News (ಸುದ್ದಿ)
ಪಶುವೈದ್ಯೆ ಪ್ರಕರಣ ಮಾಸುವ ಮೊದಲೇ ಮತ್ತೊಂದು ಅತ್ಯಾಚಾರ: ೫೦ ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ:HeggaddeSamachar

ಅಮರಾವತಿ: ಹೈದರಾಬಾದ್ ನಲ್ಲಿ ಪಶುವೈದ್ಯೆ ಪ್ರಿಯಾಂಕ ಮೇಲೆ ಅತ್ಯಾಚಾರ ನಡೆಸಿ ಹತ್ಯೆಗೈದಿರುವ ಅಮಾನುಷ ಘಟನೆಯ ಬೆನ್ನಲ್ಲೇ ಇದೀಗ ಆಂಧ್ರಪ್ರದೇಶದಲ್ಲಿ ಮತ್ತೊಂದು ಗ್ಯಾಂಗ್ ರೇಪ್ ನಡೆದಿದೆ.

ಆಂಧ್ರದ ಪೂರ್ವ ಗೋಧಾವರಿ ಜಿಲ್ಲೆಯಲ್ಲಿ ೫೦ ವರ್ಷದ ವಿಧವೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿದೆ ಎನ್ನುವ ಸುದ್ಧಿಯನ್ನ ಸ್ಥಳಿಯ ಪೋಲೀಸರು ವರದಿ ಮಾಡಿದ್ದಾರೆ.

ಮೂವರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದು, ಮಹಿಳೆ ಒಬ್ಬಳೆ ಮನೆಯಲ್ಲಿರುವುದನ್ನು ಗಮನಿಸಿ ಮನೆಗೆ ನುಗ್ಗಿ ಕೃತ್ಯಗೈದಿದ್ದಾರೆನ್ನಲಾಗಿದೆ.
ಈಗಾಗಲೇ ಓರ್ವ ಆರೋಪಿಯನ್ನು ಬಂದಿಸಲಾಗಿದ್ದು, ಇನ್ನೊಬ್ಬ ಇನ್ನಿಬ್ಬರಿಗಾಗಿ ಶೋಧ ನಡೆಸಲಾಗಿದೆ.
