News (ಸುದ್ದಿ)
ಪೋಲಿಸ್ ಸಿಬ್ಬಂದಿಗಳಿಗೆ ನಿರ್ಮಾಪಕಿ ಶ್ರುತಿ ನಾಯ್ಡು ಅಭಿನಂದನೆ: heggaddesamachar.com

ಕೊರೊನಾ ವಿರುದ್ದ ಹೋರಾಟ ನಡೆಸುತ್ತಿರುವ ಪೋಲಿಸ್ ಹಾಗೂ ಪೋಲಿಸ್ ಸಿಬ್ಬಂದಿಗಳಿಗೆ ನಿರ್ಮಾಪಕಿ ಶ್ರುತಿ ನಾಯ್ಡು ವಿನೂತನವಾಗಿ ಅಭಿನಂದಿಸಿದ್ದಾರೆ.
ಮೈಸೂರಿನ ಕುವೆಂಪುನಗರ ಪೋಲಿಸ್ ಠಾಣೆಗೆ ಆಗಮಿಸಿದ ಶ್ರುತಿ ನಾಯ್ಡು ಠಾಣೆಯ ಪೊಲೀಸ್ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ” ಮನದಾಳದ ನಮನ ಶ್ರುತಿ ನಾಯ್ಡು”
ವಿಭಿನ್ನ ವಿನ್ಯಾಸದಲ್ಲಿ ಸಿದ್ಧಪಡಿಸಿದ ಬಾಕ್ಸ್ ನಲ್ಲಿ 20 ಗ್ರಾಮ್ ಬೆಳ್ಳಿ ಪದಕವಿಟ್ಟು ಸಿಬ್ಬಂದಿಗಳಿಗೆ ವಿತರಿಸಿ ವಿಶೇಷ ರೀತಿಯಲ್ಲಿ
ಕೃತಜ್ಞತೆ ಸಲ್ಲಿಸಿದ್ದಾರೆ.
ಕಾರ್ಯಕ್ರಮದಲ್ಲಿ ಎಸಿಪಿ ಪೂರ್ಣಚಂದ್ರ ಮತ್ತು ಪೊಲೀಸ್ ಇನ್ಸ್ ಪೆಕ್ಟರ್ ರಾಜು ಜೆ.ಸಿ. ಉಪಸ್ಥಿತ ರಿದ್ದ್ರರು.
Post Views:
323