
ಗೃಹಿಣಿ ಎರಡನೇ ಮದುವೆಯಾದ ೫ ತಿಂಗಳಲ್ಲೆ ನೇಣಿಗೆ ಶರಣು.
ಮೈಸೂರಿನ ಗೌಸಿಯಾ ನಗರದಲ್ಲಿ ಘಟನೆ.
ಹೀನಾಕೌಸರ್(೨೭) ಆತ್ಮಹತ್ಯೆಗೆ ಶರಣಾದ ದುರ್ದೈವಿ.
ಮೂರು ಮಕ್ಕಳ ತಾಯಿಯಾಗಿದ್ದ ಹೀನಾಕೌಸರ್ ಮೊದಲ ಗಂಡನಿಗೆ ಡೈವೋರ್ಸ್ ನೀಡಿ ಆಟೋ ಡ್ರೈವರ್ ಒಬ್ಬನ ಕೈ ಹಿಡಿದಿದ್ದಳು.
ಹಳೇ ಗಂಡನ ನೆನಪಿನಿಂದ ಹೊರಬರಲಾರದೆ ಕೊರಗುತ್ತಿದ್ದ ಹೀನಾ ಕೌಸರ್ ಗೆ ಮನೆ ಪಕ್ಕದಲ್ಲಿದ್ದ ಪ್ರಾವಿಷನ್ ಸ್ಟೋರ್ ನ ಮಾಲೀಕರೊಬ್ಬರ ಆಡಿದ ಮಾತುಗಳಿಗೆ ಬೇಸತ್ತಿದ್ದರೆಂದು ಹೇಳಲಾಗಿದೆ.
ಇದೇ ನೋವಿನಲ್ಲಿ ಹೀನಾಕೌಸರ್ ನೇಣಿಗೆ ಶರಣಾಗಿದ್ದಾಳೆ.
ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post Views:
338