ನಿಸ್ವಾರ್ಥ ಸೇವೆಗೆ ನಮ್ಮದೊಂದು ಸಲಾಂ – ಸಂಸದ ಪ್ರತಾಪ್ ಸಿಂಹ: heggaddesamachar

ನಿಸ್ವಾರ್ಥ ಸೇವೆಗೆ ನಮ್ಮದೊಂದು ಸಲಾಂ. ಸಂಸದ ಪ್ರತಾಪ್ ಸಿಂಹ ವಿಶ್ವಾಸದ ನುಡಿ. ಕೊರೊನಾ ವಿರುದ್ದ ಹೋರಾಟ ನಡೆಸುತ್ತಿರುವ ಕೊರೊನಾ ವಾರಿಯರ್ಸ್ ಗಳಿಂದಲೇ ನಾವು ಇಲ್ಲಿದ್ದೇವೆ.
ಅದೆಷ್ಟೋ ಖಾಸಗೀ ಕ್ಲಿನಿಕ್ ನಲ್ಲಿರುವ ವೈದ್ಯರು, ಕೊರೊನಾಗೆ ಹೆದರಿ ಕ್ಲಿನಿಕ್ ಬಂದ್ ಮಾಡಿಕೊಂಡು ಮನೆಯಲ್ಲಿದ್ದಾರೆ. ಆದರೇ ಆಸ್ಪತ್ರೆಯ ನರ್ಸ್ ಗಳು, ಆಶಾಕಾರ್ಯಕರ್ತರು ವೈರಸ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.
ಅವರ ಆತ್ಮ ವಿಶ್ವಾಸಕ್ಕೆ ,ಅವರ ಧೈರ್ಯಕ್ಕೆ ಮೆಚ್ಚಲೇಬೇಕು. ಸಂಸದ ಪ್ರತಾಪ್ ಸಿಂಹ ಹೇಳಿಕೆ. ಆರೋಗ್ಯ ಇಲಾಖೆಯ ಡಿ ಗ್ರೂಪ್ ನೌಕರರು ಹಾಗೂ ಹೋಂ ಗಾರ್ಡ್ಸ್ ಗಳಿಗೆ ಆಹಾರ ಕಿಟ್ ವಿತರಣೆ. ಮೈಸೂರು ಕಲಾ ಮಂದಿರದಲ್ಲಿ ನಡೆಯುತ್ತಿರೋ ಕಾರ್ಯಕ್ರಮ.

60 ಜನ ಹೋಂ ಗಾರ್ಡ್ಸ್,40 ಜನ ಡಿ ಗ್ರೂಪ್ ನೌಕರರಿಗೆ ಕಿಟ್ ವಿತರಣೆ. ಹೋಂ ಗಾರ್ಡ್ಸ್ ಗೆ,ಪತ್ರಿಕಾ ವಿತರಕರಿಗೆ, ಆರೋಗ್ಯ ಸಹಾಯಕರಿಗೆ ಸಾಂಕೇತಿಕವಾಗಿ ಸಚಿವ ಎಸ್.ಟಿ. ಸೋಮಶೇಖರ್,ಅರಣ್ಯ ಸಚಿವ ಆನಂದ್ ಸಿಂಗ್ ಒಟ್ಟಿಗೆ ಕಿಟ್ ವಿತರಣೆ. ಆರೋಗ್ಯ ಕಾಪಾಡುತ್ತಿರುವ ಕೊರೋನಾ ವಾರಿಯರ್ಸ್ ಗೆ ಆಹಾರ ಕಿಟ್ ವಿತರಿಸುತ್ತಿದ್ದೇವೆ. ಸಚಿವ ಎಸ್ .ಟಿ.ಸೋಮಶೇಖರ್ ರವರ ನೇತೃತ್ವದಲ್ಲಿ ವಿತರಿಸಲಾಗುತ್ತಿದ್ದೆ.
ಜೀವದ ಅಂಗೂ ತೊರೆದು ಕೆಲಸ ನಿರ್ವಹಿಸುತ್ತಿರುವ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ಈ ವರೆಗೂ ಏನ್ ಸಾಧನೆ ಮಾಡಿದ್ದೀರಿ ಅದಕ್ಕೆ ಜಿಲ್ಲಾಡಳಿತದಿಂದ ಅಭಿನಂದನೆ ಸಲ್ಲಿಸುತ್ತೇನೆ. ಕೊರೊನಾ ವಾರಿಯರ್ಸ್ ಕಾರ್ಯ ಕ್ಷಮತೆ ಕುರಿತು ಶ್ಲಾಘಿಸಿದ ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್. ಸಂಸದ ಪ್ರತಾಪ್ ಸಿಂಹ,ಶಾಸಕ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್,ಶ್ರೀವತ್ಸ,ಎಎಸ್ ಪಿ ಸ್ನೇಹ,ಡಿಎಚ್ ಓ ಸೇರಿದಂತೆ ಇತರರು ಭಾಗಿ.
