News (ಸುದ್ದಿ)

ಪೇದೆಗೆ ಕೊರೋನಾ – SBI ಬ್ಯಾಂಕ್ ಸೀಲ್ ಡೌನ್: heggaddesamachar

Spread the love

ಕೆ.ಆರ್. ನಗರ: ಕೆ.ಎಸ್.ಆರ್.ಪಿ ಪೇದೆ ಬೆಂಗಳೂರು ಕರ್ತವ್ಯಕ್ಕೆ ತೆರಳಿದ್ದ ವೇಳೆ ಕೊರೋನ ಪಾಸಟಿವ್ ಬಂದ ಹಿನ್ನೆಲೆಯಲ್ಲಿ ಸ್ವಗ್ರಾಮಕ್ಕೆ ಹಾಗೂ ಪಕ್ಕದ ಗ್ರಾಮ ಗಂಧನಹಳ್ಳಿ ಗ್ರಾಮದ SBI ಬ್ಯಾಂಕ್ ಗೆ ಬಂದು‌ ಹೋಗಿದ್ದರಿಂದ ತಾಲೂಕು ಆಡಳಿತ SBI ಬ್ಯಾಂಕ್ ನ್ನು ಇಂದು ಸೀಲ್ ಡೌನ್ ಮಾಡಲಾಯಿತು.

ತಹಸೀಲ್ದಾರ್ ಮಂಜುಳ ಅವರು ಬ್ಯಾಂಕ್ ಸೀಲ್ ಡೌನ್ ಮಾಡಿಸಿ ನಂತರ ಬ್ಯಾಂಕ್ ಸಿಬ್ಬಂದಿಗಳನ್ನು 14 ದಿನದ ಹೋಂ ಕ್ವಾರಂಟೈನ್ ಮಾಡುವಂತೆ ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಇನ್ನೂ ಮೂರು ಅಥವಾ ನಾಲ್ಕು ದಿನದೊಳಗೆ ಬ್ಯಾಂಕನ್ನು ಸಂಪೂರ್ಣವಾಗಿ ಸ್ಯಾನೀಟೈಸ್ ಮಾಡಿದಿ ಹೊಸ ಸಿಬ್ಬಂದಿಗಳನ್ನು ತಾತ್ಕಾಲಿಕವಾಗಿ ನಿಯೋಜಿಸಲಾಗುವುದು ಅಲ್ಲಿಯವರೆಗೆ ಗ್ರಾಮಸ್ಞರು ಸಹಕಾರ ನೀಡಿ ಎಂದು ಮನವಿ ಮಾಡಿದ್ದಾರೆ.
ಕೆ.ಆರ್.ನಗರ ಪೊಲೀಸ್ ಠಾಣೆಯ PSI ಚೇತನ್, ಆರೋಗ್ಯ ಇಲಾಖೆ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *