News (ಸುದ್ದಿ)

ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಗೆ ಗಲ್ಲು ಶಿಕ್ಷೆ: heggaddesamachar.com

Spread the love

ಎಸ್!, 2013 ರಲ್ಲಿ ಸಲ್ಲಿಕೆಯಾದ ದೇಶದ್ರೋಹ ಪ್ರಕರಣದ ತೀರ್ಪನ್ನ ಇಂದು ವಿಶೇಷ ನ್ಯಾಯಮಂಡಳಿ ಪ್ರಕಟಿಸಿದೆ. ಈ ಪ್ರಕರಣ ಸಂಬಂಧ ಮುಷರಫ್ ಗೆ ದೇಶದ್ರೋಹದ ಆರೋಪದಡಿ ಗಲ್ಲು ಶಿಕ್ಷೆ ವಿಧಿಸಿದೆ.

ಈ ತೀರ್ಪು ಇಂದು ಹೊರಬಿದ್ದಿದ್ದು ಹಿಂದೆ ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಮುಷರಫ್ ೨೦೦೭ರ ನವೆಂಬರ್ ೩ ರಂದು ತುರ್ತು ಪರಿಸ್ಥಿತಿ ಘೋಷಿಸಿದ್ದರು.

ನಂತರ ಬಂದ ನವಾಜ್ ಷರೀಫ್ ನೇತ್ರತ್ವದ ಸರ್ಕಾರ ಮುಷರಫ್ ವಿರುದ್ದ ದೇಶದ್ರೋಹದ ಆರೋಪ ಹೊರಿಸಿ ೨೦೧೩ ರಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿತ್ತು. ೨೦೧೪ರ ಮಾರ್ಚ್ ೩೧ ರಂದು ಅವರ ವಿರುದ್ಧ ದೋಷಾರೋಪ ಹೊರಿಸಲಾಗಿತ್ತು. ಈ ಸಂಬಂಧ ಇಂದು ಅಂತಿಮ ತೀರ್ಪು ಹೊರಬಿದ್ದಿದೆ.

Leave a Reply

Your email address will not be published. Required fields are marked *