News (ಸುದ್ದಿ)

ಪರಿಸರ ಉಳಿಸಿ ಎಂದು ರಂಜಾನ್ ಕಿಟ್ ವಿತರಿಸಿದರು ಮೈಸೂರು ಮಂದಿ: heggaddesamachar.com

Spread the love

ಪಾತಿ ಫೌಂಡೇಷನ್ ವತಿಯಿಂದ ಅಗ್ರಹಾರದ ಶಂಕರಮಠ ರಸ್ತೆಯಲ್ಲಿರುವ
ಶ್ರೀಕಾಂತ ಶಾಲೆ ಆವರಣದಲ್ಲಿ ಸಸಿ ನೆಟ್ಟಿ ಹಾಗೂ ರಂಜಾನ್ ಕಿಟ್ ವಿತರಿಸಿ ಮುಸಲ್ಮಾನ್ ಬಾಂಧವರೊಡನೆ ಗಿಡ ನೆಡುವ ಮೂಲಕ ಶುಭ ಕೋರಿದರು.

ನಂತರ ಮಾತನಾಡಿದ ಮಾಜಿ ನಗರಪಾಲಿಕೆ ಸದಸ್ಯರಾದ ಎಂಡಿ ಪಾರ್ಥಸಾರಥಿ ‘ದೇವರ ಮುಂದೆ ಸರ್ವರೂ ಸಮಾನರು’ಈದ್ ಉಲ್ ಫಿತ್ರ್’ ಹಬ್ಬ ಆತ್ಮಶುದ್ಧಿಯ ಪ್ರತೀಕವಾಗಿದೆ ‘30 ದಿನಗಳನ್ನು ಉಪವಾಸದ ಜತೆಗೆ ಪ್ರಾರ್ಥನೆ, ಆಧ್ಯಾತ್ಮಿಕ ಚಿಂತನೆಯಲ್ಲಿ ಕಳೆದು ಕೊನೆಯಲ್ಲಿ ಹಬ್ಬದ ಸಂಭ್ರಮಾಚರಣೆ ಮಾಡಲಾಗುತ್ತದೆ. ಬಡವ, ಶ್ರೀಮಂತ, ಮೇಲು, ಕೀಳು ಎಂಬ ಭೇದವಿಲ್ಲದೆ ಸಾಲಾಗಿ ನಿಂತು ಪ್ರಾರ್ಥಿಸುವ, ದೇವರ ಮುಂದೆ ಎಲ್ಲರೂ ಸಮಾನರು ಎಂಬ ಸಂದೇಶ ಸಾರುವುದೇ ಈದ್ ನಮಾಜ್‌ನ ಸಾರ‘ಎಂದರು.

‘ಬಡವರಿಗೆ ಆಹಾರ ಧಾನ್ಯಗಳನ್ನು ವಿತರಿಸುವುದು ಕಡ್ಡಾಯ. ವೈಯಕ್ತಿಕ ಏಳಿಗೆಯ ಜತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಹಿತವನ್ನು ಬಯಸುವುದೇ ರಂಜಾನ್‌ನ ಉದ್ದೇಶ. ಈದ್ ಉಲ್ ಫಿತ್ರ್ ಬಡವರ ಪಾಲಿನ ಹಬ್ಬ’ ಎಂದು ತಿಳಿಸಿದರು.
ನಂತರ ಮಾತನಾಡಿದ ಪರಿಸರ ಪ್ರೇಮಿ ಅಪೂರ್ವ ಸುರೇಶ್ ‘ಪರಿಸರ ಉಳಿಸದಿದ್ದರೆ ಸರ್ವನಾಶ’ ಮನುಷ್ಯ ಪರಿಸರವನ್ನು ಉಳಿಸಲು ಮುಂದಾಗದಿದ್ದರೆ ಮುಂದೊಂದು ದಿನ ತಕ್ಕ ಬೆಲೆ ತೆರಬೇಕಾಗುತ್ತದೆ ದಿನೇ ದಿನೇ ವ್ಯಾಪಕವಾಗಿ ಹರಡುತ್ತಿರುವ ಪರಿಸರ ಮಾಲಿನ್ಯವು ಸಮಾಜವನ್ನು ಕಟುವಾಗಿ ಕಾಡುತ್ತಿರುವ ಸಮಸ್ಯೆ. ಇದಕ್ಕೆ ಪರಿಹಾರ ಕಂಡು ಕೊಳ್ಳದಿದ್ದರೆ ಮಾನವ ಕುಲ ನಾಶವಾಗುವುದರಲ್ಲಿ ಸಂಶಯವಿಲ್ಲ ಎಂದರು.

ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ಮಾತನಾಡಿ ಹಿಂದೂಗಳಾಗಲಿ ಮುಸಲ್ಮಾನರಾಗಲಿ ಕ್ರೈಸ್ತರಾಗಿ ಅವರ ಹಬ್ಬ ಹರಿದಿನದಲ್ಲಿ ಗಿಡಗಳನ್ನು ನೆಡುವ ಮೂಲಕ ಸಾರ್ಥಕ ಸಾರ್ಥಕವಾಗಿ ಹಬ್ಬವನ್ನು ಆಚರಿಸಿಕೊಳ್ಳಬೇಕು. ವ್ಯರ್ಥ ಕಾರ್ಯಕ್ರಮಗಳನ್ನು ಮಾಡುವ ಬದಲು ಪರಿಸರ ರಕ್ಷಣೆ ಮಾಡುವ ಕಾರ್ಯಕ್ರಮಗಳು ನಡೆಯಬೇಕು. ಹಿರಿಯರು ಕಿರಿಯರಿಗೆ ಉತ್ತಮ ಪರಿಸರವನ್ನು ಆಸ್ತಿಯನ್ನಾಗಿ ನೀಡಬೇಕು ಎಂದರು.

ತೀವ್ರವಾಗಿ ಕಾಡುತ್ತಿರುವ ತಾಪಮಾನ ಹೆಚ್ಚಳದಿಂದ ಜನತೆ ಕಂಗಾಲಾಗಿದ್ದಾರೆ. ಅಂತರ್ಜಲ ಮಟ್ಟ ಕುಸಿತದಿಂದಾಗಿ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಇದಕ್ಕೆಲ್ಲ ಪರಿಸರ ನಾಶವೇ ಕಾರಣವಾಗಿದೆ. ಗಿಡ ಬೆಳೆಸುವ ಮೂಲಕ ಹಾಗೂ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ತಿಳಿಸಿದರು.
ಪರಿಸರ ನಾಶದಿಂದಾಗಿ ಸಮಾಜ ಪ್ರತಿವರ್ಷ ಬರದ ಛಾಯೆಗೆ ಒಳಗಾಗುತ್ತಿರುವುದು ಆತಂಕದ ವಿಷಯ. ಇದನ್ನು ಗಂಭೀರವಾಗಿ ಪರಿಗಣಿಸಬೇಕಾದುದು ಸಮಾಜದ ಹೊಣೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪಾತಿ ಫೌಂಡೇಶನ್ ಅಧ್ಯಕ್ಷರಾದ ಎಂಡಿ ಪಾರ್ಥಸಾರಥಿ, ಪರಿಸರ ಪ್ರೇಮಿ ಅಪೂರ್ವ ಸುರೇಶ್ ,ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ರಾಮಪ್ರಸಾದ್, ಸಂತೋಷ್, ಹರೀಶ್ ನಾಯ್ಡು, ತೀರ್ಥಕುಮಾರ್, ಹಾಗೂ ಮುಸಲ್ಮಾನ್ ಬಾಂಧವರು ಹಾಗೂ ಇನ್ನಿತರರು ಹಾಜರಿದ್ದರು

Leave a Reply

Your email address will not be published. Required fields are marked *