News (ಸುದ್ದಿ)
ಪಡುವಾರಳ್ಳಿ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಸಾವಿರ ಜನರಿಗೆ ಕಿಟ್ ವಿತರಣೆ: ಸುತ್ತೂರು ಶ್ರೀ, ಆದಿಚುಂಚನಗಿರಿ ಶ್ರೀಗಳು ಭಾಗಿ | heggaddesamachar.com

ಕೊರೋನಾ ಲಾಕ್ ಡೌನ್ ಹಿನ್ನಲೆ ಸಂಕಷ್ಟದಲ್ಲಿರುವ
ಜನರಿಗೆ ಮಾಜಿ ಶಾಸಕ ವಾಸುರವರು ಆಹಾರ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ಮೈಸೂರಿನ ಪಡುವಾಡಹಳ್ಳಿಯ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಸುತ್ತೂರು ಶ್ರೀಗಳು ಹಾಗೂ ಅದಿಚುಂಚನಗಿರಿ ಶ್ರೀಗಳು, ವಾಸುರವರು ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಬಾಗಿನ ನೀಡಿ ನಂತರ ಆಹಾರ ಕಿಟ್ ವಿತರಿಸಿದರು.
ಚಾಮರಾಜ ಕ್ಷೇತ್ರದ ಜನರಿಗೆ ಟೋಕನ್ ನೀಡಿ ಸಾಮಾಜಿಕ ಅಂತರ ಕಾಯ್ದುಕೊಂಡು ಆಹಾರ ಕಿಟ್ ವಿತರಿಸುತ್ತಿದ್ದೇವೆ.ನಾವು ಯಾವುದೇ ಬ್ಯಾನರ್ ಹಾಕಿ,ಸಂಸ್ಥೆ ಹೆಸರು ಹಾಕಿ ಕಿಟ್ ವಿತರಿಸುತ್ತಿಲ್ಲ.ಬಡವರನ್ನು ಗುರುತಿಸಿ ಕಿಟ್ ಹಂಚುತ್ತಿದ್ದೇವೆ.ನಾನು ಯಾರಿಗೂ ಒಂದು ಟೋಕನ್ ಹಂಚಿಕೆ ಮಾಡಲಿಲ್ಲ.ಪಡುವರಹಳ್ಳಿಯ ಎಲ್ಲಾ ಮುಖಂಡರು ಅರ್ಹರಿಗೆ ಟೋಕನ್ ನೀಡಿದ್ದಾರೆ.
ನಂತರದ ದಿನಗಳಲ್ಲಿ ಹಂತ ಹಂತವಾಗಿ ನನಗೆಷ್ಟು ಆಗುತ್ತೋ ಅಷ್ಟು ಆಹಾರ ಕಿಟ್ ವಿತರಿಸುವುದಾಗಿ ವಾಸುರವರು ಮಾಹಿತಿ ನೀಡಿದರು.