಸಮಿತಿ ಸ್ಥಾಪನೆ ಕಡ್ಡಾಯ. ಈ ಸಮಿತಿಯಲ್ಲಿ ಕನಿಷ್ಟ ಅರ್ಧಪ್ರಮಾಣದಷ್ಟು ಥರ್ಡ್ ಪಾರ್ಟಿಕೂಡ ಸಮಿತಿಯಲ್ಲಿರಬೇಕು.
  ಸಂಸ್ಥೆಯಲ್ಲಿ ಒಬ್ಬ ಉದ್ಯೋಗಿ ದೂರು ಸಲ್ಲಿಸಿದ ನಂತರ, ಆರೋಪಿಯು ತಪ್ಪೆಸಗಿರುವುದು ಗೊತ್ತಾದರೆ ಸಮಿತಿ ಸದಸ್ಯರು ಆತನ ಮೇಲೆ ಶಿಸ್ತಿನ ಕ್ರಮ ಜರುಗಿಸಬಹುದು, ಅಥವಾ ಕ್ರಿಮಿನಲ್ ಮೊಕದ್ದಮೆ ಹಾಕಬಹುದು. ಸಂತ್ರಸ್ಥೆಯು ಅಪರಾಧಿಯಿಂದ ಪರಿಹಾರ ಕೋರಬಹುದು. ಅಪರಾಧಿಯ ಸಂಬಳ ಕಡಿಮೆ ಮಾಡಿಸುವ ಮತ್ತು ವರ್ಗಾವಣೆ ಮಾಡಿಸುವ ಅವಕಾಶವೂ ಇದೆ.
 • ಮಹಿಳೆಗೆ ಕಳಂಕ ಹಚ್ಚುವ ಉದ್ದೇಶದಿಂದ ಫೋಟೋಗಳನ್ನ ತಿರುಚಿ ಹಂಚುವುದು ಐಪಿಸಿ ಸೆಕ್ಷನ್ ೪೯೯ ಪ್ರಕಾರ ಅಪರಾಧ. ಇದಕ್ಕೆ ೨ ವರ್ಷಗಳವರೆಗೆ ಜೈಲುಶಿಕ್ಷೆ ಇದೆ.
 • ಮಹಿಳೆಗೆ ಕಿರುಕುಳ ಕೊಡುವ ಉದ್ದೇಶದಿಂದ ಆಕೆಯ ಬಗ್ಗೆ ಸಾರ್ವಜನಿಕವಾಗಿ ಮತ್ತು ಆನ್‌ಲೈನ್ ಅಶ್ಲೀಲಕಾರಿ ಅಥವಾ ಅವಮಾನಕಾರಿ ವಿಷಯಗಳನ್ನು ಪೋಸ್ಟ್ಮಾಡುವುದು ಐಟಿ ಕಾಯ್ದೆಯ ಸೆಕ್ಷನ್ ೬೭ ರ ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲಾಗುತ್ತದೆ. ಈ ಪ್ರಕರಣಗಳಲ್ಲಿ ಅಪರಾಧಿಗೆ ದಂಡಸoಹಿತೆ ೨ ವರ್ಷಗಳ ಜೈಲು ಶಿಕ್ಷೆ ಸಿಗಬಹುದು.
 • ಪುರುಷನೊಬ್ಬ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಕ್ರಿಯೆ ಮಾಡಿದರೆ, ಅಥವಾ ಅಶ್ಲೀಲ ಪದ ಬಳಕೆ ಮಾಡಿದರೆ, ಅಥವಾ ಅಶ್ಲೀಲ ಹಾಡುಗಳನ್ನು ಹಾಡಿದರೆ ಆತನಿಗೆ ಐಪಿಸಿ ಸೆಕ್ಷನ್ ೨೯೪ ಅಡಿಯಲ್ಲಿ ೩ ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.
  ಇವೆಲ್ಲದರ ಜೊತೆಗೆ ಮನುಷ್ಯ ತನ್ನ ನಡವಳಿಕೆಯನ್ನು ತಿದ್ದಿಕೊಂಡು ಈ ಕಾನೂನಿಗೆ ತಲೆಬಾಗಿ ಯಾವುದೇ ಶೊಷಣೆ ಮಾಡದೇ ಹೆಣ್ಣು ಮಕ್ಕಳಿಗೆ ತಮ್ಮ ಕೆಲಸದ ಸ್ಥಳಗಳಲ್ಲಿ ದೈರ್ಯವಾಗಿ ತಮ್ಮ ಕೆಲಸವನ್ನು ನಿಭಾಯಿಸಲು ಅವಕಾಶ ಮಾಡಿಕೊಟ್ಟರೆ ಅದು ನಮ್ಮೆಲ್ಲ ಹೆಣ್ಣು ಮಕ್ಕಳಿಗೆ ಹೆಮ್ಮೆಯ ವಿಷಯವಾಗಿರುತ್ತದೆ. ಮನೆಯನ್ನು ನಿಭಾಯಿಸಿಕೊಂಡು ಹಾಗೂ ಹೊರಗಿನ ಕೆಲಸಗಳಲ್ಲಿ ಹೆಣ್ಣು ಮಕ್ಕಳು ತೊಡಗಿರುವುದೇ ಅತ್ಯಂತ ಮಹತ್ವದ ವಿಷಯ. ಅವರುಗಳಿಗೆ ಯಾವುದೇ ತೊಂದರೆ ನೀಡದೆ ಈ ಸಮಾಜದಲ್ಲಿ ಯಶಸ್ವಿಯಾಗಿ ಕೆಲಸ ನಿಭಾಯಿಸಲು ಅನುವು ಮಾಡಿಕೊಟ್ಟರೆ ಅದು ನಮ್ಮ ಹೆಣ್ಣು ಮಕ್ಕಳಿಗೆ ಈ ಸಮಾಜ ಕೊಟ್ಟ ಕಾಣಿಕೆಯಾಗಿರುತ್ತದೆ.

Leave a Reply

Your email address will not be published. Required fields are marked *