News (ಸುದ್ದಿ)

ಪಿರಿಯಾಪಟ್ಟಣ ತಾಲೂಕಿನ ಜಿಲ್ಲಾಗಡಿಭಾಗಗಳಿಗೆ ಜಿಲ್ಲಾಧಿಕಾರಿಗಳ ಭೇಟಿ….! | heggaddesamachar.com

Spread the love

ಬೆಟ್ಟದಪುರ: ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಜಿಲ್ಲಾ ಗಡಿಭಾಗವಾದ ಹಲಗನಹಳ್ಳಿ ಹಾಗೂ ಕೊಪ್ಪ ಗ್ರಾಮಗಳಲ್ಲಿನ ಕೊರೊನಾ (ಕೊವೀಡ್-19) ತಪಾಸಣೆಯ ಚೆಕ್ ಪೊಸ್ಟ್ ಗೆ ಜಿಲ್ಲಾಧಿಕಾರಿಗಳಾದ ಅಭಿರಾಮ್ ಜಿ.ಶಂಕರ್‍ ಭೇಟಿ ನೀಡಿ ಪರೀಶಿಲಿಸಿದರು.
ಹೊರ ರಾಜ್ಯ, ಜಿಲ್ಲೆಗಳಿಂದ ಸಂಚಾರ ಮಾಡುವರನ್ನ ತಪಾಸಣೆ ಬಳಿಕ ಸಂಚಾರಕ್ಕೆ ಅವಕಾಶ ಕೊಡಬೇಕು. ಜಿಲ್ಲೆಯು ರೆಡ್ ಆಲಟ್೯ನಲ್ಲಿದ್ದು, ಎಲ್ಲರ ಸಹಕರದಿಂದ ಮಾತ್ರ ಮಾಹಮಾರಿ ಕೊರೊನಾ ನಿಯಂತ್ರಣ ಮಾಡಬಹುದು ಎಂದರು.

Heggadde Samachar News : https://studio.helo-app.com/profile/myposts


ಜಿಲ್ಲಾ ಗಡಿಭಾಗ ಹೊರತು ಪಡಿಸಿ ಬೇರೆ ಕಡೆಯಿಂದ ಜಿಲ್ಲೆಗೆ ಸಂಚಾರ ಮಾಡುವವರ ಮೇಲು ಕೂಡ ನಿಗಾವಹಿಸಿಬೇಕು, ಅಂತಹ ಸ್ಥಳಗಳಲ್ಲಿ ಪೊಲೀಸ್ ಹಾಗೂ ಆರೋಗ್ಯ ಅಧಿಕಾರಿಗಳು ಮುಂಜಾಗ್ರತೆ ಕ್ರಮಕೈಗೊಳ್ಳಬೇಕು ಎಂದರು ನಂತರ ತಾಲೂಕು ಆಡಳಿತ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಇದೇ ವೇಳೆ ಹಲನಗನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶೂಶ್ರಕಿ(ನಸ್೯) ಅವಶ್ಯಕತೆ ಇರುವುದನ್ನ ಅಲ್ಲಿನ ವೈದ್ಯಾಧಿಕಾರಿ ಡಾ.ಶೋಭರವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ, ಜಿಲ್ಲಾಧಿಕಾರಿಗಳು ಆದಷ್ಟು ಬೇಗ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.


ಈ ಸಂದಭ೯ದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಜಿಲ್ಲಾ ಪಂಚಾಯ್ತಿ ಸಿ.ಇ.ಒ ಪ್ರಶಾಂತ್ ಕುಮಾರ್ , ‍ಉಪವಿಭಾಗಧಿಕಾರಿ ವೀಣಾ, ಡಿವೈಎಸ್ಪಿ ಸುಂದರ್ ರಾಜ್, ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ, ವೃತ್ತ ನಿರೀಕ್ಷಕ ಪ್ರದೀಪ್, ತಾ.ಪಂ ನರೇಗಾ ಯೋಜನಾ ನಿರ್ದೇಶಕ ರಘುನಾಥ್, ಬೆಟ್ಟದಪುರ ಪೊಲೀಸ್ ಠಾಣಾಧಿಕಾರಿ ಲೋಕೇಶ್, ಉಪ ತಹಸೀಲ್ದಾರ್ ಶಶಿಧರ್, ಪಿಡಿಒ ಅಬಿಅಹ್ಮದ್, ಕಂದಾಯ ನಿರೀಕ್ಷಕ ಪ್ರದೀಪ್, ತಾ.ಭೋವಿ ಸಮಾಜದ ಅಧ್ಯಕ್ಷ ಎನ್.ಟಿ ರವಿಕುಮಾರ್, ಸೇರಿದಂತೆ ಇತರರು ಹಾಜರಿದರು.

Leave a Reply

Your email address will not be published. Required fields are marked *