News (ಸುದ್ದಿ)

ಪೊಲೀಸರಿಗೆ ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್, ಡೆಟಾಲ್ ಸೋಪ್: heggaddesamachar

Spread the love

ತಿ.ನರಸೀಪುರ:ಪ್ಯೂಷನ್ ಯೂಥ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಕಾಡೆಮಿ ಟ್ರಸ್ಟ್ ವತಿಯಿಂದ ಕೋರನ ವಾರಿಯರ್ಸ್ ಪೊಲೀಸ್ ಇಲಾಖೆ ಹಾಗೂ ಪೌರಕಾರ್ಮಿಕರಿಗೆ 150 ಜನಕ್ಕೆ ಹ್ಯಾಂಡ್ ಸ್ಯಾನಿಟೆಜರ್, ಮಾಸ್ಕ್ ಮತ್ತು ಡೆಟಾಲ್ ಸೋಪ್ ವಿತರಿಸಿದರು.

ಅಕಾಡೆಮಿಯ ತಾಲ್ಲೂಕು ಅಧ್ಯಕ್ಷ ತೇಜಸ್ ಮಾತನಾಡಿ ಸಂಘದ ರಾಜ್ಯಾಧ್ಯಕ್ಷ ಕಾರ್ತಿಕ್ ನಾಯಕರ ಮಾರ್ಗದರ್ಶನದ ಮೇರೆಗೆ ಮನುಕುಲ ಉಳಿಸುವ ಸಲುವಾಗಿ ಹಗಲಿರಳು ಶ್ರಮಿಸುತ್ತಿರುವ ಪುರಸಭೆಯ ಪೌರ ಕಾರ್ಮಿಕರು ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರು ಕಾಯಿಲೆ ವಿರುದ್ಧ ತಮ್ಮ ಪ್ರಾಣದ ಹಂಗನ್ನು ತೊರೆದು ಹಗಲಿರುಳು ಶ್ರಮಿಸುತ್ತಿದ್ದಾರೆ.

ಅವರ ಮಾರ್ಗದರ್ಶನದಲ್ಲಿ ನಡೆಯಬೇಕಾದುದು ನಮ್ಮ ಸಾರ್ವಜನಿಕರುತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಪುರಸಭೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸ್ಪಂದಿಸಬೇಕು ಹೊರಗಡೆ ಬರುವಾಗ ಮಾಸ್ಕೊ ಕಂಡುಬರಬೇಕು ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿ ಇದು ನಮ್ಮ ಅಕಾಡೆಮಿಯ ಒಂದು ಅಳಿಲು ಸೇವೆ ಮಾಡುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಪಂ ಸದಸ್ಯ ರಮೇಶ್ ಹಿರಿಯ ಆರೋಗ್ಯಾಧಿಕಾರಿ ಚೇತನ್ ಕುಮಾರ್ ಕಿರಿಯ ಆರೋಗ್ಯಾಧಿಕಾರಿ ಮಹೇಂದ್ರ ಪುರಸಭೆ ಸದಸ್ಯ ಮಂಜು (ಬಾದಾಮಿ), ಮಾದೇಶ್ ಅಕಾಡೆಮಿಯ ಚಂದ್ರಶೇಖರ್ ರಾಜೇಶ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *