ನೇಪಥ್ಯಕ್ಕೆ ಸರಿಯದಿರಲಿ ಕುಂಬಾರಿಕೆ : heggaddesamachar

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ   

ಪೂರ್ವಜರಿಂದ ಬೆಳೆದು ಬಂದ ಸಹಸ್ರಾರು ಸಂಖ್ಯೆಯ ಕಲೆ, ಕಾಯಕಗಳು ಅಳಿವಿನಂಚಿಗೆ ಸಾಗುತ್ತಿದಂತೆ. ಆಧುನಿಕತೆಯ ಅಬ್ಬರಕ್ಕೆ ಸಿಲುಕಿ  ನಮ್ಮ ನಾಡಿನ ಕೆಲ ಕುಲಕಸುಬು  ಕಣ್ಮರೆಯಾದಂತೆ ಕುಂಬಾರಿಕೆಯಂತಹ ಗುಡಿ ಕೈಗಾರಿಕೆಯು ನಶಿಸಿಹೋಗುವ ಹಂತದಲ್ಲಿದೆ. ಮಡಿಕೆ ಮಾಡುವ ಕಲೆ  ಪುರಾತನ ಕಾಲದಿಂದಲೂ ಕುಂಬಾರ ಜನಾಂಗಕ್ಕೆ ಕೊಡುಗೆಯಾಗಿ ಒಲಿದ ಅಪರೂಪದ ಕಲೆ.ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ಆಧುನಿಕತೆ  ಹೆಚ್ಚಾದಂತೆ ಮಣ್ಣಿನ ಪಾತ್ರೆಗಳು ಮೊದಲಿನಂತೆ ವ್ಯಾಪಾರ ಆಗುತ್ತಿಲ್ಲ. ಜನ ಬಳಸುತ್ತಿಲ್ಲ ಒಂದು ಕಾಲದಲ್ಲಿ ಅಡುಗೆ ಮನೆಯ ಪಾರುಪಥ್ಯವಹಿಸಿದ್ದ ಮಣ್ಣಿನ ಮಡಿಕೆ ಕುಡಿಕೆಗಳು ಇಂದು ಮನೆಯ ಹೊಸ್ತಿಲು, ಅಂಗಳ, ಊರುದಾಟಿ ಮಾಯವಾಗಿ  ಹೆಚ್ಚಿನ ಆದಾಯದ‌ ನಿರೀಕ್ಷೆ ಮಾಡಲು ಅಸಾಧ್ಯ. ಮಣ್ಣಿನ ಮಡಕೆ ಮೊದಲಿನಂತೆ ವ್ಯಾಪಾರ ಆಗುತ್ತಿಲ್ಲ, ಹಿರಿಯರು ಮಾಡಿಕೊಂಡು ಬಂದ  ವೃತ್ತಿ ಲಾಭದಾಯಕವಲ್ಲದ ಕಾರಣ ಯುವ ಜನಾಂಗ ಈ ವೃತ್ತಿ ಯಿಂದ ದೂರ ಸರಿಯುತ್ತಿದೆ. ಕುಂಬಾರಲ್ಲಿ ವಸ್ತು ತಯಾರಿಕಾ ಸಾಮರ್ಥ್ಯ – ಪ್ರತಿಭೆ ಇದ್ದರು ಉತ್ಪನ್ನಗಳ ಮಾರಾಟ- ಮಾರುಕಟ್ಟೆಗೆ ಅಗತ್ಯ ವ್ಯವಸ್ಥೆ ನಿರೀಕ್ಷಿತ ಆದಾಯವಿಲ್ಲದೆ ಇನ್ನೊಂದು ವೃತ್ತಿಗೆ ವಲಸೆ ಹೋಗುವ ಸ್ಥಿತಿ ಇದೆ  ಕುಂಬಾರಿಕೆಯ ಕಲಾಕೌಶಲ್ಯವನ್ನು ಉಳಿಸುವ ಅಗತ್ಯವಿದೆ. ಸಂಪ್ರದಾಯಿಕ ವೃತ್ತಿಯೊಂದು ಮರೆಯಾಗಲೂ, ಕಲೆಯೊಂದು ಅಳಿಯಲು ಬಿಡಬಾರದು. ಪ್ರಕೃತಿಯನ್ನು  ದಿಕ್ಕರಿಸಿ  ನಡೆದ ಮಾನವ  ಇದೀಗ ಪುನಃ ಆರೋಗ್ಯಕ್ಕೆ ಮರಳಿ ಮಣ್ಣಿನೆಡೆಗೆ ಹೊರಳುತ್ತಿದ್ದಾನೆ ಎನ್ನುವುದಕ್ಕೆ ಉದಾಹರಣೆಯಾಗಿ ಕೆಲವೆಡೆ ಇನ್ನೂ ಜೀವಂತವಾಗಿ  ಕುಂಬಾರಿಕೆ ಉಳಿಸಿಕೊಳ್ಳಲು ಹಗಲಿರುಳು ಶ್ರಮಿಸುವ ಕುಂಬಾರ ಕುಟುಂಬವು ಇದೆ.

     ದಶಕಗಳ ಹಿಂದೆ ಹಳ್ಳಿಗಳಲ್ಲಿ  ಕುಂಬಾರಿಕೆಯ ಕುಲಕಸುಬು  ನಂಬಿಕೊಂಡು ಅದೇ ವೃತ್ತಿಯಲ್ಲಿ  ತೃಪ್ತಿ ಯನ್ನು ಕಾಣುತ್ತಿದ್ದರು.  ಇತ್ತೀಚಿನ ದಿನಗಳಲ್ಲಿ ಆಧುನಿಕ ಪಾತ್ರೆಗಳ ನಡುವೆ ಸಿಲುಕಿ ಮಣ್ಣಿನ ಪಾತ್ರೆಗಳು ನಲುಗಿವೆ. ಮಣ್ಣಿನ ಪಾತ್ರೆಗಳು ಪರಿಸರ  ಸ್ನೇಹಿ.  ಮಡಿಕೆ ಬೇಡಿಕೆ ಇದ್ದರು ಲಾಭದಾಯಕವಾದರು ಈ ಉದ್ಯಮ ಸರಿದುಗಿಸಿ ಕೊಂಡು ಹೋಗುದು ಕಷ್ಟ. ಮಣ್ಣಿನ ಪಾತ್ರೆಗಳ ತಯಾರಿಸಲು  ಬೇಕಾದ ಮೂಲವಸ್ತು  ಜೇಡಿ ಮಣ್ಣು ಹೇರಳವಾಗಿ ಲಭ್ಯವಿಲ್ಲದೆ. ಜೇಡಿಮಣ್ಣಿನ ಕೊರತೆ ಇದೆ. ಇತ್ತೀಚಿನ 2 ದಶಕಗಳಿಂದ ಭೂರಮೆಯ ಗರ್ಭಕ್ಕೆ ಕೃತಕ ರಾಸಾಯನಿಕ , ಕ್ರಿಮಿನಾಶಕ ಸಿಂಪಡಿಸಿ ಎಲ್ಲಾ ತರದ  ಮಣ್ಣು ತನ್ನ ಮೂಲ ಸ್ವಭಾವವನ್ನು ಕಳೆದುಕೊಳ್ಳುತ್ತಿದೆ. ಅದರಲ್ಲೂ ಸೂಕ್ಷ್ಮವಾದ ಜೇಡಿಮಣ್ಣು ಇನ್ನೂ ಅಪಾಯದಲ್ಲಿದೆ. ಕುಂಬಾರಿಕೆಗೆ ಮಣ್ಣಿನಷ್ಟೆ ಅಗತ್ಯ ವಾದದ್ದು ಕಟ್ಟಿಗೆ. ಅರಣ್ಯ ಇಲಾಖೆ ಕಟ್ಟಿಗೆ ಕಡಿಯುವಿಕೆಗೆ ನಿರ್ಬಂಧ ಹೇರಿದ‌‌ ಮೇಲೆ  ಕುಂಬಾರಿಕೆ ಸಂಕಷ್ಟಕ್ಕೆ  ಹೆಚ್ಚಿನ ಪ್ರಮಾಣದಲ್ಲಿ ಸಿಲುಕಿದೆ.

      ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಗಾದೆ ಮಾತು ಮಡಿಕೆ ತಯಾರಿಕೆಯ ಹಿಂದಿನ ಶ್ರಮವನ್ನು ಪರಿಗಣಿಸಿಯೇ ಈ ಗಾದೆ ಮಾತು ಹುಟ್ಟಿಕೊಂಡಿದೆ. ಮಣ್ಣು ಹದಗೊಳಿಸುವುದು, ಮಡಿಕೆ ಸುಡುವುದು, ಜೊಡಿಸಿಡುವಾಗ ಎಷ್ಟೇ ಜಾಗ್ರತೆ ವಹಿಸಿದರು ಪರಿಕಗಳು ಹಾಳಾಗುತ್ತದೆ. ಆರೋಗ್ಯಕ್ಕೆ ಹಿತೆನಿಸಿದ  ಮಣ್ಣಿನ ಪಾತ್ರೆಗಳು  ವಿರಳವಾಗಿರಬಹುದು  ನೀರಿನ ‌ಕೊಡ  ಮತ್ತು ಹೂಜಿ ಇಂದಿಗೂ ತನ್ನ ಆದ್ಯತೆಯನ್ನು ಉಳಿಸಿಕೊಂಡಿದೆ.  ದೀಪ ಹಚ್ಚುವ ಹಣತೆ, 3 ದಶಕಗಳ ಹಿಂದೆ ಹೆಚ್ಚಿನ ಮನೆಗಳಲ್ಲಿ ಇರುತ್ತಿದ್ದ  ಸ್ನಾನದ ನೀರು ತುಂಬಿಸುವ ಹರಿ, ಅನ್ನ ಬೇಯಿಸುವ ಮಡಿಕೆ, ಪದಾರ್ಥಮಾಡುವ ಅಳಗೆ(ಬಿಸಲೆ),  ಹಣತೆ, ಗಿಂಡಿ ,ದೂಪ, ಹೂದಾನಿ, ದೀಪಸ್ತಂಬ, ಬಾಣಲೆ, ದೊಸೆಹೊಯ್ಯುವ ಓಡು ಹೀಗೆ ಹತ್ತು ಹಲವು ರೂಪದಲ್ಲಿ ಮಣ್ಣಿನ ಪಾತ್ರೆಗಳು ಲಭ್ಯ ವಿದ್ದವು.ಆರೋಗ್ಯ ದಾಯಕ  ಸೊಗಸಾದ ಮೂಲ ರುಚಿ‌ ಕೆಡಿಸದ  ಮಣ್ಣಿನ ಪರಿಕಗಳಿಗೆ ಆದ್ಯತೆ ನೀಡಿದರೆ ಉತ್ತಮ.  ಸ್ಟಿಲ್ ಪ್ಯೆಬರ್, ಅಲೂಮಿನಿಯಂ, ಪ್ಲಾಸ್ಟಿಕ್ ಹಾವಳಿಯಲ್ಲಿ ಮಣ್ಣಿನ ಕುಡಿಕೆಗಳನ್ನು ಯಾರು ಕೊಂಡು ಉಪಯೋಗಿಸುತ್ತಾರೆ. ಎಂಬ ಭಾವನೆಯನ್ನು ಆದಷ್ಟು ಬೇಗ ಬದಲಾಯಿಸಿ ಕೊಂಡರೆ ಔಷಧೀಯ ಗುಣಗಳ ಆಗರವಾಗಿರುವ ಮಣ್ಣಿನ ಪಾತ್ರೆಗಳಿಗೆ ಬೆಲೆ ಬರಲಿದೆ. ಇದರಿಂದ ಕುಂಬಾರರ ಆರ್ಥಿಕ ಸ್ಥಿತಿ ಸುದಾರಣೆ‌ಯಾಗುತ್ತದೆ. ಇತ್ತೀಚೆಗೆ ಆಧುನಿಕ ಮನೋಭಾವ ಹಾಗೂ ಅಭಿರುಚಿಗೂ ತಕ್ಕುದಾಗಿ ಕುಂಬಾರಿಕೆ ಕಲೆಯೊಳಗೆ ಆಧುನಿಕ ವಿನ್ಯಾಸ ಮಡಿಕೆಗಳು ತಯಾರಾಗುತ್ತವೆ. 

      ತಯಾರಿಸುವ ಕ್ರಮ==  ಜೇಡಿ ಮಣ್ಣನ್ನು 2 ದಿನ ಬಿಸಿಲಿನಲ್ಲಿ ಒಣಗಿಸಿ  ಒಂದು ದಿನ ನೀರಿನಲ್ಲಿ ನೆನೆ ಹಾಕಿ ಮಣ್ಣು ಹದಗೊಳಿಸಿ  ನಂತರ ತಿಗರಿ (ಚಕ್ರ) ದಿಂದ ಮಣ್ಣು ತಿರುಗಿಸಿ ಪಾತ್ರ ತಯಾರಿಸುತ್ತಾರೆ.ಹಳೆಯ‌ ಮರದ‌ ಚಕ್ರದ  ಬದಲು ಹೊಸದಾದ ಎಲೆಕ್ಟ್ರಾನಿಕ್ ವೀಲ್ ಬಳಸಿ ಮಣಿ ನ ಪಾತ್ರೆಗೆ ಆಕಾರ ನೀಡುತ್ತಾರೆ.  ಅಂದರೆ ಮಣ್ಣಿಗೆ ನೀರು ‌ಹಾಕಿ ಕಲಸಿದಾಗ ಅದು ಅಂಟಾದ ಗುಣ ಹೊಂದಿರುವು ದು ಅಗತ್ಯ ಅದನ್ನು ಚಕ್ರದ‌ ಮೇಲಿಟ್ಟು ವಿವಿಧ ಆಕಾರದ ಮಡಿಕೆಗಳನ್ನು ಸುಮಾರು 1 ರಿಂದ 2 ದಿನ ಬಿಸಿಲಿನಲ್ಲಿ ಒಣಗಿಸಿ ಮಡಿಕೆ ಕುಡಿಕೆಗಳಿಗೆ ರೂಪ ಕೊಡುತ್ತಾರೆ.  ಬಿಸಿಲಿನಲ್ಲಿ ಒಣಗಿಸಿ ನಂತರ ಕಟ್ಟಿಗೆ ಒಲೆಯಲ್ಲಿ  ಪಾತ್ರೆ ಜೋಡಿಸಿ ಹದವಾಗಿ ತಯಾರಾದ  ಪಾತ್ರೆಯ ಒಳಹೊರಗೆಲ್ಲ  ಬೆಂಕಿಹಾಕಿ ಕಾಯಿಸ ಬೇಕಾಗುತ್ತದೆ. ಇಲ್ಲಿ ಮಡಿಕೆ ಬೆಯ್ಯುವ ಹದವೂ ಮುಖ್ಯ ವಾಗಿರುತ್ತದೆ .ಅರೆ ಬೆಂದರೆ ಮಡಿಕೆ ಬಿರುಕು ಬಿಡುತ್ತದೆ.  ಮಣ್ಣಿನ ಪಾತ್ರೆಗಳಲ್ಲಿ ಪಾಲಿಷ್ ಮಾಡಿದ ಪಾತ್ರೆ ಹಾಗೂ ಪಾಲಿಷ್ ಮಾಡದ ಪಾತ್ರೆ ಗಳು ಎಂಬ ಎರಡು ವಿಧಗಳಿವೆ. ಪಾಲಿಷ್ ಮಾಡಿದ ಪಾತ್ರೆಗಳು  ನೀರು ಹೀರಿಕೊಳ್ಳುವುದು  ಹಾಗೂ ಶಾಖಪರಿಸರಿಸುವ  ಸಾಮರ್ಥ್ಯ ಕಡಿಮೆಯಾಗುತ್ತದೆ. ಮಡಿಕೆಗೆ ಬೇಡಿಕೆ ಇದ್ದರು ಲಾಭದಾಯಕವಾಗಿದ್ದರು. ಈ ಉದ್ಯಮ ನಿರ್ಮಿಸುವುದು ಕಷ್ಟ ಹಿಂದೆಲ್ಲಾ ಮಡಿಕೆ ತಯಾರಿಸಿ ನಂತರ ಅವುಗಳನ್ನು ಮನೆಗೆ ಹೊತ್ತು ಮಾರುತ್ತಿದ್ದರು. ಆದರೆ ಈಗ ಆ ಪರಿಸ್ಥಿತಿ ಇಲ್ಲ. 

      ಪಾತ್ರೆ ಮಾಡುವ ವಿಧಾನ ನಿರಂತರ ಅಭ್ಯಾಸ ಶ್ರಮ ,ತಾಳ್ಮೆ, ಹವ್ಯಾಸ, ಏಕಾಗ್ರತೆ ಆಸಕ್ತಿಗಳಿಂದ ಅಳಿವಿನ ಅಂಚಿನಲ್ಲಿರುವ ಕುಂಬಾರಿಕೆ ಕಾಯಕದ ಅಪರೂಪದ ಕಲೆಯನ್ನು 2- 3 ದಶಕಗಳ ಹಿಂದೆ ಮನೆ  ಮಂದಿ ಸೇರಿ ಬಿಡುವಿನ ಸಮಯದಲ್ಲಿ ಮಡಿಕೆ ಮಾಡಲು ಸ್ಥಳೀಯವಾಗಿ ಸಿಗುತ್ತಿದ್ದ ಜೇಡಿ ಮಣ್ಣು ಬಳಸುತ್ತಿದ್ದರು.  ಆದರೆ ಈಗ ಕಟ್ಟಿಗೆ ಕೊರತೆ ,ಮಣ್ಣಿನ ಕೊರತೆಯಿಂದಾಗಿ ಮಣ್ಣು ಪಾತ್ರೆ ತಯಾರಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಯುತ್ತದೆ. ಆದರೆ ಕುಂಬಾರಿಕೆ ಉಳಿವಿಗಾಗಿ ಕೇಳ ಬೇಕಾದ ಎತ್ತರದ ಧ್ವನಿ  ಸರಿಯಾಗಿ ಕೇಳಿಸಿ ಕೊಂಡಿಲ್ಲ. ಆರೋಗ್ಯದಾಯಕ ಸಂಪ್ರದಾಯಿಕ ಬದ್ದ ಕಲೆಯು ಅಳಿವಿನಂಚಿನಲ್ಲಿದ್ದು.ದೇಶಿವಸ್ತುಗಳು ತೆರೆ ಮರೆಗೆ ಸರಿಯುತ್ತಿರುವುದು ದುಃಖದಾಯಕ.

      ಬೆಂಗಳೂರಿನ ಕುಂಬಾರಿಕೆಗೆ ಹೆಸರು ವಾಸಿಯಾಗಿದ್ದ ಶಿವಾಜಿ  ನಗರದ  ಬೆನ್ಸನ ಬಡಾವಣೆಯ ಪಟರಿಟೌನ್( ಕುಂಬಾರರ ಪಟ್ಟಣ) ವಿದೇಶದಲ್ಲಿ ಹೆಸರು ಗಳಿಸಿದೆ. ಇಲ್ಲಿನ ಮಡಿಕೆ ಮಾಡುವ ಕಲೆಯನ್ನು ವಿದೇಶಿ ಗರು ಕಲಿತು ಹೋಗುತ್ತಾರೆ.  ಬೆಳಗಾವಿ ಜಿಲ್ಲೆಯ ಕಾನ ಪುರದಲ್ಲಿ. ” ಕೇಂದ್ರೀಯ  ಗ್ರಾಮ ಕುಂಬಾರಿಕೆ ಸಂಸ್ಥೆ ಇಲ್ಲಿ ಮಾನವ ಚಲಿತ ಚಕ್ರ ಗಳಲ್ಲದೆ ವಿದ್ಯುತ್ ಚಲಿತ ಚಕ್ರ ಗಳನ್ನು ಬಳಸಿ ಮಣ್ಣಿನ ಕರಕುಶಲ ವಸ್ತುಗಳನ್ನು ಸಿದ್ದಪಡಿಸಲಾಗುತ್ತದೆ. ಕುಂದಾಪುರ, ವಕ್ವಾಡಿ, ವಾಲ್ತೂರು, ಆಲೂರು, ಕಾಲ್ತೊಡು, ಆಜ್ರಿ, ಬಹ್ಮಾವರ, ಪೆರ್ಡೂರು, ಹೆಬ್ರ ಹಾಗೂ ಆಸುಪಾಸಿನ ಊರುಗಳಲ್ಲಿ ನೂರಾರು ಮಂದಿ ಇಂದಿಗೂ ತಮ್ಮ ಕುಲ ಕಸುಬಿನ ಆಶ್ರಯದಲ್ಲಿ ಬದುಕು ಸಾಗಿಸುತ್ತಾ ಈ ಪುರಾತನ ಕಲೆಯನ್ನು ಅಳಿವಿನಂಚಿಗೆ ಸಾಗಲು ಬಿಡುತ್ತಿಲ್ಲ.

ಇತ್ತೀಚೆಗೆ ಮಣಿನ ಕಪ್ಪ್ ನಲ್ಲಿ  ತಯಾರಿಸುವ ತಂದುರಿ‌ ಚಹಾ   ತನ್ನ ಜನಪ್ರಿಯತೆಯನ್ನು ಹೆಚ್ಚಿಸಿ ಕೊಂಡಿದ್ದು ಸಾಧಾರಣ ಚಹಾ ಗಿಂತ ಹೆಚ್ಚಿನ ಸ್ವಾದಿಷ್ಟತೆಯಿಂದ ಕೂಡಿದೆ . ಪುಟ್ಟ ಪುಟ್ಟ ಮಣಿನ ಕುಡಿಕೆ ಗಳನ್ನು ತಂದೂರಿ ಒಲೆಯಲ್ಲಿ ಚನ್ನಾಗಿ ಕಾಯಿಸಿ  ಬಿಸಿ ಚಹಾವನ್ನು ಈ ಕುಡಿಕೆಗೆ ಸುರಿದಾಗ  ನೊರೆಯುಕ್ಕಿ ರುಚಿಕರವಾದ ಚಾಹ ತಯಾರಾಗುತ್ತದೆ. ಮಣ್ಣು ಪಾತ್ರೆ ಯಲ್ಲಿ ಮಾಡಿದ ಮೀನಿನ  ಸಾರಂತು ಬಲುರುಚಿ.

    ಕುಂಬಾರ ಬದುಕು ಕಿತ್ತುಕೊಂಡ ಕೊರೊನಾ =  ಪ್ರತಿ ವರ್ಷ  ಬೇಸಿಗೆ ಕಾಲದಲ್ಲಿ ಒಂದಿಷ್ಟು ಮಾಡಿಕೆ  ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದ ಕುಂಬಾರಣ್ಣನಿಗೆ ಈ ವರ್ಷ ನಿರಾಶೆ ಆಗಿದ್ದು. ಬೇಸಿಗೆ ಆರಂಭಕ್ಕೂ ಮುನ್ನ ಭರ್ಜರಿ ಯಾಗಿ ನಡೆಯುತ್ತಿದ್ದ ಮಣಿನ ಪರಿಕಗಳ ಮಾರಾಟ ಈ ಬಾರಿ  ಆಗೆ ಇಲ್ಲ. ಕೊರೊನಾ  ನಿಯಂತ್ರಣ ಹಿನ್ನೆಲೆಯಲ್ಲಿ ಮಡಿಕೆಗಳ ಜೊತೆ ಹೂಜಿ, ದೀಪ, ಪಣತಿ, ಮಣಿನ ಅಲಂಕಾರ ವಸ್ತುಗಳ ಖರಿದಿಯತ್ತ  ಗ್ರಾಹಕರು ‌ಮುಖ ಮಾಡಿಲ್ಲ.ಒಟ್ಟಿನಲ್ಲಿ ಉಳಿಯ ಬೇಕಾದ  ಕಲೆಯ ಉಳಿಯಲೇ ಬೇಕು. ನೇಪಥ್ಯಕ್ಕೆ ಸರಿಯದಿರಲಿ ಕುಂಬಾರರಿಕೆ ಎನ್ನುವ ಆಶಯ.

Leave a Reply

Your email address will not be published. Required fields are marked *